ಗೊಣ್ಣೆಹುಳುಗಳ ನಿರ್ವಹಣಾ ಕಾರ್ಯಕ್ರಮ
ಮುನವಳ್ಳಿ,ಜು7: ತಗ್ಗಿಹಾಳ ಗ್ರಾಮದಲ್ಲಿ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆ ಮತ್ತು ಎಸ್.ನಿಜಲಿಂಗಪ್ಪಾ ಸಕ್ಕರೆ ಸಂಸ್ಥೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಕಬ್ಬಿನ ಸುಸ್ಥಿರ ಬೇಸಾಯ ಮತ್ತು ಗೊಣ್ಣೆಹುಳಗಳ ನಿರ್ವಹಣಾ ಕಾರ್ಯಕ್ರಮ ಜರುಗಿತು.
ನಿಜಲಿಂಗಪ್ಪಾ ಸಂಸ್ಥೆಯ ಅಧಿಕಾರಿ ಚೌರಡ್ಡಿ ಕಬ್ಬಿನ ಬೆಳೆಯ ನಿರ್ವಹಣೆ ಬಗ್ಗೆ ವಿವರವಾಗಿ ರೈತರಿಗೆ ಸಲಹೆ ನೀಡಿದರು.
ಡಿ.ಜಿ.ಎಮ್ ಮಲಗೌಡನವರ, ಎ.ಜಿ.ಎಮ್ ಕರೀಕಟ್ಟಿ, ಹನಮಂತ ಸಿಂಗನ್ನವರ, ಅಶೋಕ ಕಂಕನವಾಡಿ, ಅಡಿವೆಪ್ಪಾ ಸಿಂಗನ್ನವರ, ತಿಮ್ಮನ್ನವರ, ಯಲ್ಲಪ್ಪ ವಟ್ನಾಳ, ಕಾಂಬಳೆ, ಹಿರಲಿಂಗನ್ನವರ, ಪಾಶ್ಚಾಪೂರ, ಪಾಟೀಲ, ಮಡಿವಾಳರ, ನಂದಗಾಂವ, ಕೊಟ್ಟರಶೆಟ್ಟಿ, ಡಾಂಗಿಮಠ, ಮಾಸರೆಡ್ಡಿ, ವಾಸನದ, ಬಗಲಿ, ಕಿರಣ ಯಲಿಗಾರ, ಬಿಕ್ಕನಗೌಡರ, ಮಾಳಗಿ, ಬಿ.ಕೆ.ಪಾಟೀಲ, ಅನೀಲ ಟೋಪೋಜಿ, ಹಿತ್ತಲಮನಿ, ಇತರರು ಉಪಸ್ಥಿತರಿದ್ದರು.
ವೈ.ಬಿ.ಗೋಕಾಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.