ಪ್ರಾಣಿಜನ್ಯ ರೋಗದ ಬಗ್ಗೆ ಜಾಗೃತಿ ಅಗತ್ಯ
ಬಾಗಲಕೋಟ,ಜು7: ಪ್ರಾಣಿ ಜನ್ಯ ರೋಗಗಳ ನಿರ್ವಹಣೆ ಆಗದಿದ್ದರೆ ಮಾನವನ ಆರೋಗ್ಯದ ಮೇಲೆ ಭಾರಿ ಪ್ರಮಾಣದಲ್ಲಿ ಪರಿಣಾಮ ಬೀರಲಿದೆ ಎಂದು ಡಾ.ವಿಕಾಸ ಪಾರ್ವತಿಕರ ಹೇಳಿದರು.
ಬಾಗಲಕೋಟ ಜಿಲ್ಲಾಸ್ಪತ್ರೆಯಲ್ಲಿ ನಡೆದ ವಿಶ್ವ ಪ್ರಾಣಿಜನ್ಯ ರೋಗಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನೈಸರ್ಗಿಕವಾಗಿ ಪ್ರಾಣಿ ಮತ್ತು ಮನುಷ್ಯ ಸಂಕುಲದ ನಡುವೆ ಪರಸ್ಪರ ರೋಗ ಹರಡುವ ಪ್ರಕ್ರಿಯೆ ಇದೆ. ಪ್ರಾಣಿ ಜನ್ಯ ರೋಗಗಳ ಸರಿಯಾದ ನಿರ್ವಹಣೆ ಆಗದಿದ್ದರೆ ಮನುಕುಲದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದರು. ಯಾವುದೇ ಪ್ರಾಣಿಗಳ ಜನ್ಯ ರೋಗಳ ನಿಯಂತ್ರಣಕ್ಕೆ ಲಸಿಕೆ, ಇಂಜೆಕ್ಷನ್ ಪಡೆದುಕೊಳ್ಳಬೇಕು. ಯಾವುದೇ ಪ್ರಾಣಿಗಳಿಂದ ಬರುವ ಕಾಯಿಲೆಗಳ ಬಗ್ಗೆ ಜಾಗೃತಿ ಅವಶ್ಯ ಎಂದು ತಿಳಿಸಿದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ದಯಾನಂದ ಎಸ್.ಕರೆಣ್ಣವರ ಮಾತನಾಡಿ, ವಿಶ್ವ ಪ್ರಾಣಿ ಜನ್ಯ ದಿನಾಚರಣೆ ಇದು, ಪ್ರಾಣಿ ಜನ್ಯ ಕಾಯಿಲೆಗಳನ್ನು ನಿಯಂತ್ರಿಸುವಲ್ಲಿ ಪ್ರಗತಿ ಮತ್ತು ಅವುಗಳನ್ನು ನಿರ್ಮೂಲನೆ ಮಾಡಲು ನಡೆಯುತ್ತಿರುವ ಸಹಯೋಗದ ಪ್ರಾಮುಖ್ಯತೆಯನ್ನು ಒತ್ತಿ ಹೇಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸೋಂಕು ಶಾಸ್ತ್ರಜ್ಞರಾದ ಡಾ.ಸೀಮಾ ಹುದ್ದಾರ,ಎನ್ ಸಿಡಿ ,ಡಿಪಿಸಿಯ ಡಾ.ಎ.ವಿ.ಪಾಟೀಲ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಪಿ.ನಾಯ್ಕರ,ಜಿಲ್ಲಾ ಆರೋಗ್ಯಶಿಕ್ಷಣಾಧಿಕಾರಿ ಶ್ರೀಮತಿ ಶಶಿಕಲಾ ಸಿನ್ನೂರ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಆರ್.ಎಸ್. ರಾಠೋಡ, ಎಂ.ವಿ.ಪಾಟೀಲ್, ಜಿಲ್ಲಾ ದತ್ತಾಂಶ ವ್ಯವಸ್ಥಾಪಕ ಪ್ರವೀಣಕುಮಾರ ಕಾಶಿನಕುಂಟಿ, ಸಮಾಜಕಾರ್ಯಕರ್ತ ಶಿವಲಿಂಗ ಕರಗಣ್ಣಿ , ಸರಕಾರಿ ಅರೇ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಇದ್ದರು.