ಕಾರುಗಳ ನಡುವೆ ಡಿಕ್ಕಿ: ಮಹಿಳೆ ಸಾವು, ನಾಲ್ವರಿಗೆ ಗಾಯ
ಕಲಬುರಗಿ,ಜು.6-ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಅದರಲ್ಲಿ ಒಂದು ಕಾರು ಪಲ್ಟಿಯಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಚಾಲಕ ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ನಗರ ಹೊರವಲಯದ ಶರಣಸಿರಸಗಿ ಹತ್ತಿರ ಶುಕ್ರವಾರ ನಡೆದಿದೆ.
ನಗರದ ಬಸವೇಶ್ವರ ಕಾಲೋನಿಯ ರಾಧಾಬಾಯಿ ಶಾಮರಾವ ಕುಲಕರ್ಣಿ (65) ಮೃತಪಟ್ಟ ಮಹಿಳೆ. ಚಾಲಕ ಸೇರಿ ನಾಲ್ವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ ಕಲಬುರಗಿಯಿಂದ ಅಂಕಲಗಿ ಗ್ರಾಮದಲ್ಲಿರುವ ಮನೆ ದೇವರಿಗೆ ಹೊರಟಿದ್ದರು ಎಂದು ತಿಳಿದುಬಂದಿದೆ. ಸಂಚಾರ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.