ರಾಜ್ಯ ಮಟ್ಟದ ಹ್ಯಾಂಡ್‍ಬಾಲ್ ಸ್ಪರ್ಧೆಗೆ ಆಯ್ಕೆಯಾದ ಬೆಸ್ಟ್ ಕಾಲೇಜಿನ ವಿದ್ಯಾರ್ಥಿಗಳು
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ, 27- ಜಿಲ್ಲಾ ಪದವಿ ಪೂರ್ವ ಶಿಕಣ ಇಲಾಖೆ ಆಯೋಜಿಸಿದ್ದ ಹ್ಯಾಂಡ್‍ಬಾಲ್ ಸ್ಪರ್ಧೆಯಲ್ಲಿ  ಬೆಸ್ಟ್ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿ ಹಾಸನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಇವರನ್ನು ಸಂಸ್ಥೆಯ ಅಧ್ಯಕ್ಷರಾದ ಕೆ. ರಾಮಪ್ಪ,  ಉಪಾದ್ಯಕ್ಷರು  ಕೆ. ತಿಲಕ್ ಕುಮಾರ್, ಕಾರ್ಯದರ್ಶಿ  ಎಮ್. ಶ್ರೀನಿವಾಸುಲು  ಪ್ರಾಚಾರ್ಯರು   ಕೆ. ವೆಂಕಟೇಶ್ವರರಾವ್, ಉಪ ಪ್ರಾಚಾರ್ಯರು  ಜಿ. ಶ್ರೀನಿವಾಸರೆಡ್ಡಿ, ದೈಹಿಕ ಶಿಕ್ಷಕರಾದ ಶಿವಾನಂದ್,  ತಿಪ್ಪೇರುದ್ರಪ್ಪ ಮತ್ತು ಶ್ರೀಮತಿ ವೆಂಕಟಲಕ್ಷ್ಮಿ ಮತ್ತು ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.