ಗಿಡವನ್ನು ನಾವು ರಕ್ಷಿಸಿದರೆ ಗಿಡವು ನಮ್ಮನು ರಕ್ಷಿಸುತ್ತದೆ : ಅಶ್ವಿನಿ ಚವ್ಹಾಣ
ಕಲಬುರಗಿ:ಜು.7: ನಗರದ ಬಿದ್ದಾಪುರ ಕಾಲೋನಿಯ ಶ್ರೀ ವೀರ ತಪಸ್ವಿ ಹಿರಿಯ ಪ್ರಾರ್ಥಮಿಕ ಶಾಲೆ ಆವರಣದಲ್ಲಿ ತ್ರೀಶಾ ಎಜುಕೇಶನ್ ಚಾರಿಟೇಬಲ್ ಮತ್ತು ವೇಲಫರ್ ಟ್ರಸ್ಟ್ ಆಯೋಜಿಸಿದ ಸಸಿ ನೆಡುವ ಕಾರ್ಯಕ್ರಮವನ್ನು ತ್ರೀಶಾ ಎಜುಕೇಶನ್ ಚಾರಿಟೇಬಲ್ ಮತ್ತು ವೇಲಫರ್ ಟ್ರಸ್ಟ್ ಅಧ್ಯಕ್ಷೆ ಅಶ್ವಿನಿ ಚವ್ಹಾಣ ಉದ್ಘಾಟಿಸಿ ಮಾತನಾಡುತ್ತಾ ಮಾನವನ ಆರೋಗ್ಯದ ವೃದ್ಧಿಗೆ ಸಸ್ಯ ಸಂಪತ್ತು ಅವಶ್ಯಕತೆ ಇದೆ ಬಿಸಿಲಿನ ಬೇಗೆಯಿಂದ ನಾವು ಹೊರಬೇರಬೇಕಾದರೆ ಪ್ರತಿ ಮನೆಗೊಂದು ಸಸ್ಯ ನೆಡಬೇಕಾಗಿರುವುದು ಅನಿವಾರ್ಯ. ಆಮ್ಲಜನಕದ ಕೊರತೆಯಿಂದ ಹೊರ ಬರಬೇಕಾದರೆ ನಾವು ಗಿಡಗಳನ್ನು ಬೆಳೆಸುವುದು ನಮ್ಮ ಜವಾಬ್ದಾರಿ. ಹಾಗಾಗಿ ಗಿಡವನ್ನು ನಾವು ರಕ್ಷಿಸಿದರೆ ಗಿಡವು ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವೀರ ತಪಸ್ವಿ ಮುಖ್ಯಗುರು ಗುರುರಾಜ್ ಕುಲಕರ್ಣಿ, ಮುಖ್ಯಗುರು ವೀರೇಶ ಮಠ, ಸಹ ಶಿಕ್ಷಕ ಶಿವಲಿಂಗ ಗೋಳೆ, ಶಾಲಾಸಿಬ್ಬಂದಿ ಅಣ್ಣೆಮ್ಮ ಸುಲೇಗಾವ, ಭಾಗ್ಯ ಲಕ್ಷ್ಮಿ ವಾಲಿ ಉಪಸ್ಥಿತರಿದ್ದರು.