ಔರಾದ್ : ಫುಟ್‍ಪಾತ್ ತೆರವು
ಔರಾದ :ಜು.6: ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಕಾರ್ಯಕ್ಕೆ ಮುಂದಾಗಿರುವ ಪಟ್ಟಣ ಪಂಚಾಯಿತಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಟ್ಟಣದಲ್ಲಿ ಫುಟ್‍ಪಾತ್ ತೆರವು ಕಾರ್ಯಚರಣೆ ಆರಂಭಿಸಿದೆ.
ಪಟ್ಟಣದ ಮುಖ್ಯರಸ್ತೆ, ಬಸ್ ನಿಲ್ದಾಣ, ಬಸವೇಶ್ವರ ವೃತ್ತದ ಬಳಿಯ ಅಂಗಡಿ ಮಾಲೀಕರು ಫ?ಟ್‍ಪಾತ್‍ಗಳನ್ನು ಅತಿಕ್ರಮಿಸಿ ಪಾದಚಾರಿಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ, ಫುಟ್ ಪಾತ್ ಒತ್ತುವರಿ ಜಾಸ್ತಿಯಾಗಿದ್ದು, ಜನಸಾಮಾನ್ಯರು ಓಡಾಡುವುದೇ ಕಷ್ಟವಾಗಿದೆ, ತಸಿಲ್ದಾರ ಮಲಶೆಟ್ಟಿ ಚಿದ್ರೆ,ಹಾಗೂ ಔರಾದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ವಾಮಿದಾಸ ಅವರ ನೇತೃತ್ವದಲ್ಲಿ ಮುಖ್ಯ ರಸ್ತೆಯ ತೆರವು ಕಾರ್ಯಚರಣೆ ನಡೆಯಿತು.
ಈ ಮುಂಚೆ ತೆರವು ಮಾಡಲು ಮೂರು ದಿನಗಳ ಕಾಲ ಗಡುವು ನಿಡಿತ್ತು, ಅದರಂತೆ ಅನಧಿಕೃತವಾಗಿ ಅತಿಕ್ರಮಿಸಿಕೊಂಡ ಫುಟ್‍ಪಾತ್ ತೆರವು ಕಾರ್ಯಾಚರಣೆ ನಡೆಸಿ ಫುಟ್‍ಪಾತ್ ಮೇಲೆ ಇರುವ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಮಲ್ಲಶೆಟ್ಟಿ ಚಿದ್ರೆ, ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್‍ಐ ಉಪೇಂದ್ರ ಕುಮಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿ ಅನಧಿಕೃತ ಅಂಗಡಿಗಳನ್ನು ತೆಗೆಯುವಂತೆ ತಿಳಿಸಿದರು, ಅದರಂತೆ ಜೆಸಿಬಿ ಯಂತ್ರ ಬಳಸಿ ಫುಟ್‍ಪಾತ್ ತೆರವು ಕಾರ್ಯಾಚರಣೆ ನಡೆಸಿದರು.
ದಿನೇದಿನೆ ಫುಟ್‍ಪಾತ್ ತೆರವು ಹೆಚ್ಚಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕದಿದ್ದರೆ ಸಮಸ್ಯೆ ಹೆಮ್ಮರವಾಗುತ್ತದೆ ಎಂಬ ಕಾರಣಕ್ಕೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಫುಟ್ಪಾತ್ ಒತ್ತುವರಿ ತೆರವುಗೊಳಿಸಲಾಗುತ್ತಿದೆ. ಕಾರ್ಯಾಚರಣೆ ಮೊದಲ ದಿನ ಕೆಲವು ಅಂಗಡಿ ತೆರವುಗೊಳಿಸಲಾಗಿದೆ. ಮತ್ತಷ್ಟು ಮಂದಿಗೆ ಫುಟ್‍ಪಾತ್ ಅತಿಕ್ರಮಣದಿಂದ ಆಗುವ ತೊಂದರೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಇದೇ ರೀತಿ ವ್ಯಾಪಾರ ಮುಂದುವರಿಸಿದರೆ ದಂಡ ವಿಧಿಸಲಾಗುವುದು.
ಸ್ವಾಮಿದಾಸ
ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ ಔರಾದ(ಬಾ)