ಗೋದುತಾಯಿ ಕಾಲೇಜಿನಲ್ಲಿ ಖೋ ಖೋ ಸ್ಫರ್ಧೆ:ಓದಿನ ಜೊತೆಗೆ ಆಟವು ಬಹಳ ಮುಖ್ಯ
ಕಲಬುರಗಿ :ಜು.6: ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಆಟವು ಬಹಳ ಮುಖ್ಯವಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅಭಿಪ್ರಾಯ ಪಟ್ಟರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗದಿಂದ ಅಂತರ ವಿಭಾಗಗಳ ಖೋ ಖೋ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಆಟಗಳು ಆಡುವುದರಿಂದ ಮಕ್ಕಳಲ್ಲಿ ಏಕಾಗ್ರತೆ, ದೈಹಿಕ ಸಾಮಥ್ರ್ಯ ಹೆಚ್ಚಿಸುತ್ತದೆ. ಒತ್ತಡವನ್ನು ನಿವಾರಿಸುವ ಶಕ್ತಿ ದೊರಕುತ್ತದೆ. ಬೇರೆ ಬೇರೆ ಆಟಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಕೀರ್ತಿ ತರಬೇಕು. ಅದರಲ್ಲೂ ನಮ್ಮ ಭಾಗದ ವಿದ್ಯಾರ್ಥಿಗಳು ಆಟಗಳಲ್ಲಿ ಇನ್ನೂ ಮುಂದೆ ಬರಬೇಕು ಎಂದು ಹೇಳಿದರು. ಸೂಕ್ತ ತರಬೇತಿ ಸಿಕ್ಕಾಗ ರಾಷ್ಟ್ರ ಮತ್ತು ಅಂತರರಾಷ್ಟ್ರಮಟ್ಟಗಳಲ್ಲಿ ಭಾಗವಹಿಸಬಹುದು. ಸೋಲು ಗೆಲವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದು ಕಿವಿ ಮಾತು ಹೇಳಿದರು. ಇತ್ತೀಚಿಗೆ ಭಾರತ ಟಿ20 ವಿಶ್ವಕಪ್ ಗೆದ್ದಿರುವುದು ನಮ್ಮೆಲ್ಲರಿಗೂ ಹೆಮ್ಮೆ ಪಡುವಂತದಾಗಿದೆ. ಶರಣಬಸವೇಶ್ವರ ಸಂಸ್ಥೆಯು ಸದಾ ಓದಿನ ಜೊತೆಗೆ ಆಟಕ್ಕೂ ಬಹಳ ಮಹತ್ವ ನೀಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಎಸ್.ಎಮ್.ಹೋಳಿ ಅವರು ಮಾತನಾಡಿ, ಆಟಗಳು ಆಡುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಅಲ್ಲದೆ ದೈಹಿಕವಾಗಿ ಸದೃಢರಾಗುತ್ತಾರೆ. ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕವಾಗಿ ಪ್ರಬಲವಾಗುತ್ತಾರೆ. ಜಾಣತನದ ನಿರ್ಣಯವನ್ನು ಕೈಗೊಳ್ಳುವಂತೆ ಪ್ರಚೋದಿಸಿ ಬುದ್ಧಿಶಕ್ತಿಯ ಬೆಳವಣಿಗೆಗೆ ಬಹಳ ಸಹಾಯಕವಾಗಿದೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಮಕ್ಕಳು ಆಟಗಳನ್ನು ಆಡುವುದರಿಂದ ಮೆದುಳು ಬಲವಾಗಿ ಮತ್ತು ಬುದ್ಧಿವಂತವಾಗಿ ಬೆಳೆಯುತ್ತದೆ. ಇತರರೊಂದಿಗೆ ಉತ್ತಮ ಸಂವಹನ, ಒಳ್ಳೆಯ ತೀರ್ಮಾನ ತೆಗೆದುಕೊಳ್ಳುವಿಕೆ, ಭಯ ಹೋಗಲಾಡಿಸುತ್ತದೆ. ದೈಹಿಕವಾಗಿ ಸದೃಢವಿದ್ದಾಗ ಮಾತ್ರ ಎಲ್ಲದರಲ್ಲೂ ಸಾಧನೆಗೈಯಲು ಸಾಧ್ಯವಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಓದಿನೊಂದಿಗೆ ಆಟಗಳಲ್ಲಿ ಭಾಗವಹಿಸಬೇಕೆಂದು ಸಲಹೆ ನೀಡಿದರು.
ವೇದಿಕೆ ಮೇಲೆ ಮುಕ್ತಾಂಬಿಕ ಪಿಯು ಕಾಲೇಜಿನ ಪ್ರಾಚಾರ್ಯ ಡಾ.ಎಮ್.ಆರ್.ಹುಗ್ಗಿ, ವಿದ್ಯಾರ್ಥಿ ಸಂಘದ ಸಲಹೆಗಾರರಾದ ಡಾ.ಸೀಮಾ ಪಾಟೀಲ, ಐಕ್ಯೂಎಸಿ ಸಂಯೋಜಕ ಡಾ.ಸಿದ್ಧಲಿಂಗರೆಡ್ಡಿ, ಅಪ್ಪ ಪಬ್ಲಿಕ್ ಶಾಲೆಯ ಅನಿಲ ನಾಟೀಕರ ಇದ್ದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ.ಮಿಲಿಂದ ಸುಳ್ಳದ ಸ್ವಾಗತಿಸಿದರು, ಕು.ಜವೇರಿಯಾ ಅಂಜುಮ್ ನಿರೂಪಿಸಿದರು. ನಂತರ ವಿದ್ಯಾರ್ಥಿನಿಯರಿಂದ ಖೋ ಖೋ ಸ್ಪರ್ಧೆಗಳು ನಡೆದವು.