ಬೇಡಿಕೆಗಳ ಈಡೇರಿಕೆಗೆ ಸರ್ಕಾರಿ ನೌಕರರ ಒಕ್ಕೂಟದ ಮನವಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಸೆ,27- ಸಾರ್ವಜನಿಕಉದ್ದಿಮೆಗಳನ್ನು ಖಾಸಗೀಕರಣಗೊಳಿಸುವುದನ್ನು ನಿಲ್ಲಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕ  ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತದ ಮೂಲಕ ನಿನ್ನೆ  ಮನವಿ  ಸಲ್ಲಿಸಿದೆ.
ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಮರುಸ್ಥಾಪಿಸುವುದು ಹಾಗೂ ಕಟಾವಣೆಯಾಗಿರುವ ನೌಕರರ ವಂತಿಗೆಯನ್ನು ರಾಜ್ಯ ಸರ್ಕಾರಗಳಿಗೆ ಹಿಂದಿರುಗಿಸಲು ಕೇಂದ್ರ ಸರ್ಕಾರವು ನಿರ್ದೇಶಿಸುವುದು,‌ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನೇರನೇಮಕಾತಿ ಮೂಲಕ ಭರ್ತಿ ಮಾಡುವುದು. ಇನ್ನು ಮುಂದೆ ಗುತ್ತಿಗೆ/ಹೊರಗುತ್ತಿಗೆ ನೇಮಕಾತಿಯನ್ನು ಕೈಬಿಡುವುದು ಎಲ್ಲಾ ಗುತ್ತಿಗೆ/ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು
ಆದಾಯ ತೆರಿಗೆ ಸೀಲಿಂಗ್ ಮಿತಿಯನ್ನು ರೂ. 10 ಲಕ್ಷಕ್ಕೆ ಹೆಚ್ಚಿಸುವುದು ಮೊದಲಾದ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಕಾರಟಗಿ, ಮಾಧ್ಯಮ ವಕ್ತಾರ ಎಂ.ಡಿ ವಾಜೀದ್ ಅಲಿ.ಉಪಾಧ್ಯಕ್ಷ ರಾದ  ಕೆ.ಎಂ. ಎರ್ರೆಮ್ಮ, ಜಡೇಶ್, ಕಾರ್ಯದರ್ಶಿ ಸುಲ್ತಾನ್ ಸಾಹೇಬ್, ಕೆ.ಎಂ.ಮರುಳಯ್ಯ.ಈ.ಟಿ.ಗಾದಿಲಿಂಗ ,ಕೆ.ಎಂ.ಗುರುಸಿದ್ಧಮೂರ್ತಿ ಇದ್ದರು.