ಸಂಪೂರ್ಣತಾ ಅಭಿಯಾನ ಉತ್ಸವ ಯಶಸ್ವಿಗಳಿಸಲು ಕರೆ
ಬೀದರ್:ಜು.7: ಜಿಲ್ಲೆಯ ಮಹತ್ವಕಾಂಕ್ಷಿ ತಾಲ್ಲೂಕುಗಳಾದ ಬೀದರ, ಹುಮನಾಬಾ, ಔರಾದ, ಭಾಲ್ಕಿ, ಬಸವಕಲ್ಯಾಣ ಚಿಟಗುಪ್ಪಾ ವತಿಯಿಂದ ಕೇಂದ್ರ ಸರ್ಕಾರದ ನೀತಿ ಆಯೋಗದ ಯೋಜನೆಯಡಿ ಸಂಪೂರ್ಣತಾ ಅಭಿಯಾನವನ್ನು ಬೀದರ ಜಿಲ್ಲಾ ಪಂಚಾಯತ ಕಛೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ
ಮುಖ್ಯ ಯೋಜನಾಧಿಕಾರಿ ಕಿಶೋರ ಕುಮಾರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ “ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮ”ದಡಿ “ಸಂಪೂರ್ಣತಾ ಅಭಿಯಾನ ಉತ್ಸವ” ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ತಾಲೂಕಾ ಮಟ್ಟದಲ್ಲಿನ ಜನರ ಜೀವನ ಮಟ್ಟ ಸುಧಾರಿಸಲು ಶ್ರಮಿಸೋಣ ಅವರು ಕರೆ ನೀಡಿದರು.
ತಾಲ್ಲೂಕಿನಲ್ಲಿ ಜನರ ಜೀವನ ಮಟ್ಟವನ್ನು ಸುಧಾರಿಸಲು ಪ್ರಮುಖ ಸೇವಾ ವಲಯಗಳಾದ ಆರೋಗ್ಯ, ಪೌಷ್ಠಿಕತೆ, ಶಿಕ್ಷಣ, ಕುಡಿಯುವ ನೀರು ಮತ್ತು ನೈರ್ಮಲ್ಯ, ಕೃಷಿ, ಜಲ ಸಂಪನ್ಮೂಲಗಳು, ಆರ್ಥಿಕ ಸೇರ್ಪಡೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮೇಲಿನ ಎಲ್ಲಾ ವಲಯಗಳಲ್ಲಿ 2 ವರ್ಷಗಳ ಅವಧಿಯಲ್ಲಿ ರಾಜ್ಯ ಮಟ್ಟದ ಸರಾಸರಿ ಅಭಿವೃದ್ಧಿಯ
ಗುರಿಯನ್ನು ಹೊಂದಲಾಗಿದೆ ಎಂದರು.
ಸರ್ಕಾರ ಹಿರಿಯ ಲೆಕ್ಕಧಿಕಾರಿ ಶಶಿ ಮಾತನಾಡಿ ಜುಲೈ 4 ರಿಂದ ಸೆಪ್ಟೆಂಬರ್ 30 ವರೆಗೆ ಈ ಅಭಿಯಾನವು ನಡೆಯಲಿದೆ ಎಂದ ಅವರು ಭಾರತ ಸರ್ಕಾರದ ನೀತಿ ಆಯೋಗದವರು ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮದ ಯಶಸ್ಸಿನ ಆಧಾರದನ್ವಯ ದೇಶದಲ್ಲಿ 39 ಬಹು ಆಯಾಮದ ಸೂಚ್ಯಂಕಗಳಲ್ಲಿ ರಾಜ್ಯ ಮತ್ತು ಕೇಂದ್ರ ಮಟ್ಟದ ಸರಾಸರಿ ಅಭಿವೃದ್ಧಿಗಿಂತ ಕಡಿಮೆ ಇರುವ ತಾಲ್ಲೂಕುಗಳನ್ನು ಮಹತ್ವಾಕಾಂಕ್ಷಿ ತಾಲ್ಲೂಕುಗಳೆಂದು ಆಯ್ಕೆ ಮಾಡಿ ರುತ್ತಾರೆ ಎಂದು ಹೇಳಿದರು
ಜಿಲ್ಲಾ ಸಾಂಖ್ಯೆ ಸಂಗ್ರಹಣಾ ಅಧಿಕಾರಿ ಸುವರ್ಣಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ , ಕೃಷಿ ಇಲಾಖೆ, ಆರ್.ಸಿ.ಎಚ್ ಅಧಿಕಾರಿಗಳು, ತಾಲೂಕು ಶಿಶು ಅಭಿವೃ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.