ಮೃತಪಟ್ಟ ಇಬ್ಬರು ಮಹಿಳಾ ನೋಂದಾಯಿತ ಕಟ್ಟಡ ಕಾರ್ಮಿಕರ ವಾರಸುದಾರರಿಗೆಅಂತ್ಯಕ್ರಿಯೆ ಅನುಗ್ರಹ ಧನರಾಶಿ ತಲಾ 75,000 ರೂ.ಗಳ ಮೊತ್ತದ ಚೆಕ್ ವಿತರಣೆ
ಕಲಬುರಗಿ:ಜು.6:ನೋಂದಾಯಿತ ಕಟ್ಟಡ ಕಾರ್ಮಿಕರಾದ ಆಳಂದ ತಾಲೂಕಿನ ಕೆರಿ ಅಂಬಲಗಾ ಗ್ರಾಮದ ಶರಣಮ್ಮ ಗಂಡ ಅಂಬಾದಸ್ ಹಾಗೂ ಕಲಬುರಗಿ ತಾಲೂಕಿನ ತಾಜ್‍ಸುಲ್ತಾನಪುರ ಗ್ರಾಮದ ಚಂದಮ್ಮ ಗಂಡ ಬಾಬುರಾವ ಇವರು ದಿನಾಂಕ: 07-04-2024 ರಂದು ಕಲಬುರಗಿ ನಗರ ಹೊರವಲಯದ ತಾವರಗೇರಾ ಕ್ರಾಸ್ ಬಳಿ ಕೊಲೆಯಾಗಿ ಮೃತಪಟ್ಟಿರುತ್ತಾರೆ. ಆದ್ದರಿಂದ ಮೃತಪಟ್ಟ ಇಬ್ಬರು ಮಹಿಳಾ ನೋಂದಾಯಿತ ಕಟ್ಟಡ ಕಾರ್ಮಿಕ ಫಲಾನುಭವಿಗಳ ಮನೆಗೆ ತೆರಳಿ ಅವರ ವಾರಸುದಾರರಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೀಡಲಾಗುವ ಅಂತ್ಯಕ್ರಿಯೆ ಅನುಗ್ರಹ ಧನರಾಶಿ ತಲಾ ಮೊತ್ತ 75,000 ರೂ.ಗಳ ಚೆಕ್‍ಗಳನ್ನು ಕಾರ್ಮಿಕ ಆಯುಕ್ತರಾದ ಡಾ.ಹೆಚ್.ಎನ್.ಗೋಪಾಲಕೃಷ್ಣ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಕಾರ್ಯದರ್ಶಿಗಳಾದ ಭಾರತಿ ಡಿ. ಅವರು 2024ರ ಜುಲೈ 5 ರಂದು ವಿತರಿಸಿದರು.