ಸರಕಾರಿ ಶಾಲೆಯಲ್ಲಿ ಉಚಿತ ನೋಟ್ ಬುಕ್ ವಿತರಣೆ
ಮುದ್ಧೇಬಿಹಾಳ :ಜು.7: ಸಮಾಜದಲ್ಲಿ ಒಬ್ಬ ಮನುಷ್ಯನ ಉನ್ನತೀಕರಣ ಆಗಬೇಕಾದರೆ ಅವನ ಜೀವನದಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ, ಯಾವ ವ್ಯಕ್ತಿಯು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶ ನಮ್ಮ ನೀಮ್ಮೆಲ್ಲದಾಗಿರಬೇಕು,ಅದನ್ನರಿತುಕೊಂಡು ಇಂದು ನನ್ನಿಂದಾಗುವ ಸಹಾಯ ಮಕ್ಕಳಿಗೆ ಶಿಕ್ಷಣ ಕಲಿಯಲು ಸಾಧ್ಯವಾಗಲಿ ಎಂದು ನೋಟ್ ಬುಕ್ ಗಳನ್ನು ನೀಡುತ್ತಿದ್ದೇನೆ ಎಂದು ಶ್ರೀಶೈಲ್ ದೇಗಿನಾಳ ಹೇಳಿದರು.
ತಾಲೂಕಿನ ನೇಬಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ನೋಟ್ ಬುಕ್ ಗಳನ್ನು ವಿತರಿಸಿ ಮಾತನಾಡಿದ ಅವರು ಇಂದು ಮಕ್ಕಳಿಗೆ ನಾನು ನೋಟ್ ಬುಕ್ ಗಳನ್ನು ಹಂಚಿರುವದು ಕಾರಣ , ಶಿಕ್ಷಣ ಎಲ್ಲಾ ಮಕ್ಕಳ ಹಕ್ಕು, ಈ ಹಿಂದೆ ನಾನು ಶಾಲೆ ಕಲಿಯುವ ಸಂಧರ್ಭದಲ್ಲಿ ಶಿಕ್ಷಣ ಕಲಿಯಲು ತೊಂದರೆಯಾಗುತ್ತಿತ್ತು, ಆದರೆ ಇಂದಿನ ಮಕ್ಕಳಿಗೆ ಆ ತೊಂದರೆಯಾಗಬಾರದು ಎಂದು ಅಳಿಲು ಸೇವೆ ಮಾಡಿದ್ದೇನೆ ಎಂದರು.
ನಂತರ ಶಿಕ್ಷಕರಾದ ಎಸ್.ಬಿ.ಹೂಗಾರ ಮಾತನಾಡಿ ನಮ್ಮ ಶಾಲೆಯಲ್ಲಿ ಒಟ್ಟು 230 ವಿದ್ಯಾರ್ಥಿಗಳ ಕಲಿಕೆಗೆ ನೋಟ್ ಬುಕ್ ಗಳನ್ನು ನೀಡಿದ್ದು ಸಂತಷದ ಸಂಗತಿ , ಶ್ರೀಶೈಲ್ ನಮ್ಮ ಹಳೆಯ ವಿಧ್ಯಾರ್ಥಿ ಕೂಡಾ ಹೌದು, ಸಮಾಜಕ್ಕಾಗಿ ನಾನು ಎಂದು ಪರಿಕಲ್ಪನೆ ಹೊಂದಿರುವ ನನ್ನ ಹಳೆಯ ವಿಧ್ಯಾರ್ಥಿ ತಮ್ಮ ಕೆಲಸ ಕಾರ್ಯಗಳನ್ನು ಶಿಕ್ಷಣ ಕ್ಷೇತ್ರದ ಬಡಮಕ್ಕಳಿಗೆ ಪುಸ್ತಕ ನೀಡುವ ಮೂಲಕ ಸಹಾಯ ಮಾಡುತ್ತಿದ್ದಾರೆಂದು ಹೇಳಿಕೊಳ್ಳಲು ಹೆಮ್ಮೆಪಡುವುದಾಗಿ ಎಂದರು.
ಶಿಕ್ಷಕರಾದ ಬಿ ಎಂ ಕಡಿ ಮಾತನಾಡಿ ಮಕ್ಕಳ ಶಿಕ್ಷಣಕ್ಕೆ ಸುಮಾರು 45000 ಸಾವಿರಕ್ಕೂ ಹೆಚ್ಚಿನ ಹಣವನ್ನು ನೀಡಿರುವ ಮಹತ್ವದ ಕಾರ್ಯವನ್ನು ಪೆÇ್ರೀತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಆದ್ದರಿಂದ ನಾವೆಲ್ಲರೂ ಸೇರಿ ಇಂತಹ ಕಾರ್ಯವನ್ನು ಮಾಡೋಣ ಎಂದುವಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಶ್ರೀಶೈಲ್ ದೇಗಿನಾಳರನ್ನೂ ಸನ್ಮಾನಿಸಿದರು. ಶಾಲೆಯ ಮುಖ್ಯೋಪಾಧ್ಯಯ ಐ ಎ. ಹಾವರಗಿ ಶಿಕ್ಷಕ ಐ. ಎ.ಹಿರೇಮಠ ಪಿ ಆರ್ ನಾಯಕ ,ರವಿ ಗೌಡರ, ಬಿ ಅರ್ ರಾಠೋಡ ಶಿಕ್ಷಕಿಯರಾದ ಜಿ ಎಸ್ ತಾಳಿಕೋಟಿ , ಮಂಜುಳಾ ಕೆ ಗ್ರಾಮಸ್ಥರಾದ ಮಂಜುನಾಥ ಪಾಟೀಲ್, ವೀರೇಶ ಕೋಳೂರ , ಸಂಗಣ್ಣ ಬಿಸಲದಿನ್ನಿ , ನಿಂಗನಗೌಡ ಬಿರಾದಾರ , ಶಶಿಕುಮಾರ ಬ್ಯಾಲಾಳ , ಶಿವರಾಜ ರಾಠೋಡ , ಸಂಗಣ್ಣ ಚಲವಾದಿ , ಮುತ್ತಣ್ಣ ಚಲವಾದಿ ಇನ್ನೀತರರು ಇದ್ದರು.