ಪ್ರತಿಯೊಬ್ಬರು ಗಿಡಮರಗಳನ್ನು ನೆಟ್ಟು ಪೋಷಿಸಬೇಕು : ಗಜಾನನ ಮಂಗಸೂಳಿ
ಅಥಣಿ:ಜು.7: ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಹೆಚ್ಚುತ್ತಿರುವ ತಾಪಮಾನವನ್ನು ತಗ್ಗಿಸಲು ಪ್ರತಿಯೊಬ್ಬರೂ ಗಿಡಮರಗಳನ್ನು ನೆಟ್ಟು ಪೆÇೀಷಿಸುವುದು ಇಂದಿನ ಅಗತ್ಯವಾಗಿದೆ ಎಂದು ಅಥಣಿ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.
ಅವರು ಅಥಣಿ ಪಟ್ಟಣದ ಪ್ರಶಾಂತ ನಗರದಲ್ಲಿ ಅಥಣಿ ರೋಟರಿ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾನವನ ಅತಿಯಾದ ಸ್ವಾರ್ಥಕ್ಕೆ ಗಿಡಮರಗಳನ್ನು ಕಡಿಯಲಾಗುತ್ತಿದೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮವಾಗಿ ಜಾಗತಿಕ ತಾಪಮಾನ ಹೆಚ್ಚಾಗುವುದಲ್ಲದೆ, ಸಕಾಲಕ್ಕೆ ಮಳೆ ಆಗುತ್ತಿಲ್ಲ. ನಾವು ಪ್ರತಿವರ್ಷ ವನಮಹೋತ್ಸವ ನೆಪದಲ್ಲಿ ಸಸಿಗಳನ್ನು ನೆಟ್ಟರೆ ಸಾಲದು, ಗಿಡಗಳನ್ನು ದತ್ತು ಪಡೆದುಕೊಂಡು ಸಂರಕ್ಷಣೆ ಮಾಡಿದಾಗ ಅವುಗಳ ಬೆಳವಣಿಗೆ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಅಥಣಿ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಅರುಣ ಸೌದಾಗರ ಮಾತನಾಡಿ ಮಾನವ ಇಂದು ತನ್ನ ಸ್ವಾರ್ಥಕ್ಕಾಗಿ ಗಿಡಮರಗಳನ್ನು ಕಡೆದು ವಾತಾವರಣ ಕಲುಷಿತಗೊಳಿಸುತ್ತಿದ್ದಾನೆ. ಇದರಿಂದ ವಾತಾವರಣದ ಮೇಲೆ ದುಷ್ಪರಿಣಾಮ ಬೀರುತ್ತದೆ, ಬರಗಾಲ ಸಮಸ್ಯೆ, ಆಕ್ಸಿಜನ್ ಸಮಸ್ಯೆ ಮನುಕುಲಕ್ಕೆ ಎದುರಾಗುತ್ತಿವೆ. ಕೈಗಾರಿಕಾ ಪ್ರದೇಶಗಳು ಸೇರಿದಂತೆ, ರಸ್ತೆ ಬದಿಗೆ, ಶಾಲಾ ಕಾಲೇಜು ಆವರಣಗಳಲ್ಲಿ, ರೈತರು ತಮ್ಮ ಹೊಲಗಳಲ್ಲಿ ಗಿಡ ಮರಗಳನ್ನು ಬೆಳೆಯುವಂತೆ ಮನವಿ ಮಾಡಿದರು. ರೋಟರಿ ಸಂಸ್ಥೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ಬೆಳೆಸುವ ಸಂಕಲ್ಪ ಹೊಂದಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಪಿ ಪಿ ಮಿರಜ, ಸಚಿನ ದೇಸಾಯಿ, ಶೇಖರ ಕೋಲಾರ, ಬಾಲಚಂದ್ರ ಬುಕೀಟಗಾರ, ಭರತ್ ಸೋಮಯ್ಯ, ಡಿ ಡಿ ಮೇಕನಮರಡಿ, ಅನಿಲ್ ದೇಶಪಾಂಡೆ, ಶ್ರೀಕಾಂತ್ ಅಥಣಿ, ಇನ್ನರ್ ವ್ಹಿಲ್ ಕ್ಲಬ್ ನ ಅಧ್ಯಕ್ಷ ಲಲಿತಾ ಮೇಕನಮರಡಿ, ತೃಪ್ತಿ ಕುಲಕರ್ಣಿ, ವೈಶಾಲಿ ಮಠಪತಿ, ಡಾ. ವರ್ಷಾರಾಣಿ ಮೇತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.