ಜನರ ನಿರೀಕ್ಷೆಗಳನ್ನು ಪೂರೈಸಿ
ಭಾಲ್ಕಿ:ಜು.7:ಬೀದರ್ ನ ಸಂಸದ ಸಾಗರ ಖಂಡ್ರೆ ಅವರು ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಕೊಂಡರು.
ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಮಠಕ್ಕೆ ಭೇಟಿ ನೀಡಿದ ಸಂಸದ ಖಂಡ್ರೆ ಅವರು ಶ್ರೀಗಳನ್ನು ಸನ್ಮಾನಿಸಿ, ಆಶೀರ್ವಾದ ಪಡೆದರು.
ನಂತರ ಶ್ರೀಗಳು ಸಂಸದ ಖಂಡ್ರೆ ಅವರನ್ನು ಆಶೀರ್ವದಿಸಿ ಬೀದರ್ ಕ್ಷೇತ್ರದ ಜನರು ಖಂಡ್ರೆ ಪರಿವಾರದ ಸಾಕಷ್ಟು ವಿಶ್ವಾಸವಿಟ್ಟು ತಮ್ಮನ್ನು ಕಿರಿಯ ವಯಸ್ಸಿನಲ್ಲೇ ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಜನರ ಕಷ್ಟ ಸುಖದಲ್ಲಿ ಭಾಗಿಯಾಗಿ ಅವರ ನಿರೀಕ್ಷೆಗಳನ್ನು ಪೂರೈಸಿ ಉತ್ತಮ ಸಂಸದರಾಗಿ ಗುರುತಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬೀದರ್ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ್ ತೇಗಂಪೂರ, ರವಿ ಬೊರವೇಲ್ಸ್ ಗ್ರೂಪ್‍ನ ಮಾಲೀಕ ರವೀಂದ್ರ ಚಿಡಗುಪ್ಪೆ, ಪ್ರಮುಖರಾದ ಬಾಪುರಾವ ದೇಶಮುಖ, ಜಗನ್ನಾಥ ಕರಂಜೆ, ರಾಜಕುಮಾರ ನಾಯ್ಕೋಡೆ, ಪವನ ಬಿರಾದಾರ್, ಸುದರ್ಶನ ಬಿರಾದಾರ್, ಸತೀಶ ದೇಶಮುಖ, ಟಿಂಕು ರಾಜಭವನ, ಬಸವರಾಜ ಪಾಟೀಲ್ ಸೇರಿದಂತೆ ಹಲವರು ಇದ್ದರು.