ಮೊಹರಂ ಹಬ್ಬದಲ್ಲಿ ಶಾಂತತೆ ಪಾಲಿಸಿ : ಪಿಎಸ್‌ಐ
ಸಂಜೆವಾಣಿ ವಾರ್ತೆ
ಕುಕನೂರು, ಜು.07: ತಾಲೂಕಿನಾದ್ಯಂತ ಮೊಹರಂ ಹಬ್ಬದಲ್ಲಿ ಎಲ್ಲರೂ ಶಾಂತತೆಯನ್ನು ಪಾಲಿಸಿಕೊಂಡು ಹಬ್ಬವನ್ನು ಆಚರಣೆ ಮಾಡಬೇಕು ಎಂದು ಪಿಎಸ್‌ಐ ಟಿ.ಗುರುರಾಜ ಹೇಳಿದರು.
ಪಟ್ಟಣದ ಪೋಲಿಸ್ ಠಾಣೆಯ ಆವರಣದಲ್ಲಿ ಶನಿವಾರ ಸಂಜೆ ನಡೆದ ಮೊಹರಂ ಹಬ್ಬದ ಶಾಂತಿಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಸಂಪ್ರದಾಯದಂತೆ ಪ್ರತಿಯೊಂದು ಹಬ್ಬವು ಶ್ರೇಷ್ಠವಾದದ್ದು ಹಿಂದು-ಮುಸ್ಲೀಂ ಬಾಂಧವರು ಅಣ್ಣ-ತಮ್ಮಂದಿರಂತೆ ಪ್ರತಿಯೊಂದು ಹಬ್ಬವನ್ನು ಆಚರಣೆ ಮಾಡಬೇಕು. ಮೊಹರಂ ಹಬ್ಬದಲ್ಲಿ ಕೇಲವರು ಕಿಡಿಗೆಡಿಗಳು ಸಣ್ಣವಿಷಯವನ್ನು ಮನಸ್ಸಲ್ಲಿಟ್ಟುಕೊಂಡು ಹಬ್ಬದ ನೆಪದಲ್ಲಿ ಗಲಾಟೆ ಮಾಡುವದು, ಜಗಳವಾಡುತ್ತಾರೆ ಅದು ಕಾನೂನಿನ ಅಡಿಯಲ್ಲಿ ಅಪರಾಧವಾಗುತ್ತದೆ. ಕಾನೂನು ಮೀರಿ ನಡೆದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೇಗೆದುಕೊಳ್ಳಲಾಗುವದು ಎಂದು ಹೇಳಿದರು.
ಮುಖಂಡರಾದ ರಶೀದ್‌ಸಾಬ ಹಣಜಗಿರಿ, ಗಗನ್ ನೋಟಗಾರ ಮಾತನಾಡಿ, ಕುಕನೂರು ತಾಲೂಕಿನಲ್ಲಿ ಹಿಂದು-ಮುಸ್ಲೀoಬಾಂಧವರು ಎಲ್ಲಾ ಹಬ್ಬವನ್ನು ಒಟ್ಟುಗೂಡಿ ಆಚರಣೆ ಮಾಡುತ್ತೇವೆ ಇಲ್ಲಿ ಎಲ್ಲರೂ ನಾವು ಒಂದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಳಪತಿ ವೀರಯ್ಯ ತೊಂಟದಾರ್ಯಮಠ, ಜಿ.ಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಮುಖಂಡರಾದ ರಶೀದ್‌ಸಾಬ ಮುಭಾರಕ್,  ಯಮನೂರಪ್ಪ ಗೊರ್ಲೆಕೊಪ್ಪ, ಹಮಾಲರ ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ, ಬಸವರಾಜ ಮಂಡಲಗೇರಿ, ವಿರೇಶ ಸಬರದ್, ಮಲ್ಲಿಕಾರ್ಜುನ ಗೊರ್ಲೆಕೊಪ್ಪ, ಶಶಿಧರ ಭಜಂತ್ರಿ, ಸಿದ್ದಪ್ಪ ದೊಡ್ಡಮನಿ, ಹನುಮಂತಪ್ಪ ಭಜಂತ್ರಿ, ಮಂಜುನಾಥ ನಿಲಪ್ಪನವರ್ ಸೇರಿದಂತೆ ಅನೇಕರು ಇದ್ದರು.
One attachment • Scanned by Gmail