ಶ್ಯಾಮ್ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ: ಮುಖಂಡರಿಂದ ಗೌರವ ನಮನ
ವಾಡಿ,ಜು.7-ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ಜಯಂತಿ,
ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆ ಅಂಗವಾಗಿ ಪಕ್ಷದ ಮುಖಂಡರು ಇಬ್ಬರು ನಾಯಕರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಸ್ವಾತಂತ್ರ್ಯದ ಹೋರಾಟಗಾರರು ಹಾಗೂ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ಅವರು ಶೋಷಿತರ ಹಕ್ಕಿಗಾಗಿ ಹೋರಾಡಿದವರು, ಹಸಿರು ಕ್ರಾಂತಿಯ ಹರಿಕಾರರು. ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ಕೃಷಿ, ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ ಅವರ ಸೇವೆ ಈ ದೇಶವಾಸಿಗಳು ಎಂದಿಗೂ ಮರೆಯಲಾರದಂತದ್ದು, ಅವರ ತ್ಯಾಗಮಯ ಜೀವನ ಎಲ್ಲರಿಗೂ ಆದರ್ಶಪ್ರಾಯ ಎಂದರು.
ನ್ಯಾಯವಾದಿ, ಶಿಕ್ಷಣ ತಜ್ಞ, ಕೇಂದ್ರದ ಮಾಜಿ ಸಚಿವ, ಭಾರತೀಯ ಜನಸಂಘದ ಸ್ಥಾಪಕ, ಭಾರತದ ಅಖಂಡತೆಗಾಗಿ ಶ್ರಮಿಸಿದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ದೇಶಸೇವೆಗಾಗಿ ಜೀವನ ನಮಗೆಲ್ಲಾ ಸ್ಪೂರ್ತಿ ದಯಾಕವಾಗಿದೆ ಎಂದು ಹೇಳಿದರು.
ತಾಲ್ಲೂಕು ಎಸ್‍ಸಿ ಮೂರ್ಚಾ ಅಧ್ಯಕ್ಷ ರಾಜು ಮುಕ್ಕಣ ಮಾತನಾಡಿ, ಡಾ.ಬಾಬು ಜಗಜೀವನ್ ರಾಮ್ ಅವರ ಆದರ್ಶಗಳು, ಸಾಧನೆಗಳು ಮತ್ತು ಜಿಂತನೆಗಳು ಯುವ ಜನರಿಗೆ ತಲುಪುವಂತಾಗಬೇಕು ಹಾಗೂ ಅವರ ವಿಚಾರಧಾರೆಗಳನ್ನು ಯುವಜನತೆ ಪಾಲಿಸುವುದರಿಂದ ಸಮಾಜ ಮತ್ತು ದೇಶ ಅಭಿವೃದ್ಧಿ ಪಥದೆಡೆಗೆ ಸಾಗುತ್ತದೆ ಎಂದರು. ಶೋಷಣೆಗೊಳಗಾದ ಅಸ್ಪøಶ್ಯರು ಬದುಕಿನಲ್ಲಿ ಎಲ್ಲರಂತೆ ನೆಲೆಯೂರುವಂತೆ ಬಾಬೂಜಿ ಮಾಡಿದ್ದಾರೆ. ಹಲವಾರು ನೂತನ ಕಾಯ್ದೆಗಳನ್ನು ಜಾರಿಗೊಳಿಸಿ ಬಡವರ ಬದುಕನ್ನು ಸುಧಾರಣೆ ಮಾಡಿದ್ದಾರೆ ಎಂದರು.
ನಮ್ಮ ಜನ ಸಂಘ ಪಕ್ಷದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ರಾಷ್ಟ್ರ ಕಂಡ ಅನುಭವಿ ರಾಜಕಾರಣಿ, ಅವರ ಜ್ಞಾನ, ಸ್ವಭಾವ ಮತ್ತು ದೂರದೃಷ್ಟಿಯಿಂದ ಸ್ನೇಹಿತರು ಮತ್ತು ವೈರಿಗಳಿಂದ ಗೌರವಿಸಲ್ಪಟ್ಟರು. ಅವರು ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು ಮತ್ತು ಭಾರತದ ಶ್ರೇಷ್ಠ ಪುತ್ರರಾಗಿದ್ದ ಅವರು ಸ್ವಲ್ಪ ದಿನವೇ ಬದುಕಿ ಭಾರತದ ಅಖಂಡತೆಗೆ ಬೆಳಕಾದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಸಿದ್ದಣ್ಣ ಕಲ್ಲಶೆಟ್ಟಿ,ಬಸವರಾಜ ಪಂಚಾಳ,ವಿಠಲ ವಾಲ್ಮೀಕ ನಾಯಕ,ರಮೇಶ ಕಾರಬಾರಿ, ತುಕಾರಾಮ ರಾಠೋಡ, ರಾಮಚಂದ್ರ ರಡ್ಡಿ, ಅಶೋಕ ಹರನಾಳ,ಗಿರಿಮಲ್ಲಪ್ಪ ಕಟ್ಡಿಮನಿ,ಹರಿ ಗಲಾಂಡೆ, ಅಶೋಕ ಪವಾರ,ಶಿವಶಂಕರ ಕಾಶೆಟ್ಟಿ,ಕಿಶನಜಾಧವ, ಶಿವಶರಣಪ್ಪ ಪುಜಾರಿ ಹಳಕರ್ಟಿ, ಅಂಬದಾಸ ಜಾಧವ,ದತ್ತಾ ಖೈರೆ, ಮಲ್ಲಿಕಾರ್ಜುನ ಸಾತಖೇಡ, ನಾಗರಾಜಗೌಡ ಗೌಡಪ್ಪನೂರ,ಮಹಾಂತೇಶ ಗುಡುರ,ಮಹೇಂದ್ರ ಕುಮಾರ ಪುಜಾರಿ,ಪ್ರೇಮ ರಾಠೋಡ, ಸೀತಾರಾಮ ರಾಠೋಡ, ಪುಣ್ಣು ರಾಠೋಡ,ಸನ್ನಿ ವಾಲಿಯ, ಸಂಜಯ ಕಾನಕುರ್ತೆ, ಮನೋಹರ ನೌಗಿರೆ ಸೇರಿದಂತೆ ಇತರರು ಇದ್ದರು.