ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬುಜಗಜೀವನರಾಮ ಪುಣ್ಯತಿಥಿ ಆಚರಣೆ
ವಿಜಯಪುರ,ಜು.7:ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಡಾ. ಬಾಬುಜಗಜೀವನರಾಮ ಅವರ ಪುಣ್ಯತಿಥಿಯನ್ನು ಶನಿವಾರ ಆಚರಿಸಲಾಯಿತು. ಜಿಗಜೀವನರಾಮ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅನೇಕ ಕಾಂಗ್ರೆಸ್ ಮುಖಂಡರು ಮಾತನಾಡಿ, ಡಾ. ಬಾಬುಜಗಜೀವನರಾಮ ಅವರು ಸಮಾಜಕ್ಕೆ ಸಮಾನತೆಯ ಸಂದೇಶವನ್ನು ಸಾರಿದ ಸಂಪನ್ನ ರಾಜಕಾರಣಿ ಆಗಿದ್ದರು. ಸುಮಾರು 40 ವರ್ಷಗಳ ಕಾಲ ಸಂಸತ್ತಿನಲ್ಲಿ ಹಲವಾರು ಇಲಾಖೆಗಳ ನಿರ್ವಹಣೆಯನ್ನು ಮಾಡಿದ ಏಕೈಕ ರಾಜಕಾರಣಿ ಆಗಿದ್ದಾರೆ ಎಂದರು.
ಅವರ ವಿಚಾರಗಳ ಕುರಿತು ಸಂಶೋಧನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅವರ ತತ್ವಗಳನ್ನು ಪ್ರಸಾರ ಮಾಡಲು ಭಾರತದಲ್ಲಿ ಕೃಷಿ ಮೂಲಾಧಾರವಾಗಿದೆ. ಈ ದೃಷ್ಠಿಯಿಂದ ಡಾ. ಬಾಬುಜಗಜೀವನರಾಮ ಅವರು ದೇಶದ ಭೀಕರ ಬರಗಾಲದ ಕ್ಷಾಮದ ಪರಿಸ್ಥಿತಿಯಲ್ಲಿ ಕೈಗೊಂಡ ದೇಶದ ಆಹಾರ ಕೊರತೆಯನ್ನು ನೀಗಿಸಿ ಸುಸ್ಥಿರ ಅಭಿವೃದ್ಧಿ ಸಹಕಾರಿಯಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಸ ಕಾಲೆಬಾಗ, ಮಹಾದೇವ ಜಾಧವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ, ಎಂ. ಎಂ. ಮುಲ್ಲಾ (ದ್ಯಾಬೇರಿ), ವಸಂತ ಹೊನಮೋಡೆ, ಲಾಲಸಾಬ ಕೊರಬು, ಜಮೀರಹ್ಮದ ಬಕ್ಷಿ, ರಿಯಾಜ ನದಾಫ, ತಾಜುದ್ದೀನ ಖಲೀಫಾ, ಫಿರೋಜ ಶೇಖ, ಬಾಬು ಯಾಳವಾರ, ಗಿರೀಶÀ ಇಟ್ಟಂಗಿ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.