ದುರ್ಗಮ್ಮನ ಹುಂಡಿಯಲ್ಲಿ43 ಲಕ್ಷ ರೂ ಸಂಗ್ರಹ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.07: ಕಳೆದ ನಾಲ್ಕನೇ ತಿಂಗಳಲ್ಲಿ ಇಲ್ಲಿನ ದುರ್ಗಮ್ಮ ದೇವಸ್ಥಾನದ ಐದು ಹುಂಡಿಗಳಲ್ಲಿ 43 ಲಕ್ಷದ 44 ಸಾವಿರದ 260 ನಗದು ಮತ್ತು 3 ಕಿಲೋ 400 ಗ್ರಾಂ ಬೆಳ್ಳಿ ಸಾಮಾನು ಮತ್ತು 85.900 ಮಿಲಿ ಚಿನ್ನ ಸಂಗ್ರಹವಾಗಿದ್ದನ್ನು ಎಣಿಕೆ ಮಾಡಿದೆಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಂತಪ್ಪ  ಅವರು ತಿಳಿಸಿದ್ದಾರೆ.