ಸರ್ಕಾರಿ ನೌಕರರಿಗೆ ನಿವೃತ್ತಿ ಜೀವನ ಅನಿವಾರ್ಯ:ಬಿರಾದಾರ
ತಾಳಿಕೋಟೆ:ಜು.7: ಯಾವುದೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರಿಗೆ ನಿವೃತ್ತಿ ಎಂಬುದು ಅನಿವಾರ್ಯವಾದುದ್ದಾಗಿದೆ ಸೇವೆಯಲ್ಲಿದ್ದಾಗ ಮನಸ್ಪೂರ್ವಕವಾಗಿ ಸಲ್ಲಿಸುವ ಸೇವೆ ಇತರರಿಗೆ ಮಾದರಿಯಾಗಲಿದೆ ಅಂತಹ ಸೇವೆ ಡಿ.ಎಂ.ಬಸವಪಟ್ಟಣ ಅವರು ಮಾಡಿದ್ದಾರೆಂದು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವಂತ್ರಾಯಗೌಡ ಬಿರಾದಾರ ಅವರು ಹೇಳಿದರು.
ಶನಿವಾರರಂದು ಪಟ್ಟಣದ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಭಂಟನೂರ ಗ್ರಾಂಪಂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಡಿ.ಎಂ.ಬಸವಪಟ್ಟಣ ಅವರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡುತ್ತಿದ್ದ ಅವರು ಬಸವಪಟ್ಟಣ ಅವರು ಸೇವೆಯಲ್ಲಿದ್ದಾಗ ನಿಸ್ಕಲ್ಮಷವಾದ ಹೃದಯದೊಂದಿಗೆ ಹಿರಿ ಕಿರಿಯ ಅಧಿಕಾರಿಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು ಸೇವೆ ಸಲ್ಲಿಸುವಾಗ ಸಂತೃಪ್ತಿಯಿಂದ ಕೆಲಸವನ್ನು ಮಾಡಿದ್ದಾರೆ ರಜೆ ರಹೀತವಾದ ಅವರ ಸೇವೆ ಎಲ್ಲರಿಗೂ ಮಾದರಿಯಾಗಿದೆ ಗ್ರಾಂಪಂ ಕಾರ್ಯದರ್ಶಿಯಾಗಿದ್ದರೂ ಕೂಡಾ ಸರ್ಕಾರದ ಮಾಹಿತಿಗಳು ಕೇಳಿ ಬಂದಾಗ ಎಲ್ಲವನ್ನು ತಾವೇ ತಯಾರಿಸಿ ಅಧಿಕಾರಿಗಳ ಮುಂದೆ ಸಹಿಗೆ ಇಡುತ್ತಿದ್ದರು ಅವರ ಮಾರ್ಗದರ್ಶನ ಹಿರಿಯ ಅಧಿಕಾರಿಗಳೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಂತಹ ಉತ್ತಮ ವ್ಯಕ್ತಿತ್ವ ಹೊಂದಿದ ಬಸವ ಪಟ್ಟಣ ಅವರ ನಿವೃತ್ತಿ ಜೀವನ ಸುಖಕರವಾಗಲೆಂದು ಆಶಿಸಿದರು.
ಇನ್ನೋರ್ವ ತಾಪಂ ಸಹಾಯಕ ನಿರ್ದೇಶಕರಾದ ನೇರೆಗಾ ಶ್ರೀಮತಿ ಸುಜಾತಾ ಯಡ್ರಾಮಿ ಅವರು ಮಾತನಾಡಿ ನಿವೃತ್ತಿ ಜೀವನ ಸರ್ಕಾರಿ ನೌಕರರಿಗೆ ಅನಿವಾರ್ಯವಾಗಿದ್ದರೂ ಕೂಡಾ ಸೇವೆ ಸಲ್ಲಿಸುವಾಗ ಮಾಡುವ ಸೇವೆ ಇತರರಿಗೆ ಮಾದರಿಯಾಗಬೇಕು ಅಂತಹ ಮಾದರಿ ಸೇವೆ ಸಲ್ಲಿಸಿದ ಭಂಟನೂರ ಗ್ರಾಂಪಂ ಕಾರ್ಯದರ್ಶಿ ಡಿ.ಎಂ.ಬಸವಪಟ್ಟಣ ಅವರು ಅತ್ಯಂತ ಕ್ರೀಯಾಶೀಲ ಮತ್ತು ಹೃದಯವಂತರಾಗಿದ್ದಾರೆ ಅವರ ನಿವೃತ್ತಿ ಜೀವನ ಸುಖಕರವಾಗಲೆಂದು ಆಶಿಸಿದರು.
ಇದೇ ಸಮಯದಲ್ಲಿ ತಾಲೂಕಾ ಪಂಚಾಯತ್ ವತಿಯಿಂದ ಹಾಗೂ ತಾಲೂಕಿನ ಪಿಡಿಓ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಾಗೂ ತಾಲೂಕಿನ ಗ್ರೇಡ್-1, ಗ್ರೇಡ್-2 ಮತ್ತು ಎಸ್.ಡಿ.ಎ.ಎ ಅವರ ವತಿಯಿಂದ ಸೇವಾ ನಿವೃತಿ ಹೊಂದಿರುವ ಡಿ.ಎಂ.ಬಸವಪಟ್ಟಣ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಬದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಸಿ.ಎಸ್.ಮಠ, ಬಸನಗೌಡ ಚೌದ್ರಿ, ಪ್ರಭು ಚನ್ನೂರ, ಕಾರ್ಯದರ್ಶಿಗಳಾದ ಹಣಮಗೌಡ ಚೌದ್ರಿ, ಎಚ್.ಎ.ಪಟೇಲ, ಮಾಂತಗೌಡ ದರಿಗೋಳ, ಆರ್.ಬಿ.ಕಿರೇದಳ್ಳಿ, ಎಸ್.ಜಿ.ಅಲ್ಲಾಪೂರ, ಶಾಂತಯ್ಯ ಮಠ, ಸ್ವಪ್ನಾ ಬಿರಾದರ, ಮಲ್ಲಿಕಾರ್ಜುನ, ಶಿವಶಂಕರ ಬಿರಾದಾರ ಶಾಂತಪ್ಪ ಕಟ್ಟಿಮನಿ, ನರೇಗಾ ಸಿಬ್ಬಂದಿಗಳಾದ ಭೀಮಾಶಂಕರ. ಪಾಸೋಡಿ,ಮಲಕಪ್ಪ ಇದ್ದರು