ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ
ಲಕ್ಷ್ಮೇಶ್ವರ,ಜು7: ಸರ್ಕಾರ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಲಕ್ಷ್ಮೇಶ್ವರ ತಾಲೂಕಾ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ಕಲ್ಲೂರ ಹಾಗೂ ಲಕ್ಷ್ಮೇಶ್ವರ ತಾಲೂಕಾ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಲ್.ಎಸ್.ಅರಳಹಳ್ಳಿ ಹೇಳಿದರು.
ಅವರು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ತಾಲೂಕ ನೌಕರರ ಸಂಘದಿಂದ ಗ್ರೇಡ್ 2 ತಹಸೀಲ್ದಾರ ಮಂಜುನಾಥ ಅಮಾಸಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಸರಕಾರ, ರಾಜ್ಯ ಸರ್ಕಾರಿ ಶಾಲೆಗಳ ನೌಕರರಿಗೆ ಒಂದು ನೀತಿ ಆದರೆ,ಅನುದಾನಿತ ಶಾಲಾ ನೌಕರರಿಗೆ ಒಂದು ನೀತಿ ಮಾಡುತ್ತಾ ಗೊಂದಲ ಸೃಷ್ಟಿಸುತ್ತಿದೆ,ಇದು ನಿಲ್ಲಬೇಕು ಇಲ್ಲದಿದ್ದರೆ ಮುಂದೊಂದು ದಿನ ಅನುದಾನಿತ ಶಾಲಾ ನೌಕರರು ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದರು. 2006ರಲ್ಲಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ನೇಮಕಾತಿ ಆದವರಿಗೆ ವಯೋ ನಿವೃತ್ತಿ ನಂತರ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಿಗದೆ ಬೀದಿಗೆ ಬೀಳಬೇಕಾದ ಪರಿಸ್ಥಿತಿ ಬಂದಿದೆ ಆದ್ದರಿಂದ ರಾಜ್ಯ ಸರ್ಕಾರ ಇದಕ್ಕೆ ಅವಕಾಶ ನೀಡದೆ ಸಮಾನ ದುಡಿಮೆ ಸಮಾನ ವೇತನದ ಅಡಿಯಲ್ಲಿ ಎಲ್ಲ ನೌಕರರ ವರ್ಗದವರನ್ನು ಕಾಣಬೇಕು ಮತ್ತು ಅನುದಾನಿತ ಶಾಲಾ ನೌಕರರಿಗೆ ಪಿಂಚಣಿ ಸೌಲಭ್ಯ ಮುಂದುವರೆಸಬೇಕು ಓ ಪಿ ಎಸ್ ಜಾರಿ ವಿಳಂಬವಾದಲ್ಲಿ ರಾಜ್ಯ ಸರಕಾರಿ ನೌಕರಿಗೆ ನೀಡುತ್ತಿರುವಂತೆ ಎನ್ ಪಿ ಎಸ್ ಯಥಾವತ್ತಾಗಿ ಜಾರಿ ಮಾಡುವುದು ನೇಮಕಾತಿ ಪ್ರಾಧಿಕಾರದ ವಂತಿಕೆಯನ್ನು ಆಡಳಿತ ಮಂಡಳಿಗಳ ಬದಲಾಗಿ ಸರಕಾರವು ಭರಿಸಲು ಕ್ರಮ ವಹಿಸಬೇಕು, ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ (ವೇತನ, ನಿವೃತ್ತಿ ವೇತನ ಇತರೆ ಸೌಲಭ್ಯಗಳ ನಿಯಂತ್ರಣ ) ವಿದೇಯಕ 2014 ಕ್ಕೆ ತಿದ್ದುಪಡಿ ತಂದು ರದ್ದುಪಡಿಸಿ ಭವಿಷ್ಯ ವರ್ತಿಯಾಗಿ ಜಾರಿಗೆ ಬರುವಂತೆ ಕ್ರಮ ವಹಿಸುವುದು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಬೇಕು, ಅನುದಾನಿತ ನೌಕರರಿಗೂ ಕೂಡ ಸರ್ಕಾರಿ ನೌಕರರಂತೆ ಜ್ಯೋತಿ ಸಂಜೀವಿನಿ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು,
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎ. ಜಿ. ಲಿಂಗಶೆಟ್ಟಿ, ಕಾರ್ಯದರ್ಶಿ ಡಿ. ಎನ್. ಖರಾಟೆ, ಎಸ್. ವಿ. ಪಾಟೀಲ್, ಎಸ್. ಎಂ. ಹಾದಿಮನಿ, ಕೆ. ರವಿ, ಟಿ. ಎಸ್. ಪೂಜಾರ, ಎ. ಬಿ. ಹೂಗಾರ, ವಿ. ಬಿ. ಯಲ್ಲಾಪುರ, ಎಸ್. ಎಸ್. ಮಠದ, ಎಸ್. ಜೆ. ಪವಾರ, ಸಿ. ಎಂ. ಕಿಳ್ಳಿ, ಪಿ. ಎಲ್. ಪಾಟೀಲ, ಎಸ್. ಬಿ. ಬೆಟಗೇರಿ, ಎಂ. ಎಸ್. ಭೀರನೂರ, ಆರ್. ಸಿ. ಉಮಚಗಿ, ವಿ. ಸಿ. ಬೆಂಡಿಗೇರಿ ಅನೇಕರು ಇದ್ದರು.