ಸಿಯುಕೆ: 2000 ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಕಲಬುರಗಿ,ಜು.7-ಹಸಿರು ಕ್ಯಾಂಪಸ್ ಮಿಷನ್ ಭಾಗವಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ 2000ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗುತ್ತಿದೆ. ಉಪಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಅವರು ಇಂದು ವಿಶ್ವವಿದ್ಯಾಲಯದ ಆವರಣದಲ್ಲಿ ಶ್ರೀಗಂಧ ಹಾಗೂ ತೇಗದ ಸಸಿಗಳನ್ನು ನೆಟ್ಟರು. ವಿಶ್ವನಾಥ ಸ್ವಾಮೀಜಿಯವರ ವಿಶ್ವ ಸೇವಾ ಮಿಷನ್ ಸಹಯೋಗದಲ್ಲಿ ಈ ಸಸಿಗಳನ್ನು ನೆಡಲಾಗುತ್ತಿದೆ. ಈ ಸಂದರ್ಭದಲ್ಲಿ ವಿಶ್ವನಾಥ ಸ್ವಾಮೀಜಿ, ವಿಶ್ವವಿದ್ಯಾಲಯದ ಅಭಿಯಂತರರಾದ ಐ.ಎಸ್.ಮಹಾಗಾಂವಕರ, ವಿದ್ಯಾರ್ಥಿ ಕಲ್ಯಾಣಾಧಿಕಾರಿ, ಡಾ.ಬಸವರಾಜ ಕುಬಕಡ್ಡಿ ಉಪಸ್ಥಿತರಿದ್ದರು.