ಬಿಎಲ್‍ಡಿಇ ಡೀಮ್ಡ್ ವಿವಿ ಹಾಗೂ ಕೇಂದ್ರ ಆಯುಷ್ ಇಲಾಖೆ ಮಧ್ಯೆ ಒಡಂಬಡಿಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.7: ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಕೇಂದ್ರ ಆಯುμï ಇಲಾಖೆಯ ಹೋಮಿಯೋಪಥಿ ಸಂಶೋಧನೆ ಪರಿಷತ್ತಿನ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ವಿವಿ ರಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಡಾ. ಆರ್.ಎಸ್. ಮುಧೋಳ ಮತ್ತು ಕೇಂದ್ರ ಆಯುಷ ವಿಭಾಗದ ಹೋಮಿಯೋಪಥಿ ಸಂಶೋಧನೆ ಪರಿಷತ್ತಿನ ಮಹಾನಿರ್ದೇಶಕ ಡಾ. ಸುಭಾಷ ಕೌಶಿಕ ಅವರು ಒಡಂಬಡಿಕೆಗೆ ಸಹಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಈ ಒಡಂಬಡಿಕೆಯಿಂದಾಗಿ ವಿವಿ ಮತ್ತು ಪರಿಷತ್ತಿನ ನಡುವೆ ಪರಸ್ಪರ ಸಹಯೋಗದಲ್ಲಿ ಆರೋಗ್ಯ ವಿಜ್ಞಾನ ಕ್ಷೇತ್ರದ ನಾನಾ ವಿಭಾಗಗಳಲ್ಲಿ ಸಮಗ್ರ ಚಟುವಟಿಕೆ ನಡೆಸಲು ಮತ್ತು ನಾನಾ ಸಾಂಕ್ರಾಮಿಕ ಹಾಗೂ ದೀರ್ಘ ಕಾಲದ ಕಾಯಿಲೆಗಳನ್ನು ನಿಯಂತ್ರಿಸಲು ಹೊಸ ಸಂಶೋಧನೆ ಕೈಗೊಳ್ಳಲು, ವಿಚಾರ ವಿನಿಮಯ ಮಾಡಿಕೊಳ್ಳಲು ಅನುಕೂಲವಾಗಲಿದೆ.
ಈ ಒಡಂಬಡಿಕೆ ಸಂದರ್ಭದಲ್ಲಿ ವಿವಿ ಸಮಕುಲಾಧಿಪತಿ ಡಾ. ಆರ್.ಎಂ. ಜಯರಾಜ, ಸಮಕುಲಪತಿ ಡಾ. ಅರುಣ ಇನಾಮದಾರ, ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ವಿವಿ ಸಂಶೋಧನೆ ಮತು ್ತಅಭಿವೃದ್ಧಿ ಕೋಶದ ನಿರ್ದೇಶಕ ಡಾ. ಎಂ.ಎಂ. ಪಾಟೀಲ, ಗೌರವಾನ್ವಿತ ಪೀಠದ ಪ್ರಾಧ್ಯಾಪಕ ಡಾ. ಕುಸಾಲ ಕೆ. ದಾಸ, ಕೇಂದ್ರ ಹೋಮಿಯೋಪಥಿ ಸಂಶೋಧನೆ ಪರಿಷತ್ತಿನ ವಿಜ್ಞಾನಿ ಡಾ. ದೇವದತ್ತ ನಾಯಕ, ಅಲೈಡ್ ಹೆಲ್ತ್ ಸಾಯಿನ್ಸ್ ಡೀನ್ ಎಸ್.ವಿ. ಪಾಟೀಲ, ಐಕ್ಯೂಎಸಿ ನಿರ್ದೇಶಕಿ ಡಾ. ಲತಾ ಮುಳ್ಳೂರ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೊಡಲ್ ಅಧಿಕಾರಿ, ಡಾ. ಈಶ್ವರ ಬಾಗೋಜಿ, ಡಾ. ಚಂದ್ರಕಾ ದೊಡ್ಡಿಹಾಳ, ಚಂದ್ರಮೌಳಿ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.