ಜೀವನದ ಬದುಕುವ ದಾರಿಯನ್ನು ಅರಿತುಕೊಳ್ಳಿ:ದೀಪಾಕ್ಷೀ
ತಾಳಿಕೋಟೆ:ಜು.7: ಜನ್ಮತಾಳಿದಾಗಿನಿಂದಲೂ ನಮ್ಮ ಜೀವನದ ದಾರಿ ಸರಿಯಾಗಿರಬೇಕೆಂಬುದು ಮಾತಾಪಿತ ಆಸೆಯಾಗಿರುತ್ತದೆ ಮತಾಪಿತರ ಜವಾಬ್ದಾರಿ ಎಂಬುದು ಮಕ್ಕಳ ಮೇಲೆ ಇದ್ದೇ ಇರುತ್ತದೆ ಕಾರಣ ಮಾತಾಪಿತರು ತಮ್ಮ ಮೇಲಿಟ್ಟ ಪ್ರೀತಿ ವಾತ್ಸಲ್ಯಕ್ಕೆ ಎಂದೂ ದಕ್ಕೆ ತರುವಂತಹ ಕಾರ್ಯ ಮಕ್ಕಳಾದವರು ಮಾಡಬೇಡಿ ಎಂದು ವಿಜಯಪುರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ದೀಪಾಕ್ಷೀ ಜಾನಕಿ ಅವರು ನುಡಿದರು.
ಶನಿವಾರರಂದು ಸ್ಥಳೀಯ ವೀ.ವಿ.ಸಂಘದಡಿಯಲ್ಲಿ ನಡೆಯುತ್ತಿರುವ ಮಹಿಳಾ ಸ್ವತಂತ್ರ ಪಧವಿ ಪೂರ್ವ ಮಹಾ ವಿದ್ಯಾಲಯದ 2024 ನೇ ಸಾಲಿನ ಸಾಂಸ್ಕøತಿಕ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು 18 ವರ್ಷ ವಯೋಮಿತಿ ಒಳಗಿನವರೆಲ್ಲರೂ ಮಕ್ಕಳೆಯಾಗಿರುತ್ತಾರೆ ಮಕ್ಕಳ ರಕ್ಷಣೆ ಪಾಲನೆ ಪೊಷಣೆ ಕುರಿತು ನಮ್ಮ ಇಲಾಖೆ ತಿಳುವಳಿಕೆ ನೀಡಲು ಮುಂದಾಗುತ್ತದೆ ಅಲ್ಲದೇ ತೊಂದರೆ ಅಂತಹ ಯಾವುದೇ ತರಹದ ವ್ಯವಸ್ಥೆ ಕಂಡುಬಂದಲ್ಲಿ ರಕ್ಷಣೆಗೂ ಸಹ ಮುಂದಾಗುತ್ತದೆ ಎಂದರು. ಈ ಶಾಲೆಯ ಆದರ್ಶ ವಿದ್ಯಾರ್ಥಿನಿಯರು ಇಂದು ಸನ್ಮಾನ ಪಡೆದಿರುವದು ಒಂದು ಮಹತ್ವದ ಸಾಧನೆಯ ಮೆಟ್ಟಿಲುಯಾಗಿದೆ ಶಿಕ್ಷಣದಲ್ಲಿಯೇ ಹೆಣ್ಣು ಮಕ್ಕಳು ಜೀವನವನ್ನು ಪಾವನ ಮಾಡಿಕೊಳ್ಳಬೇಕೆಂದರು. ಜೀವನವೇ ಶಾಲಾ ಜೀವನವೆನ್ನುವದು ಗೋಲ್ಡನ್ ಲೈಫ್ ಇದ್ದಂತೆ ಈ ಶಾಲೆಯ ಪ್ರಾಚಾರ್ಯ ಶ್ರೀಮತಿ ಜೆ.ಸಿ.