ಮಠ, ಮಂದಿರಗಳಿಂದ ಮನುಷ್ಯನಿಗೆ ನೆಮ್ಮದಿ
ವಾಡಿ,ಜು.6-ಮಠ, ಮಂದಿರಗಳಿಂದ ಮನುಷ್ಯನಿಗೆ ನೆಮ್ಮದಿ ದೊರೆಯಲಿದೆ ಎಂದು ಹಲಕರ್ಟಿ ಕಟ್ಟಿಮನಿ ಹಿರೇಮಠದ ಮುನಿಂದ್ರ ಶಿವಾಚಾರ್ಯರು ಹೇಳಿದರು.
ಚಿತ್ತಾಪುರ ತಾಲುಕಿನ ಹಲಕರ್ಟಿ ಮಠದಲ್ಲಿ ಆಷಾಢ ಅಮವಾಸೆ ಅಂಗವಾಗಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತರನು ಆರ್ಶಿವದಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮನಷ್ಯ ನೆಮ್ಮದಿ ಹಾಗು ಸಂತೃಪ್ತಿ ಕಳೆದು ಕೊಂಡಿದ್ದಾನೆ. ಸುಖ, ಶಾಂತಿ, ನೆಮ್ಮದಿ ಹಣ, ಆಸ್ತಿಯಿಂದ ಸಿಗುವುದಿಲ್ಲ. ಒಳ್ಳೆಯ ಕೆಲಸಗಳಿಂದ ಮನುಷ್ಯನಿಗೆ ಶಾಂತಿ, ನೆಮ್ಮದಿ ಸಿಗಲಿದೆ ಎಂದರು.
ಮಠಾಧೀಶರು ತಾಯಿ ಹೃದಯದವರಾಗಿರಬೇಕು, ತಾಯಿ ಹೇಗೆ ಮಕ್ಕಳಲ್ಲಿ ಬೇಧಭಾವ ಮಾಡುವುದಿಲ್ಲವೋ ಮಠಾಧೀಶರು ಸಹ ತಮ್ಮಲ್ಲಿ ಬರುವ ಭಕ್ತರಲ್ಲಿ ಬೇಧಭಾವ ತೋರಬಾರದು. ಅವರ ಸಮಸ್ಯೆ, ಸಂಕಟಗಳಿಗೆ ಸಾಂತ್ವನ ಹೇಳುವ ಕೆಲಸವಾಗಬೇಕು ಎಂದರು.