ಸಿಎಂ ವಿರುದ್ಧ ದ್ವೇಷದ ರಾಜಕಾರಣ
ಸಂಜೆವಾಣಿ ನ್ಯೂಸ್
ಮೈಸೂರು.ಜು.07:-ಮುಡಾ ಹಗರಣ ವಿಚಾರದಲ್ಲಿ ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ನಿಗಮ ಮಂಡಳಿ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮ್ ಹೇಳಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣ ವಿಚಾರದಲ್ಲಿ ತುಂಬಾ ಕೆಳಮಟ್ಟದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಮಾತನಾಡುತ್ತಿರುವುದು ಸರಿಯಲ್ಲ. ಅವರ ನಾಯಕತ್ವ, ಯಶಸ್ಸು ಸಹಿಸದೆ ತೇಜೋವಧೆ ಮಾಡುತ್ತಿರುವ ಹುನ್ನಾರ ಇದು. ಕುಟುಂಬದವರನ್ನು ಮಧ್ಯೆ ತಂದು ಮುಜಗರ ಮಾಡುತ್ತಿರುವುದು ಅವರಿಗೆ ಶೋಭೆ ತರವುದಿಲ್ಲ ಎಂದರು.
ವಿಶ್ವನಾಥ್ ಅನ್ನ ಹಾಕಿದ ಮನೆಗೆ ಕನ್ನ ಹಾಕಿದವರು. ದೇವರಾಜ್ ಅರಸ್, ಸಿದ್ದರಾಮಯ್ಯ, ದೇವೇಗೌಡರಿಗೆ ದ್ರೋಹ ಬಗೆದವರು. ಇದು ಅವರ ರಾಜಕಾರಣದ ನಿಯತ್ತು. ಇದುವರೆಗೂ ಯಾವೊಬ್ಬ ನಾಯಕನನ್ನು ಬೆಳೆಸಿಲ್ಲ. ಕೇವಲ ಪಕ್ಷಾಂತರಿಯಾಗಿ ಸ್ವಂತ ಬೆಳವಣಿಗೆ ಹಾಗೂ ಸ್ವಾರ್ಥ ಮನೋಭಾವವಕ್ಕೆ ಹಂಬಲಿಸಿದವರು ಎಂದು ಕಿಡಿಕಾರಿದರು.
ರಾಜ್ಯಕ್ಕೆ ಸಿದ್ದರಾಮಯ್ಯನವರಂತಹ ಮುಖ್ಯಮಂತ್ರಿ ಮುಂದೆ ಸಿಗುವುದಿಲ್ಲ. ಅವರೊಬ್ಬ ಅಹಿಂದ ನಾಯಕ. ಅಂತಹವರನ್ನು ಸಿಎಂ ಪದವಿಯಿಂದ ಕೆಳಗಿಳಿಯಿರಿ ಎಂದು ಕೇಳುವುದು ಯಾವ ನೀತಿ ಧೋರಣೆ ಎಂದು ಪ್ರಶ್ನಿಸಿದ ಅವರು, ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ಫಲಿಸುವುದಿಲ್ಲ ಎಂದರು.
ಕೋಟೆಹುಂಡಿ ಮಹಾದೇವ, ಜವರಪ್ಪ, ಶಿವಕುಮಾರ್, ಬಿ.ಜವರೇಗೌಡ, ರೇವಣ್ಣ ಇದ್ದರು.