ಅರಿವಿನ ಮೂಲಕ ಬದುಕು ಕಟ್ಟಿಕೊಳ್ಳಬೇಕು
ಧಾರವಾಡ,ಜು7: 12 ನೆಯ ಶತಮಾನವು ಅರಿವಿನ ಕಾಲಘಟ್ಟವಾಗಿದೆ. ಎಲ್ಲರೂ ತಮ್ಮ ಅರಿವಿನ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕು. ತಮ್ಮ ತಮ್ಮ ಅರಿವೇ ಗುರುವಾಗಬೇಕು ಎಂದು ನುಡಿದ ಶರಣರ ತತ್ವಗಳನ್ನು ನಾವು ಪರಿಪಾಲಿಸಬೇಕೆಂದು ಡಾ.ಬಾಳಪ್ಪ ಚಿನಗುಡಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ನಿಜಸುಖಿ ಶರಣರಾದ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮರ ಸ್ಮರಣಾರ್ಥದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ `ನಿಜ ಶರಣ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ದಂಪತಿಗಳ ಜೀವನದರ್ಶನ’ ವಿಷಯ ಕುರಿತು ಅವರು ಮಾತನಾಡುತ್ತಿದ್ದರು.