ಚಂದ್ರಶೇಖರ್ ಬ್ಯಾಕೋಡ ಹಾಗೂ ಅಫ್ಸರ್ ಪಟೇಲ್‍ಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ
ಕಲಬುರಗಿ:ಜು.6:ಶುಕ್ರವಾರ ಬೆಂಗಳೂರುನಲ್ಲಿ ನಡೆದ ಇಂಟ್ ರಿಯಾಕ್ಷನ ಕಂಪನಿಯ ಬೈಸೆಲ್ ಫೋಟೊ ಟುಡೇ ವತಿಯಿಂದ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕಾರ್ಯಕ್ರಮ ದಲ್ಲಿ ಕಲಬುರಗಿ ಜಿಲ್ಲೆಯ ಹಿರಿಯ ಛಾಯಾಗ್ರಾಹಕರಾದ ಚಂದ್ರಶೇಖರ್ ಆರ ಬ್ಯಾಕೋಡ ಯುವ ಛಾಯಾಗ್ರಾಹಕರಾದ ಮೊ. ಅಫ್ಸರ್ ಪಟೇಲ್ ಅವರಿಗೆ ಕಲಬುರಗಿ ಜಿಲ್ಲಾ ಫೋಟೊಗ್ರಾಫರ್ಸ ಅಸೋಸಿಯೇಷನ್ ನೇತ್ರತ್ವದಲ್ಲಿ ಕರ್ನಾಟಕ ಛಾಯಾರತ್ನ ಪ್ರಶಸ್ತಿಯು ಕನ್ನಡ ಚಲನ ಚಿತ್ರ ಖ್ಯಾತ ಛಾಯಾಗ್ರಾಹಕರಾದ ಜೆ.ಜೆ. ಕ್ರಿಷ್ಣ ಅವರಿಂದ ಪ್ರಶಸ್ತಿ ನೀಡಿ ಗೌರವಿಸಿದರು.
ಮುಖ್ಯ ಅತಿಥಿಯಾಗಿ ಬಿಗ್ ಬಾಸ್ ನಟ ಪ್ರತಮ. ಹಾಗೂ ಕಂಪನಿಯ ಅದ್ಯಕ್ಷರಾದ ಬೆಂಜಮಿನ್ ಕಂಪನಿಯ ಮ್ಯಾನೆಜ್‍ಮೆಂಟ್ ರವರಾದ ಶ್ರೀ ಕ್ರಿಷ್ಣಪ್ಪ ಹಾಗೂ ಕಲಬುರಗಿ ಜಿಲ್ಲಾ ಫೋಟೋಗ್ರಾಫರ್ಸ ಅಸೋಸಿಯೇಷನ್ ಅದ್ಯಕ್ಷರಾದ ಬಸವರಾಜ ಸಿ. ತೋಟದ, ಸದಸ್ಯರಾದ ಪ್ರಕಾಶ್ ಎಂ ಶೇರಖಾನೆ, ಆಳಂದ ತಾಲ್ಲೂಕು ಅದ್ಯಕ್ಷರಾದ ಪ್ರಕಾಶ ಜಂಗಲೆ ಅವರು ವೇದಿಕೆ ಮೇಲೆ ಉಪಸ್ಥಿತಿರಿದ್ದರು.
ಇವರ ಸಾಧನೆಗೆ ಮಹಮ್ಮದ್ ಅಯಾಜೋದ್ದೀನ್ ಪಟೇಲ್, ರಾಘವೇಂದ್ರ ಭುರಾಲಿ, ನಾರಾಯಣ ಜೋಶಿ, ಗೋಪಿ ಕುಲಕರ್ಣಿ, ರೆಹಮಾನ್ ಪಟೇಲ್ ಹಾಗೂ ಛಾಯಾಗ್ರಾಹಕ ಮಿತ್ರರು ಶುಭ ಹಾರೈಸಿದರು.