ಹಿರೇಮಠ ಅವರ ಸೇವಾ ಕಾರ್ಯ ಅವರ ನಡತೆಯನ್ನು ಅರೆತೆ ಅವರಂತಹ ಪ್ರಾಚಾರ್ಯರು ಇಲ್ಲಿರತಕ್ಕಂತಹ ಉಪನ್ಯಾಸಕರು ದೊರೆತಿರುವದು ನೀವು ಭಾಗ್ಯವಂತರೆಂದು ವಿದ್ಯಾರ್ಥಿನಿಯರಿಗೆ ತಿಳಿ ಹೇಳಿದ ಅಧಿಕಾರಿ ದೀಪಾಕ್ಷೀ ಅವರು ಹೆಣ್ಣೆ ಇರಲಿ ಗಂಡೆ ಇರಲಿ ಪೋಕ್ಸೋ ಕಾಯ್ದೆಗಳಂತವುಗಳಲ್ಲಿ ಸಿಲುಕುವದು ಬೇಡಾ ಇದರಿಂದ ಹುಡಗಿರದ್ದಾಗಲಿ ಹುಡಗರದ್ದಾಗಲಿ ಜೀವನವೆನ್ನುವದೇ ನಾಶವಾಗಲಿದೆ ಎಂದು ಏಚ್ಚರಿಸಿದ ಅವರು ಮಗುವಿಗೆ ದೌರ್ಜನ್ಯವಾಗುತ್ತಿದ್ದರೆ ಕರೆ ಮಾಡಿ ಅದಕ್ಕೆ ನಮ್ಮ ಇಲಾಖೆ ಸ್ಪಂದಿಸುತ್ತದೆ ಎಂದು ಹೇಳಿದರಲ್ಲದೇ ತಂದೆಯಿಂದ ಸ್ಕೂಟರ್ ಖರೀದಿಸಿಕೊಂಡು ತನ್ನ ಅಪೇಕ್ಷೆ ಪೂರೈಸಿಕೊಳ್ಳಲು ಮುಂದಾಗಿ ಹಟ ಹಿಡಿದ ವಿದ್ಯಾರ್ಥಿನಿಯ ಮಾತನ್ನು ಕ್ಷಣ ಮಾತ್ರದಲ್ಲಿ ತಂದೆ ಪಾಲಿಸಲಾರದಕ್ಕೆ ಕೊನೆಗೆ ತಂದೆಯನ್ನೇ ನಿರ್ಲಕ್ಷೀಸಿದ ಆ ಪುತ್ರಿಯ ಹೆಸರಿನಲ್ಲಿಯೇ ಇಡೀ ಆಸ್ತಿಯನ್ನೇ ಮಾಡಿ ಆತ ತೀರಿ ಹೋಗಿದ್ದ ಎಂಬ ತಂದೆ ತಾಯಿ ಪ್ರೀತಿ ವಾತ್ಸಲ್ಯ ಕುರಿತು ಉಪಸ್ಥಿತ ವಿದ್ಯಾರ್ಥಿನಿಯರಿಗೆ ವಿವರಿಸಿದರು.
ಇನ್ನೋರ್ವ ವೀ.ವಿ.ಸಂಘದ ಮಹಿಳಾ ಪ.ಪೂ.ಕಾಲೇಜಿನ ಅಧ್ಯಕ್ಷ ಕೆ.ಸಿ.ಸಜ್ಜನ ಅವರು ಮಾತನಾಡಿ ಇಂದಿನ ಮಹತ್ವದ ಕಾರ್ಯಕ್ರಮದಲ್ಲಿ ನಮ್ಮ ಸಂಘದ ವಿವಿಧ ಶಾಲೆಗಳಲ್ಲಿ ಪ್ರಾಚಾರ್ಯರಾಗಿ ಹಾಗೂ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರನ್ನು ಸನ್ಮಾನಿಸಿ ಗೌರವಿಸಿರುವದು ಮಹತ್ವದ ಕಾರ್ಯವೆಂದು ಹೇಳಬಹುದಾಗಿದೆ ಈ ಕಾರ್ಯದಲ್ಲಿ ಶಿಕ್ಷಕರೇ ಶಿಕ್ಷಕರನ್ನು ಗೌರವಿಸುವಂತಹದ್ದಾಗಿರುವದು ಸಂತಸ ತಂದಿದೆ ವಿದ್ಯಾರ್ಥಿಯಾದವನು ಮೋಬೈಲ್ ನಲ್ಲಿ ತೋರಿಸುವಂತಹ ಆಸಕ್ತಿಯನ್ನು