ಬಜಾಜ್ ಫಿನ್‌ಸರ್ವ್ ನಿಂದ ಎರಡು ಕೋಟಿ ರೂ ದೇಣಿಗೆ
ಬೆಂಗಳೂರು, ಸೆಪ್ಟೆಂಬರ್ ೨೬, ಭಾರತದ ಪ್ರಮುಖ ಮತ್ತು ವೈವಿಧ್ಯಮಯ ಹಣಕಾಸು ಸೇವಾ ಗುಂಪುಗಳಲ್ಲಿ ಒಂದಾದ ಬಜಾಜ್ ಫಿನ್‌ಸರ್ವ್ ಲಿಮಿಟೆಡ್, ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತ ಭೂಕುಸಿತ ಮತ್ತು ಪ್ರವಾಹದಿಂದ ಹಾನಿಗೊಳಗಾದ ಸಮುದಾಯಗಳಿಗೆ ಬೆಂಬಲವಾಗಿ ೨ ಕೋಟಿ ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ.
ವಯನಾಡ್ ಭೂಕುಸಿತ ಪರಿಹಾರಕ್ಕಾಗಿ ಕೇರಳ ರಾಜ್ಯ ವಿಪತ್ತು ಪರಿಹಾರ ನಿಧಿಗೆ ಆನ್‌ಲೈನ್ ಕೊಡುಗೆಯನ್ನು ಕೇರಳದ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಅವರು ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ?ಬಜಾಜ್ ಫಿನ್‌ಸರ್ವ್ ?ಕಾರ್ಪೊರೇಟ್? ವ್ಯವಹಾರಗಳ ವಿಭಾಗದ ಅಧ್ಯಕ್ಷ ಡಾ. ಎನ್ ಶ್ರೀನಿವಾಸ ರಾವ್ ಮತ್ತು ಬಜಾಜ್ ಅಲಿಯಾನ್ಸ್ ಇನ್ಶೂರೆನ್ಸ್‌ನ ಕಾನೂನು ಮತ್ತು ಅನುಸರಣೆ ಹಿರಿಯ ಅಧ್ಯಕ್ಷ ಅನಿಲ್ ಪಿಎಂ ಅವರ ಜತೆ ನಡೆಸಿದ ಸಭೆಯ ವೇಳೆ ಇದನ್ನು ಘೋಷಿಸಲಾಯಿತು.