ಸುಳ್ಳು ಜಾತಿ ಪ್ರಮಾಣ ಪತ್ರಕ್ಕೆ ಕಡಿವಾಣ ಹಾಕಿ :ಡಿಸಿ
ಜೇವರ್ಗಿ:ಜು.6: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸುಳ್ಳು ಜಾತಿ ಪ್ರಮಾಣ ಪತ್ರ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪ್ರಸಿದ್ಧ ಪಂಗಡ ಸುಳ್ಳು ಜಾತಿ ಪ್ರಮಾಣ ