ಅ.ಭಾ.ವೀ.ಲಿಂ.ಮಹಾಸಭಾ ಜಿಲ್ಲಾ ಘಟಕ ಚುನಾವಣೆ ಅವಿರೋಧ ಆಯ್ಕೆ ಬೇಡ, ಚುನಾವಣೆ ನಡೆಯಲಿ: ಸಾರಂಗಧರಶ್ರೀ
ಕಲಬುರಗಿ:ಜು.7: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಜಿಲ್ಲಾಘಟಕದಚುನಾವಣೆಜುಲೈ 21ರಂದು ನಡೆಯಲಿದ್ದು, ಅವಿರೋಧಆಯ್ಕೆಗೆಒತ್ತು ನೀಡದೆ ಪ್ರಜಾಸತ್ತಾತ್ಮಕವಾಗಿ ಮತದಾನದ ಮೂಲಕ ಚುನಾವಣೆ ಕೈಗೊಳ್ಳಬೇಕೆಂದು ಜಗದ್ಗುರು ಶ್ರೀಶೈಲ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಈ ಕುರಿತುಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವಅವರು, ಮಹಾಸಭಾ ಹಾಲಿ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ ಸೇರಿದಂತೆಇನ್ನಿತರರುಚುನಾವಣಾಕಣದಲ್ಲಿದ್ದಾರೆ.ಕಳೆದ ಐದು ವರ್ಷಗಳಲ್ಲಿ ಮೋದಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.ಮುಂಬರುವ ದಿನಗಳಲ್ಲಿ ಇನ್ನೂಒಂದಷ್ಟುಅಭಿವೃದ್ಧಿ ಕಾರ್ಯಗಳನ್ನು ಅವರು ಮುಂದುವರೆಸಿಕೊಂಡು ಹೋಗಬೇಕಿದೆ.ಹೀಗಿರುವಾಗ, ಇದ್ದಕ್ಕಿದ್ದಂತೆ ಮಧ್ಯದಲ್ಲಿ ಬರುವ ಕೆಲವರುಅವಿರೋಧಆಯ್ಕೆಯ ಗುಲ್ಲೆಬ್ಬಿಸಿ ಮತದಾರರನ್ನು ಹಾದಿ ತಪ್ಪುವಂತೆ ಮಾಡುವುದು ಸರಿಯಲ್ಲ. ಇದರ ಬದಲು, ಮತದಾನದ ಮೂಲಕ ಚುನಾವಣೆಕೈಗೊಂಡಿದ್ದಾದರೆಮತದಾರರು ಗುಪ್ತ ಮತದಾನದ ಮೂಲಕ ತಮ್ಮಆಯ್ಕೆಯಅಭ್ಯರ್ಥಿಯನ್ನು ನಿರ್ಭೀತವಾಗಿಆಯ್ಕೆ ಮಾಡಲು ಅವಕಾಶ ದೊರಕಿಸಿಕೊಟ್ಟಂತಾಗುತ್ತದೆ ಎಂದಿದ್ದಾರೆ.
ಹಾಗೊಂದು ವೇಳೆ, ವೀರಶೈವ-ಲಿಂಗಾಯತ ಮಹಾಸಭಾಜಿಲ್ಲಾಘಟಕದಚುನಾವಣೆಯಲ್ಲಿಅವಿರೋಧಆಯ್ಕೆಗೆ ಪ್ರಾಶಸ್ತ್ಯ ನೀಡುವುದಾದರೆ 12ನೇ ಶತಮಾನದಲ್ಲಿ ಬಸವಾದಿ ಶರಣರು ಸಾರಿ ಹೇಳಿದ ಪ್ರಜಾತಂತ್ರ ವ್ಯವಸ್ಥೆಗೆಉದ್ದೇಶಪೂರ್ವಕವಾಗಿಅಪಮಾನ ಮಾಡಿದಂತಾಗುತ್ತದೆ. ಮೇಲಾಗಿ, ಬಸವಾದಿ ಶರಣರ ಹಿತವಚನಗಳಿಂದಲೇ ಅಸ್ತಿತ್ವ ಕಾಯ್ದುಕೊಂಡಿರುವ ವೀರಶೈವ-ಲಿಂಗಾಯತ ಸಮುದಾಯಶರಣರ ಪ್ರಜಾತಂತ್ರ ವ್ಯವಸ್ಥೆಯನ್ನು ಧಿಕ್ಕರಿಸಿದ್ದಾದಲ್ಲಿ ಇತರ ಸಮುದಾಯಗಳ ದೃಷ್ಟಿಯಲ್ಲಿ ನಗೆಪಾಟಲಿಗೆಈಡಾಗುತ್ತದೆಎಂದು ಸಾರಂಗಧರಶ್ರೀ ಮಾರ್ಗದರ್ಶನ ನೀಡಿದ್ದಾರೆ.
ವೀರಶೈವ-ಲಿಂಗಾಯತ ಸಮುದಾಯದ ಸಚಿವರು, ಶಾಸಕರು ಹಾಗೂ ಹಿರಿಯ ಮುಖಂಡರು ಈ ನಿಟ್ಟಿನಲ್ಲಿ ಪೂರಕವಾಗಿಚಿಂತನೆ ನಡೆಸುವ ಮೂಲಕ ಚುನಾವಣೆಗೆಒತ್ತು ನೀಡಬೇಕೆಂದು ಕಿವಿಮಾತು ಹೇಳಿರುವ ಶ್ರೀಗಳು, ಒಂದುವೇಳೆ, ಅವಿರೋಧಆಯ್ಕೆಗೆಒತ್ತು ನೀಡಿದ್ದಾದರೆಇದಕ್ಕೆತಮ್ಮ ವಿರೋಧವಿದೆಎಂದುಅವರು ಸ್ಪಷ್ಟಪಡಿಸಿದ್ದಾರೆ.