ಗ್ರಾಮಗಳ ಸಮೀಕ್ಷೆ ಕಾರ್ಯಕ್ರಮ
ಬಾಗಲಕೋಟೆ,ಜು7: ಭಾರತ ದೇಶ ಹಳ್ಳಿಗಳಿಂದ ಕೂಡಿದ ದೇಶ ಹಳ್ಳಿಗಳೇ ಭಾರತದ ದೇಶದ ಬೆನ್ನೆಲುಬು ಪ್ರತಿ ಹಳ್ಳಿಗಳ ಬದಲಾವಣೆ ಮತ್ತು ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಬವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದ ಉನ್ನತ ಭಾರತ ಅಭಿಯಾನ ಸಂಯೋಜಕರಾದ ಡಾ.ರಮೇಶ ಯಾನಮಶೆಟ್ಟಿ ಹೇಳಿದರು. ಕೇಂದ್ರ ಸರಕಾರದ ಉನ್ನತ ಭಾರತ ಅಭಿಯಾನದ ಯೋಜನೆಯ ಅಡಿಯಲ್ಲಿ ಬಾಗಲಕೋಟ ಜಿಲ್ಲೆಯ ದತ್ತು ಪಡೆದ ಗ್ರಾಮಗಳಾದ ಬೇವಿನಮಟ್ಟಿ, ಮಲ್ಲಾಪುರ, ನೀರಲಕೇರಿ, ಮುಗಳೊಳ್ಳಿ ಮತ್ತು ಹೊನ್ನಾಕಟ್ಟಿ ಗ್ರಾಮಗಳಲ್ಲಿ ಆಯ್ದ 100 ಮನೆಗಳ ಸಮೀಕ್ಷೆಯನ್ನು ನಡೆಸಲಾಯಿತು.
ಈ ಸಮೀಕ್ಷೆಯಲ್ಲಿ ಪ್ರತಿ ಮನೆಗೆ ಪ್ರಶಿಕ್ಷಣಾರ್ಥಿಗಳು ಭೇಟಿ ನೀಡಿ ಮನೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಾಹಿತಿಯನ್ನು ಅಧ್ಯಯನ ಮಾಡಿದರು, ಅದರ ಜೊತೆ ಹಳ್ಳಿಗಳಲ್ಲಿ ಇರುವ ಮೂಲಭೂತ ಮತ್ತು ಸಾಮಾನ್ಯ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದರು. ಸಮೀಕ್ಷೆಯಲ್ಲಿ ಪ್ರತಿ ಒಂದು ಹಳ್ಳಿಯನ್ನು ಒಬ್ಬ-ಒಬ್ಬ ಉಪನ್ಯಾಸಕರು ದತ್ತು ಪಡೆದು ಪ್ರಶಿಕ್ಷಣಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ರಾಜೇಶ್ವರಿ ತೆಗ್ಗಿ, ಉಪನ್ಯಾಸಕಾರದ ಪೆÇ್ರ.ನಾಗರಾಜ ಸರ್ವದೆ, ಡಾ.ಸಿದ್ದಪ್ಪ ಭೂಮಣ್ಣವರ, ಪೆÇ್ರ.ವೆಂಕಟೇಶ ರೊಡ್ಡಣ್ಣನವರ, ಪೆÇ್ರ.ರಾಘವೇಂದ್ರ ಕುಲಕರ್ಣಿ ಮತ್ತು ಮಹಾವಿದ್ಯಾಲಯಾದ ಎಲ್ಲಾ ಪ್ರಶಿಕ್ಷಣಾರ್ಥಿಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.