ನಂದಗಾಂವ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪ್ರಾಣಿ ಜನ್ಯ ರೋಗ ದಿನಾಚರಣೆ
ಹುಮನಾಬಾದ್: ಜು.7:ತಾಲೂಕಿನ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ವತಿಯಿಂದ ನಂದಗಾವ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪ್ರಾಣಿ ಜನ್ಯ ರೋಗ ದಿನಾಚರಣೆಯ ಪ್ರಯುಕ್ತ ಪ್ರಾಣಿ ಜನ್ಯ ರೋಗ ತಡೆ ಮತ್ತು ರೇಬಿಸ್ ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಡಾ ಶಾಂತಕುಮಾರ ಮುಖ್ಯ ಪಶು ವೈದ್ಯಾಧಿಕಾರಿಗಳು ಉಪನ್ಯಾಸ ನೀಡಿ ವಿಶ್ವದ ಶ್ರೇಷ್ಠ ವಿಜ್ಞಾನಿ ಲೂಇಸ್ ಪಾಶ್ಚರ ರೇಬಿಸ್ ರೋಗದ ಲಸಿಕೆ ಪ್ರಯೋಗ ಮಾಡಿದ ದಿನದ ನೆನಪಾಗಿ ಪ್ರಾಣಿ ಜನ್ಯ ದಿನಾಚರಣೆ ಆಚರಣೆಗೆ ಬಂದಿದೆ ಎಂದು ತಿಳಿಸಿದರು.ರೇಬಿಸ್ ಹುಚ್ಚು ನಾಯಿ ರೋಗವಾಗಿದ್ದು ವೈರಾಣುವಿನಿಂದ ಉಂಟಾಗುವ ಅತಿ ಮುಖ್ಯ ಪ್ರಾಣಿ ಜನ್ಯ ಮಾರಾಣoತಿಕ ರೋಗ ಆಗಿದ್ದು, ಸಾಮಾನ್ಯವಾಗಿ ರೋಗಪೀಡಿತ ನಾಯಿಗಳು, ಬೆಕ್ಕುಗಳು, ನಾಯಿ ಜಾತಿಗೆ ಸೇರಿದ ಕಾಡುಪ್ರಾಣಿಗಳು ಕಚ್ಚುವದರಿಂದ, ಇತರೆ ಪ್ರಾಣಿ ಮತ್ತು ಮನುಷ್ಯರಿಗೆ ರೋಗ ಹರಡುವ ವಿಧಾನಗಳು ತಿಳಿಸಿದರು.ರೇಬಿಸ್ ರೋಗದ ಲಕ್ಷಣಗಳು,ರೇಬಿಸ್ ಶಂಕಿತ ನಾಯಿಯಿಂದ ಕಚ್ಚಿಸಿಕೊಂಡ ನಂತರ ಪಾಲಿಸಬೇಕಾದ ಕ್ರಮಗಳು,ಲಸಿಕೆ ಯ ಮಹತ್ವ,, ಸಾಕು ಪ್ರಾಣಿ ಗಳಲ್ಲಿ ಮತ್ತು ಜಾನುವಾರುಗಳಲ್ಲಿ ರೋಗ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು ಸೇರಿದಂತೆ, ಪ್ರಾಣಿ ಜನ್ಯ ರೋಗಗಳಾದ ಕಂದು ರೋಗ, ಲೇಪಟೊಸ್ಪೇರೋಸಿಸ್, ಕ್ಷಯರೋಗ, ಮಂಗನ ಕಾಯಿಲೆ ಮತ್ತು ಇತರ ರೋಗಗಳ ಕುರಿತು ಮಾಹಿತಿ ನೀಡಿದರು.ವಿದ್ಯಾರ್ಥಿಗಳಿಗೆ ಪ್ರಾಣಿ ಜನ್ಯ ರೋಗ ದಿನಾಚರಣೆಯ ನಿಮಿತ್ತ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆ ಶಾಲೆ ಯ ಮುಖ್ಯ ಗುರುಗಳಾದ ಸೋಮಶೇಖರ ಆಲಮದ ವಹಿಸಿದ್ದರು.ಸದಾಶಿವಯ್ಯ ಹಿರೇಮಠ ನಿರೂಪಣೆ ಮಾಡಿದರು.ಶಿಕ್ಷಕರಾದ ಬಸವರಾಜ್ ಕೊಪ್ಪಳ,ಉಷಾ ಮಮ್ಮಾ,ಮಮತಾ, ಆಶಾ, ಜಗದೇವಿ, ವಿನೋದ ಸೇರಿದಂತೆ ಸಮಸ್ತ ವಿದ್ಯಾರ್ಥಿಗಳು ಶಿಬಿರ ದಲ್ಲಿ ಹಾಜರಿದ್ದರು.