ಸಿರಿಧಾನ್ಯ ಉತ್ಪಾದಕ ಸಂಸ್ಥೆಗಳಿಗೆ ಬೀಜೋತ್ಪಾದನೆ ತರಬೇತಿ
ವಿಜಯಪುರ:ಜು.6: ರಾಷ್ಟ್ರೀಯ ಬೀಜ ನಿಗಮ, ಐ. ಸಿ. ಎ. ಆರ್ – ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ ಹೈದರಾಬಾದ್ ಮತ್ತು ಐ. ಸಿ. ಎ. ಆರ್ -ಕೃಷಿ ವಿಜ್ಞಾನ ಕೇಂದ್ರ , ವಿಜಯಪುರ ಸಹಯೋಗದಲ್ಲಿ ರೈತ ಉತ್ಪಾದಕ ಸಂಸ್ಥೆಗಳಿಗೆ ಬೀಜೋತ್ಪಾದನೆ ಮತ್ತು ಪ್ರಮಾಣೀಕರಣದ ಬಗ್ಗೆ ಒಂದು ದಿನದ ವಿಶೇಷ ತರಬೇತಿಯನ್ನು ಕೃಷಿ ವಿಜ್ಞಾನ ಕೇಂದ್ರ ವಿಜಯಪುರದಲ್ಲಿ ಜು. 5 ರಂದು ಹಮ್ಮಿಕೊಳ್ಳಲಾಗಿತ್ತು.
ಡಾ. ಎಸ್. ಎಮ್. ವಸ್ತ್ರದ , ವಿಜ್ಞಾನಿಗಳು ಮಾತನಾಡಿ, ರೈತರಿಗೆ ಬಿಜ್ಯೋತ್ಪಾದನೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ ಹೇಗೆ ಮಾಡಬೇಕು ಮತ್ತು ಬೀಜೋತ್ಪಾದನೆ ಯಲ್ಲಿ ಮುಖ್ಯವಾಗಿ ಕೈಗೊಳ್ಳಬೇಕಾದ ಬೇಸಾಯ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ರಾಷ್ಟ್ರೀಯ ಜಾನುವಾರು ಮಿಶನ್ ನಲ್ಲಿ ಜಾನುವಾರು ಸಾಕಾಣಿಕೆಗೆ ಸರ್ಕಾರದಿಂದ ಇರುವ ಸಹಾಯಧನ ಬಗ್ಗೆ ಮತ್ತು ಸೌಲಭ್ಯಗಳ ಬಗ್ಗೆ ಸವಿಸ್ತಾರವಾಗಿ ಡಾ. ಎಸ್. ಪಿ ಕುಂಬಾರ ತಿಳಿಸಿದರು. ಪ್ರತಿಭಾ ಕುಲಕರ್ಣಿ ರವರು ಮಾತನಾಡಿ, ಬೀಜ ಉತ್ಪಾದಕ ಮತ್ತು ಪ್ರಮಾಣೀಕರಣ ರೈತ ಉತ್ಪಾದಕ ಸಂಸ್ಥೆಗಳಿಂದ ಹೇಗೆ ಮಾಡಬಹುದು ಎಂದು ವಿವರಿಸಿದರು.
ಮಹೇಶ್ ಮತ್ತು ತಿಮ್ಮಣ್ಣ ಗೌರ ಪಾಟೀಲ್ ಇ ನಾಮ್ ಮತ್ತು ಅಟಲ್ ಬುಜಲ್ ಯೋಜನೆ ಬಗ್ಗೆ ವಿವರಿಸಿದರು
ಕಾರ್ಯಕ್ರಮ ಸಂಯೋಜಕ ಮಾರಿಯ ವರ್ಗೀಸ್, ಕೈಲಾಸನಾಥ ಕೊರಿಶೆಟ್ಟಿ, ಶರಣು ನಾಗವಿ, ಪ್ರೀತಿ ದಶವ0ತ, ಸಂತೋಷ್ ಶಿರನಾಳ ಮತ್ತು ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದರು