ಕೂಡ್ಲಿಗಿ ಕರಡಿಯ ಕಿರುಚಾಟಕ್ಕೆ ಬೆಚ್ಚಿಬಿದ್ದ ಜನ.

ಕುದುರೆಡವಿನಲ್ಲಿ ಮರವೇರಿ ಕೆಳಗಿಳಿಯಲು ಪಜೀತಿ,
ಸೆರೆಹಿಡಿವಾಗ ತಪ್ಪಿಸಿಕೊಂಡು ಕಾಡು ಸೇರಿದ ಕರಡಿ.
ಬಿ. ನಾಗರಾಜ. ಕೂಡ್ಲಿಗಿ.
ಕೂಡ್ಲಿಗಿ. ಜು.7 :-ಊರುರೇ  ಉಂಡು ಮಲಗಿ ನಿದ್ರೆಗೆ ಜಾರಿದ  ಜನತೆಗೆ ತಂಪಾದ ನಿಶಬ್ದದ ವಾತಾವರಣದಲ್ಲಿ ಕಾಡುಪ್ರಾಣಿಯ ಕಿರುಚಾಟದ ಕೂಗಿಗೆ  ಗಾಬರಿಗೊಂಡು ಎದ್ದಜನ ಕಿರುಚಾಟದ ಕೂಗಿನ ಕಡೆ ಹೆಜ್ಜೆ ಹಾಕಿದರೆ ಅಲ್ಲಿ  ಕಂಡು ಬಂದಿದ್ದು ಆಕಸ್ಮಿಕ ಆಹಾರ ಹುಡುಕಿ ಅಥವಾ ಮರದಲ್ಲಿದ್ದ ಜೇನಿನ ಸವಿರುಚಿ ಸವಿಯಲು  ಹುಣಸೆಮರವೇರಿದ ಕರಡಿಗೆ ಕೆಳಗಿಳಿಯಲು ಆಗದೇ  ಪಜೀತಿ ಪಟ್ಟ ಪರಿಸ್ಥಿತಿ ಕಂಡು ನಗಬೇಕು ಅಥವಾ ಮಮ್ಮಲ ಮರಗಬೇಕು ಎನ್ನುವ ಸನ್ನಿವೇಶ ತಾಲೂಕಿನ ಕುದುರೆಡವು ಗ್ರಾಮದಲ್ಲಿ  ಕಂಡಿತು.
ಶನಿವಾರ ತಡರಾತ್ರಿ ಸಮಯ ತಾಲೂಕಿನ  ಗ್ರಾಮದ ಜನರು ಹಗಲೆಲ್ಲ ಹೊಲಮನೆ ಕೆಲಸದಲ್ಲಿ ಶ್ರಮಿಸಿ  ನಿದ್ರೆಗೆ ಜಾರಿದ್ದಾರೆ ಊರೆಲ್ಲಾ ಮಲಗಿ ಸದ್ದಡಗಿದ   ಗ್ರಾಮದ ಸಮೀಪದ  ಇದ್ದಕ್ಕಿದ್ದಂತೆ ಕಾಡು ಪ್ರಾಣಿಯ  ಆರ್ಭಟ ದ್ವನಿ ಕೇಳಿ ಇಡೀ ಗ್ರಾಮದ ಜನರು ಭಯದಿಂದ ಹೊರಬಂದು ನೋಡಲಾಗಿ, ಹುಣಿಸೆ ಮರವೇರಿದ ಕರಡಿ  ಇಳಿಯಲು ಸಾಧ್ಯವಾಗದೆ ಪರಿತಪಿಸುವ ರೋಧನ ಕಂಡು ಜನತೆ ಮರದ ಹತ್ತಿರ ಹೋಗುತ್ತಿದ್ದಂತೆ ಸಾಯಿಸುತ್ತಾರೋ ಎನ್ನುವ  ಪ್ರಾಣ ಭಯದಲ್ಲಿ ಕಿರುಚಾಟ ಜೋರಾಗಿ ಮಾಡುತ್ತಿದ್ದರಿಂದ ತಕ್ಷಣ ಗುಡೇಕೋಟೆ ಕರಡಿಧಾಮದ ವಲಯ ಅರಣ್ಯಧಿಕಾರಿ ಮಂಜುನಾಥ ಅವರಿಗೆ ಸ್ಥಳೀಯರು ಸುದ್ದಿ ಮುಟ್ಟಿಸಲಾಗಿ ತಕ್ಷಣ ಧಾವಿಸಿದ ಅರಣ್ಯ ಸಿಬ್ಬಂದಿ ಕರಡಿಯನ್ನು ಸೆರೆ ಹಿಡಿದು ರಕ್ಷಣೆ ಮಾಡಲು ಮುಂದೆ ಸಾಗುತ್ತಿದ್ದಂತೆ ಮತ್ತಷ್ಟು ಕರಡಿಯ ಕಿರುಚಾಟ ಜೋರಾಯಿತು
ಗುಡೇಕೋಟೆ ವಲಯ ಅರಣ್ಯಾಧಿಕಾರಿ  ಮಂಜುನಾಥ ಹಾಗೂ  ಸಿಬ್ಬಂದಿ ಮತ್ತು ಗುಡೇಕೋಟೆ  ಪಿಎಸೈ ಜಿ.ಸುಬ್ರಮಣ್ಯ  ಹಾಗೂ ಸಿಬ್ಬಂದಿ ಸೇರಿ  ಜನರನ್ನು ಮರದ ಬಳಿ ಬರದಂತೆ ತಡೆದು  ನಿಯಂತ್ರಿಸಿ. ಮರವೇರಿದ ಕರಡಿಯನ್ನು ಸೆರೆ ಹಿಡಿಯಲು ಮುಂದಾದಾಗ ಕರಡಿ ಹಾಕಿದ ಬಲೆಯ  ಸೆರೆಯಿಂದ ತಪ್ಪಿಸಿಕೊಂಡು ಬದುಕಿದ ಭಯದಲ್ಲಿ ಕತ್ತಲಲ್ಲಿ ಕರಡಿ ಕಾಡು  ಸೇರಿತು. ಇತ್ತ ಬೆಚ್ಚಿಬಿದ್ದ ಜನ ಕರಡಿ ಕಾಡು ಸೇರಿದ್ದು ಕಂಡು ಮನೆಯತ್ತ ಹೆಜ್ಜೆ ಹಾಕಿ ನೆಮ್ಮದಿಯ ನಿದ್ರೆಗೆ ಜಾರಿದರು ಬೆಳಿಗ್ಗೆ ಗ್ರಾಮದ ಕರಡಿಯು ಮರವೇರಿ ಪಜೀತಿ ಪಟ್ಟ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

ಮನೆಯ ಪಕ್ಕದಲ್ಲೇ  ಹುಣಸೆಮರವೇರಿದ ಕರಡಿ ಇಳಿಯಲಾಗದೆ ಅದರ ಕಿರುಚಾಟದ ಶಬ್ದ ಕೇಳಿ ನಾವು ಮತ್ತು ಅಕ್ಕಪಕ್ಕದ ಮನೆಯ ಜನರು  ಭಯಬೀತರಾದೇವು , ಕರಡಿಗಳು ನಿತ್ಯವು ಅಹಾರಕ್ಕಾಗಿ ಗ್ರಾಮದ ಹತ್ತಿರ ಬರುವುದು ಸಹಜವಾಗಿತ್ತು  ಆದರೆ ಮರವೇರಿದ್ದು ಇದೇ ಮೊದಲು. ಕರಡಿ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಕುದುರೆಡವು ಗ್ರಾಮದ  ಕೋಮಾರಪ್ಪ.

ಕರಡಿಗಳು ಅಹಾರಕ್ಕಾಗಿ ರಾತ್ರಿ ವೇಳೆ ಅರಣ್ಯ ಬಿಟ್ಟು ಗ್ರಾಮದತ್ತ  ಹೋಗುವುದು ಸಹಜ,ಅದರ  ನಿಯಂತ್ರಣಕ್ಕೆ ಮುಂದಾಗಿದ್ದೇವೆ ಅಂದರೆ ಕಾಡುಗಳಲ್ಲಿ ಅವುಗಳಿಗೆ ಬೇಕಾದ ನೈಸರ್ಗಿಕವಾಗಿ ಬೆಳೆದ  ಆಹಾರ ಸಿಗದೇ ಇದ್ದ ಸಂದರ್ಭದಲ್ಲಿ ಮಾತ್ರ ಗ್ರಾಮದತ್ತ ಹೆಜ್ಜೆ ಹಾಕುತ್ತವೆ ಈಗ ಅರಣ್ಯ ಪ್ರದೇಶದಲ್ಲಿ ಅದಕ್ಕೆ ಬೇಕಾದ ಆಹಾರದ ಗಿಡಗಳನ್ನು ಹಾಕಲಾಗಿದೆ ನಿಯಂತ್ರಣಕ್ಕೂ ಮುಂದಾಗಲಾಗಿದೆ ಎನ್ನುತ್ತಾರೆ ಗುಡೇಕೋಟೆ ವಲಯದ ಅರಣ್ಯಾಧಿಕಾರಿ ಬಿ ಎಸ್ ಮಂಜುನಾಥ.