ಗಡಿಭಾಗದ ಗ್ರಾಮಗಳಿಗೆ ಬಿಸಿಯೂಟ ಆಹಾರ ಸಾಮಗ್ರಿ ಸರಿಯಾಗಿ ಒದಗಿಸಲು ಮನವಿ
ವಿಜಯಪುರ,ಜು.7:ಕರ್ನಾಟಕ ರಾಜ್ಯ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಬಲೇಶ್ವರ ಶಾಖೆ ವತಿಯಿಂದ ಗಡಿಭಾಗದ ಗ್ರಾಮಗಳಿಗೆ ಬಿಸಿಯೂಟ ಅಡುಗೆ ಅನಿಲ ಹಾಗೂ ಆಹಾರ ಸಾಮಗ್ರಿ ಸರಿಯಾಗಿ ಸರಬರಾಜು ಮಾಡುವಂತೆ ಆಗ್ರಹಿಸಿ ಜಿಪಂ ಅಧಿಕಾರಿಗಳಿಗೆÉ ಮನವಿ ಸಲ್ಲಿಸಲಾಯಿತು.
ನೌಕರರ ಸಂಘ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ನಿಜು ಮೇಲಿನಕೇರಿ ಮಾತನಾಡಿ, ತಾಲೂಕಿನ ಗಡಿ ಭಾಗದ ಗ್ರಾಮಗಳ ಶಾಲೆಗೆ ಸರಿಯಾದ ಸಮಯದಲ್ಲಿ ಆಹಾರ ಸಾಮಗ್ರಿಗಳು ಸರಬರಾಜು ಆಗುತ್ತಿಲ್ಲ. ಶಾಲಾ ಅವಧಿಯ ನಂತರ ಶಾಲಾವಧಿಗಿಂತ ಮುಂಚೆ ಹೀಗೆ ಬರುವುದರಿಂದ ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಅದರಂತೆ ಮಕ್ಕಳ ದಾಖಲಾತಿಗಿಂತ ಕಡಿಮೆ ಸಾದಿಲ್ವಾರು ದುಡ್ಡು ಜಮೆಯಗುತ್ತಿರುವದರಿಂದ ಹಾಗೂ ಮೊಟ್ಟೆ, ಶೇಂಗಾ ಚಿಕ್ಕಿಗೆ ಬರುವ ಅನುದಾನ ವಿಳಂಬವಾಗುತ್ತಿರುವದರಿಂದ ಬಿಸಿಯೂಟದ ನಿರ್ವಹಣೆ ಕಷ್ಟವಾಗುತ್ತಿದೆ. ಕೂಡಲೇ ನ್ಯೂನ್ಯತೆಗಳನ್ನು ಸರಿಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ರವೀಂದ್ರ ಹೂಗಾರ, ಮುತ್ತು ಪೂಜಾರಿ, ಎಚ್.ಎಸ್. ಇಂಡಿ, ಉದಯ ಕೊಟ್ಯಾಳ, ಮಲ್ಲಿಕಾರ್ಜುನ ಮಾದರ, ವಿಜಯಕುಮಾರ ಸೂರ್ಯವಂಶಿ, ಎಚ್.ಎಂ. ಚಿತ್ತರಗಿ, ಅರ್.ವಿ. ಮುದನೂರ, ವಿನೋದ ರತ್ನಾಕರ, ವಸೀಮ ಚಟ್ಟರಕಿ, ಡಿ.ಎಸ್. ಬಿಜಾಪುರ, ಎಂ.ಬಿ. ಪಾಟೀಲ, ಸತೀಶ ಬಗಲಿ ಮತ್ತಿತರರು ಉಪಸ್ಥಿತರಿದ್ದರು.