ಕಿರ್ಲೋಸ್ಕರ, ಟೊಯೊಟಾ ಕಂಪನಿಯಿಂದ ನೇರ ಸಂದರ್ಶನ
ಹುಮನಾಬಾದ್:ಜು.7: ಪಟ್ಟಣದ ಶ್ರೀ ವೀರಭಧ್ರೇಶ್ವರ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿರುವ ಲಿಂಗೈಕ ಬಸವರಾಜ ಪಾಟೀಲ ಸಭಾಂಗಣದಲ್ಲಿ ಶುಕ್ರವಾರ ಕಿರ್ಲೋಸ್ಕರ, ಟೊಯೊಟಾ, ಟೆಕ್ಸ್ಟೈಲ್ ಮಷಿನರಿ ಪ್ರವೇಟ್ ಲಿಮಿಟೆಡ್ ಕಂಪನಿಯಿಂದ ಐಟಿಐ ಪಾಸಾದ ಮತ್ತು ಐಟಿಐನಲ್ಲಿ ದ್ವಿತಿಯ ವರ್ಷ ತರಬೇತಿ ಪಡೇಯುತ್ತಿರುವ ತರಬೇತಿದಾರರಿಗೆ ನೇರ ಸಂದರ್ಶನ ನಡೆಯಿತು.
ಕಂಪನಿಯ ನೆಮಕಾತಿ ವಿಭಾಗದ ವ್ಯವಸ್ಥಾಪಕ ಮಹೇಶ ಎಸ್ ರವರು ಮಾತನಾಡಿ, ಕಸದಿಂದ ರಸ ಅನ್ನುವ ಹಾಗೆ ತಮ್ಮೇಲ್ಲರ ಪ್ರಯತ್ನದಿಂದ ಯಸಸ್ಸು ಸಾಧ್ಯ, ಪ್ರತಿಯೊಂದು ಕೊರ್ಸ ಉತ್ತಮವೇ ಆಗಿರುತ್ತವೆ, ಅದು ದೊಡ್ಡದು ಇದು ಚಿಕ್ಕದು ಅದಕ್ಕೆ ಮಾನ್ಯತೆ ಇದೆ, ಇದಕ್ಕೆ ಮಾನ್ಯತೆ ಇದೆ, ಎಂಬ ಬಾವನೆಯನ್ನು ತೇಗೆದು ಹಾಕಿ, ಮುಕ್ತವಾದ ಮನಸ್ಸಿನಿಂದ ಯಾವುದೆ ಕಾರ್ಯ ಮಾಡಿದರು ಎಲ್ಲವು ಉತ್ತಮವಾಗಿಯೆ ಇರುತ್ತದೆ, ಎಂದರು.
ಸುಮಂತ ಸರ ರವರು ಮಾತನಾಡಿ, ಕೈಗಾರಿಕ ತರಬೇತಿಯಲ್ಲಿ ಅಂಕಗಳಿಗಿಂತ ಜ್ಞಾನಕ್ಕೆ ಹೆಚ್ಚಿನ ಪ್ರದಾನತೆ ಇರುತ್ತದೆ, ವಿಷಯ ಮತ್ತು ಸಂಪರ್ಕ ಭಾಷಾ ಜ್ಞಾನವಿರುವ ವಕ್ತಿ ಜಗತ್ತಿನಲ್ಲಿ ಯಾವುದೆ ಮೂಲೆಯಲ್ಲಿ ಬದಕಲು ಸಾಧ್ಯ ಎಂದು ತಿಳಿಸಿದರು.
ಸಂಸ್ಥೆಯ ಪ್ರಾಚಾರ್ಯ ಶಿವಕುಮಾರ ಧನಶೆಟ್ಟಿ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕ ಮಾತನಾಡಿದರು, ನೇರ ಸಂದರ್ಶನದಲ್ಲಿ ಸುಮಾರು 350 ತರಬೇತಿದಾರರು ಭಾಗವಹಿಸಿದ್ದರು, ಅದರಲ್ಲಿ 110 ವಿಧ್ಯಾರ್ಥಿಗಳಿಗೆ ಅಲ್ಲಿಯೆ ನೆಮಕಾತಿ ಆದೇಶ ನೀಡಲಾಯಿತು,
ಈ ಕಾರ್ಯಕ್ರಮದಲ್ಲಿ ವಿಶ್ವಾನಾಥ ವಿ ಬಿರಾದಾರ, ರಾಜೆಂದ್ರ ಠಾಕೂರ, ಶಶಿಕಾಂತ ರೆಡ್ಡಿ, ಮಲ್ಲಿಕಾರ್ಜುನ ನಂದಿ, ಅಶೋಕ ಪುಜಾರಿ, ಶಿವಪ್ರಕಾಶ ಖಪ್ಪರ, ಜಗಧೀಶ ಚಿತ್ರೇ, ಇಂದುಶೇಖರಂ ಡಿ, ಮಲ್ಲಮ್ಮಾ ಪಾಟಿಲ, ಸಬ್ಬನ ಆರತಿ, ತುನುಜಾ ಘಂಟೆ, ನಿರ್ಮಲೆ ಸತೀಶ, ರಾಜೇಶ ಎನ್, ನಿವೇಧಿತಾ, ವೈಶಾಲಿ ಪಂಚಾಳ, ಇದ್ದರು. ಅಮರ ಕುಲಕರ್ಣಿ ನಿರೂಪಿಸಿದರು, ರಮೇಶ ಹೊಮಮನಿ, ಬಿರಾದರ ವಂದಿಸಿದರು,