ಶಿಕ್ಷಣ ಕಲಿಕೆಯಲ್ಲಿ ತೋರಿಸುವ ಕಾರ್ಯಕ್ಕೆ ಮುಂದಾಗಬೇಕು ಅಂತಹ ಕಾರ್ಯವನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳು ಮಾಡಿ ತೋರಿಸುತ್ತಿದ್ದಾರೆಂದು ಹೆಮ್ಮೆಯ ಮಾತುಗಳನ್ನಾಡಿದ ಸಜ್ಜನ ಅವರು ಈ ಮಹತ್ವದ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗ ಶ್ರೀಗಳು ಉಪಸ್ಥಿತ ಇರುವ ಕಾರಣಕ್ಕೂ ಸಂತಸ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಶ್ರೀಮತಿ ಜೆ.ಸಿ.ಹಿರೇಮಠ ಅವರು ಮಾತನಾಡಿ ಬಧುಕು ಎಂಬುದರಲ್ಲಿ ಸಂಕಟ ಬಂದೇ ಬರುತ್ತದೆ ಯಾವ ರೀತಿ ಹರಿಯುವ ನೀರು ಮುಳ್ಳಾಗಲಿ ಕಲ್ಲಾಗಲಿ ಎಲ್ಲದರಲ್ಲಿಯೂ ಪೆಟ್ಟು ತಿನ್ನುತ್ತಾ ಕೊನೆಗೆ ಬೃಹತ್ ಆಕಾರದ ಸಮುದ್ರ ಸೇರುತ್ತದೆಯೋ ಹಾಗೆ ಜೀವನದಲ್ಲಿ ಕಷ್ಟ ನಷ್ಟಗಳು ಬಂದಾಗ ಅವುಗಳನ್ನು ಎದುರಿಸುತ್ತಾ ನಡೆದರೆ ಬೃಹತ್ ಆಕಾರದ ಸ್ಥಾನ ಮಾನ ದೊರೆಯುತ್ತದೆ ಎಂದರು. ಅಂತಹ ಮಹತ್ವದ ವಿಚಾರ ಹೊಂದಿ ದೊಡ್ಡ ಸ್ಥಾನವನ್ನು ಹೊಂದಿದ ಇಂದು ಮುಖ್ಯ ಅತಿಥಿ ಸ್ಥಾನಮಾನವನ್ನು ಹೊಂದಿದಂತಹ ಅಧಿಕಾರಿ ದೀಪಾಕ್ಷೀ ಅವರು ಆಗಿದ್ದಾರೆಂದು ಹೇಳಿದ ಅವರು ಹೆಣ್ಣಿಗೆ ಸರಿಯಾದ ಮಾರ್ಗದರ್ಶನ ಬೆಳವಣಿಗೆ ದೊರೆಯದಿದ್ದರೆ ಅಲ್ಲೋಲ ಕಲ್ಲೋಲವಾಗಲಿದೆ ಕಾರಣ ಒಳ್ಳೆಯ ಸಂಸ್ಕøತಿಯನ್ನು ಹೊಂದಬೇಕು ಹೆಣ್ಣಿಗೆ ಹೆಣ್ಣೇ ಶತೃವಲ್ಲಾ ಅಂತವರನ್ನು ರಕ್ಷಣೆ ಮಾಡಬೇಕೆಂಬ ವಿಚಾರ ಹೊತ್ತ ಅಧಿಕಾರಿ ದೀಪಾಕ್ಷೀ ಅವರು ಈ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿರುವದು ಮಹತ್ವದ ಕಾರ್ಯ ಇದಾಗಿದೆ ಎಂದರು.
ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಸನ್ಮಾನ ಸ್ವಿಕರಿಸಿದ ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಮಾತನಾಡಿ ಈ ಭೂಮಿಯಲ್ಲಿ ಎರಡು ಜಾತಿಗಳಿವೆ ಒಂದು ಗಂಡು ಒಂದು ಹೆಣ್ಣು ಎಂಬವುಗಳಿವೆ ಈ ಎರಡರಲ್ಲಿಯೂ ಒಂದೇ ಮನಸ್ಸನ್ನು ದೇವರು ಕೊಟ್ಟಿದ್ದಾರೆ ಆದರೂ ಹೆಣ್ಣು ಗಂಡು ಎಂಬ ಬೇಧಭಾವ ಸೃಷ್ಠಿಯಾಯಿತೆಂದರು. ಆದರೆ ಪ್ರತಿ ಹೆಣ್ಣಿನ ಕಷ್ಟ ಸಮಾಜದಲ್ಲಿ ಈ ಜೀವ ಒಳಗಾಗುತ್ತಲೇ ಇದೆ ಈಗೀನ ಕಾಲದಲ್ಲಿಯೂ ಅದುವೇ ಮುಂದುವರೆದಿದೆ ಎಂದು ದೇಹಲಿಯಲ್ಲಿ ಜರುಗಿದ ಘಟನೆಯೊಂದನ್ನು ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ದಿಯನ್ನು ವಿವರಿಸಿದ ಶ್ರೀಗಳು ಈ ಸಮಾಜದಲ್ಲಿ ಮಹಾಭಾರತದಲ್ಲಿ ದ್ರೌಪತಿಯಾಗಿ ಹೋಗಿದ್ದಾಳೆ ಶೂರತನದಲ್ಲಿ ಕಿತ್ತೂರ ಚನ್ನಮ್ಮಳು ಆಗಿ ಹೋಗಿದ್ದಾಳೆ ಇವರೇನು ಹೆಣ್ಣಲ್ಲವೇ ಎಂದು ಪ್ರಶ್ನೀಸಿದ ಶ್ರೀಗಳು ಹೆಣ್ಣಿನ ಕೆಲಸ ಇನ್ನೊಂದು ಮನೆಗೆ ದೀಪ ಹಚ್ಚುವ ಕೆಲಸವಾಗಿದೆ ಆದರೆ ಬೆಂಕಿ ಹಚ್ಚುವ ಕೆಲಸ ವಾಗಬಾರದೆಂದರು. ಹೆಣ್ಣು ಮನಸ್ಸು ಮಾಡಿದರೆ ರಾಜ್ಯ ದೇಶದಾದ್ಯಂತ ಕಫ್‍ಗಳನ್ನು ಎತ್ತಿ ತೊರಿಸುತ್ತಾರೆ ಎಂದರೆ ಅರ್ಥಮಾಡಿಕೊಳ್ಳಿ ಎಂದು ಅನೇಕ ಉದಾಹರಣೆಗಳನ್ನು ವಿದ್ಯಾರ್ಥಿನಿಯರ ಎದುರಿಗೆ ನೀಡಿ ಸ್ಪೂರ್ತಿ ತುಂಬಿಸಿದರು.
ವೀ.ವಿ.ಸಂಘದ ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ ಅವರು ಸಮಾರಂಭವನ್ನು ದೀಪ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಇದೇ ಸಮಯದಲ್ಲಿ ವೀ.ವಿ.ಸಂಘದ ಅಂಗ ಸಂಸ್ಥೆಗಳಲ್ಲಿ ಸೇವಾ ಕಾರ್ಯ ನಿರ್ವಹಿಸಿ ನಿವೃತ್ತರಾದ ಆರ್.ವ್ಹಿ.ಜಾಲವಾದಿ, ಪಿ.ಬಿ.ಭಂಟನೂರ, ಎಂ.ಎ.ಬಾಗೇವಾಡಿ ಅವರನ್ನು ಹಾಗೂ ಆದರ್ಶ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಮಯದಲ್ಲಿ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ವೇದಿಕೆಯ ಮೇಲೆ ವಿದ್ಯಾರ್ಥಿನಿಯರ ಪ್ರತಿನಿಧಿ ಮಮತಾಜ ವಾಲಿಕಾರ, ವೀ.ವಿ.ಸಂಘದ ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ನಿರ್ದೇಶಕರಾದ ರಮೇಶ ಸಾಲಂಕಿ, ಚನಮಲ್ಲು ಕತ್ತಿ, ಅಣ್ಣಪ್ಪ ವಾಲಿ, ಪ್ರಭು ಬಿಳೇಭಾವಿ, ಗುರಲಿಂಗ ಪಾಟೀಲ, ವಿಶ್ವನಾಥ ಬಿಳೇಭಾವಿ, ರಾಚನಗೌಡ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.
ಉಪನ್ಯಾಸಕ ಎಸ್.ಎಸ್.ನಾಡಗೌಡ ಸ್ವಾಗತಿಸಿದರು. ಶ್ರೀಮತಿ ಎಸ್.ಎಸ್.ಸಜ್ಜನ ನಿರೂಪಿಸಿದರು. ಶ್ರೀಮತಿ ಸಿ.ಪಿ.ಧನಪಾಲ ವಂದಿಸಿದರು.