ಅಂಧರ ಬಾಳಲ್ಲಿ ಬೆಳಕು ಮೂಡಿಸಿದ ರೆಡ್‌ ಕ್ರಾಸ್‌ ಸಂಸ್ಥೆ
ಕಲಬುರಗಿ:ಜು.6: ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆ ಕಲಬುರಗಿ ವತಿಯಿಂದ ಇಂದು ಸಿದ್ದೇಶ್ವರ ನಗರದ ಸಂತೋಷ ಬಸವರಾಜ ಸಾಲಿ (40) ಅವರು ಹೃದಯಘಾತದಿಂದ ನಿಧನರಾಗಿದ್ದು, ಅವರ ನೇತ್ರಗಳನ್ನು ಬಸವೇಶ್ವರ ಆಸ್ಪತ್ರೆಯ ನೇತ್ರದಾನ ಬ್ಯಾಂಕಿಗೆ ನೇತ್ರದಾನ ಮಾಡಿಸಿದರು.
ಸಾಲಿ ಕುಟುಂಬದ ಸದಸ್ಯರನ್ನು ರೆಡ್‌ ಕ್ರಾಸ್‌ ಸಂಸ್ಥೆಯ ಗೌ. ಕಾರ್ಯದರ್ಶಿಗಳಾದ ಶ್ರೀ ರವೀಂದ್ರ ಶಾಬಾದಿ ಅವರು ಭೇಟಿ ಮಾಡಿ ನೇತ್ರದಾನದ ಮಹತ್ವದ ಕುರಿತು ಹಾಗೂ ತಮ್ಮ ಕುಟುಂಬದ ಮೃತ ಸಂತೋಷ ಬಸವರಾಜ ಸಾಲಿ ಅವರ ನೇತ್ರದಾನ ಮಾಡಿ ಅಂಧರಿಬ್ಬರಿಗೆ ಅವರ ಜೀವನದ ಅಂಧಕಾರದಿಂದ ಮುಕ್ತಗೊಳಿಸಿ ಜಗತ್ತು ನೋಡುವ ಸೌಭಾಗ್ಯ ಸೀಗಲಿದೆ ಎಂದು ಕುಟುಂಬದವರ ಮನವೊಲಿಸಿದರು. ಕುಟುಂಬದ ಮುಖ್ಯಸ್ಥರಾದ ಬಸವರಾಜ ಸಾಲಿ ಅವರು ಇದಕ್ಕೆ ಒಪ್ಪಿಗೆ ನೀಡಿದ್ದು ಅವರ ಈ ಒಂದು ಬದಲಾವಣೆಯ ಪ್ರಯತ್ನ ಜನರಿಗೆ ಮಾದರಿ ಮತ್ತು ಪ್ರೇರಣೆಯಾಗಬೇಕು ಹಾಗೂ ಮೃತ ಪಟ್ಟ ವ್ಯಕ್ತಿಯ ಕಣ್ಣುಗಳು ಮಣ್ಣಲ್ಲಿ ಮಣ್ಣಾಗದೆ ಇಬ್ಬರ ಅಂಧ ವ್ಯಕ್ತಿಗಳ ಜೀವನದಲ್ಲಿ ಬೇಳಕು ಮೂಡಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ರೆಡ್ ಕ್ರಾಸ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ರವೀಂದ್ರ ಶಾಬಾದಿ ಅವರು ತಮ್ಮ ಅಭಿಪ್ರಾಯಗಳು ವ್ಯಕ್ತಪಡಿಸಿದ್ದಾರೆ.
ಬಸವೇಶ್ವರ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಮಂಜುಳಾ ಮಂಗಾಣೆ ಮತ್ತು ಡಾ. ವೀರೇಶ ಕೋರವಾರ ನೇತೃತ್ವದ ತಂಡ ದಾನಿಯ ನೇತ್ರಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಿದರು.