ಒಂದೇ ದಿನ ತುಂಗಭಧ್ರೆಗೆ 5 ಟಿಎಂಸಿ ನೀರು.
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಜು7: ವರುಣಾರ್ಭಟ ಮುಂದುವರೆದ ಹಿನ್ನೆಲೆಯಲ್ಲಿ ತುಂಗಭಧ್ರೆಗೆ ಒಂದೇ ದಿನ 5 ಟಿಎಂಸಿ ನೀರು ಸಂಗ್ರಹವಾಗಿದೆ.
ಕಳೆದೆರಡು ದಿನಗಳಿಂದ ತುಂಗಭದ್ರೆಗೆ ನೀರು ಪ್ರವಾಹ ರೀತಿಯಲ್ಲಿ ಹರಿದುಬರುತ್ತಿದ್ದು ಇದ್ದಕ್ಕಿಂದತೇ 20 ಸಾವಿರ, 25ಸಾವಿರ ಕ್ಯೂಸೆಕ್ ನೀರು ಇಂದು 45ಸಾವಿರ ಗಡಿ ದಾಟಿದ್ದು ಶನಿವಾರ ರಾತ್ರಿಯ ವರೆಗೂ ಕಳೆದ 24ಗಂಟೆಯಲ್ಲಿ 50ಸಾವಿರಕ್ಕೂ ದಾಟಿದ್ದು ತುಂಗಭದ್ರೆಯ ಒಡಲು ತುಂಬಲಾರಂಭವಾಗಿದೆ. ಇದರೊಂದಿಗೆ ಶನಿವಾರ ಸಂಗ್ರಹವಾದ ಸಾಮಥ್ರ್ಯ 13 ಟಿಎಂಸಿ ಯಿಂದ 18 ಟಿಎಂಸಿ ವೃದ್ಧಿಯಾದಂತಾಗದೆ.
ಇಂದು ದಾಖಲಾದ ನೀರಿನ ಮಟ್ಟ:
ತುಂಗಭದ್ರಾ ಜಲಶಯದ ನೀರಿನ ಮಟ್ಟ 1633 ಅಡಿ ಇದ್ದು ಸದ್ಯ 1597.31 ಅಡಿಇದೆ. ಒಟ್ಟು ನೀರು ಸಂಗ್ರಹಣಾ ಸಮಥ್ರ್ಯ 105.788 ಟಿಎಂಸಿ ಸದ್ಯ 18.249 ಟಿಎಂಸಿ ಸಂಗ್ರಹವಾಗಿದೆ. ಕಳೆದ 24 ಗಂಟೆಗಳಿಂದ ಜಲಾಶಯಕ್ಕೆ 50715 ಕ್ಯೂಸೆಕ್ ನೀರು ಹರಿದುಬರುತ್ತಿದ್ದು 263 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 
ಕಳೆದ ವರ್ಷಕ್ಕೆ ಹೊಲಿಕೆ ಮಾಡಲಾಗಿ ಅವಧಿಗೆ ಮುಂಚೆಯೇ ಜಲಾಶಯ ಭರ್ತಿಯಾಗುವ ಸೂಚನೆಗಳಂತು ಕಾಣಲಾರಂಭವಾಗಿದ್ದು ಜುಲೈ ಅಂತ್ಯಕ್ಕೆ ಜಲಾಶಯ ಭರ್ತಿಯಾದರೂ ಅಚ್ಚರಿಯೇ ಇಲ್ಲಾ ಈ ಸೂಚನೆಗಳಿಂದ ತುಂಗಭದ್ರಾ ಜಲಾಶಯ ನಂಬಿದ ಜನ ಜಾನುವಾರು ಸೇರಿದಂತೆ ರೈತರು ಹರ್ಷಿತರಾಗಿದ್ದಾರೆ. ಶನಿವಾರ ವಾಗಿದ್ದರಿಂದ ನಿನ್ನೆ ಹಾಗೂ ಇಂದು ಭಾನುವಾರವಾಗಿರುವುದರಿಂದ ಜನ ಸಾಗರ ಜಲಾಶಯಕ್ಕೆ ಹರಿದುಬರುವ ನಿರೀಕ್ಷೆ ಇದೆ.