ಕಸಾಪ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ
ಶಿಡ್ಲಘಟ್ಟ,ಜು೭:ಮಕ್ಕಳು ಎಂದಿಗೂ ಶಿಕ್ಷಣ ವಂಚಿತರಾಗಬಾರದು ಉತ್ತಮ ವಿದ್ಯಾಭ್ಯಾಸದಿಂದ ಈ ದೇಶಕ್ಕೆ ಕೊಡುಗೆ ನೀಡುವಂತವರಾಗಿ ಬೆಳೆಯಬೇಕು, ಈ ನಾಡಿಗೆ ಕೀರ್ತಿ ತರುವಂತವರಾಗಬೇಕು ಎಂದು ಶಾಸಕ ಬಿ.ಎನ್ ರವಿಕುಮಾರ್ ಹೇಳಿದರು.
ನಗರದ ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನೂತನವಾಗಿ ಆಯ್ಕೆಯಾದ ಅದ್ಯಕ್ಷರ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಹೆಚ್ಚು ಅನುದಾನಗಳನ್ನು ತಂದು ಕ್ಷೇತ್ರದ ಜನ ಸುಬೀಕ್ಷೆಯಿಂದಿರಲು ಒತ್ತು ನೀಡುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಾನು ಶ್ರಮಿಸುತ್ತೇನೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಪ್ರತಿನಿಧಿಯ ಸಂಸ್ಥೆಯಾಗಿದ್ದು ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುವಂತಾಗಲಿ ನೂತನವಾಗಿ ಅಧ್ಯಕ್ಷರಿಗೆ ಅಭಿನಂದನೆ ತಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ ಮಾತನಾಡಿ ಕನ್ನಡ ಬಾಷೆ ಕೇವಲ ಅಕ್ಷರ ಪದವಲ್ಲ ಅದು ನಮ್ಮ ನಾಡಿ ಮಿಡಿತ ಜಗತ್ತಿನ ಯಾವ ಭಾಷೆಗೂ ಕಡಿಮೆಯಿಲ್ಲ, ಪಂಪನಿಂದ ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿಗಳನ್ನು ದಕ್ಕಿಸಿಕೊಂಡಿದ್ದಾರೆ. ಪರಿಷತ್ತು ಕೇವಲ ಸಾಹಿತ್ಯದ ಚಟುವಟಿಕೆಗೆ ಮಾತ್ರ ಸೀಮಿತವಾಗಬಾರದು. ಮುಂದಿನ ದಿನಗಳಲ್ಲಿ ಸಾಹಿತ್ಯದೊಂದಿಗೆ, ಕಲೆ, ಸಾಂಸ್ಕೃತಿಕ ಚಟುವಟಿಕೆಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಮಕ್ಕಳಲ್ಲಿ ಪ್ರತಿಭೆಗಳನ್ನು ಹೊರ ತರುವ ಕೆಲಸವಾಗಬೇಕು ಎಂದರು.
೨೦೨೪?೨೫ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಅಭಿನಂದಿಸಿದರು
ಕನ್ನಡ ಸಾಹಿತ್ಯ ಪರಿಷತ್ತು ನೂತನ ತಾಲ್ಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ನಿಕಪಪೂರ್ವ ಅಧ್ಯಕ್ಷರು ಅನಂತ್ ಕೃಷ್ಣ, ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ತಾದೂರು ರಘು, ಮುನಿಕೆಂಪಣ್ಣ, ವೆಂಕಟಸ್ವಾಮಿ, ಮಲ್ಲಿಕಾರ್ಜುನ, ಶಿವಶಂಕರ್,ಟಿ.ವಿ ಚಂದ್ರಶೇಕರ್, ಮುನಿನಾರಾಯಣಪ್ಪ, ಮುನಿಬಯ್ಯಣ್ಣ, ವಕ್ಕಲಿಗರ ಸಂಘದ ಅದ್ಯಕ್ಷ ನಾರಾಯಣಸ್ವಾಮಿ, ನಗರ್ತ ಸಂಘದ ಅಧ್ಯಕ್ಷ ಶಿವಶಂಕರ್,ಎಸ್.ವಿ ನಾಗರಾಜು, ಮುನಿನಂಜಪ್ಪ, ಸತೀಶ್ ಕನ್ನಡ ಸಾಹಿತಿಗಳು,ರೈತ ಮುಖಂಡರು ವಿದ್ಯಾರ್ಥಿಗಳು ಹಾಜರಿದ್ದರು.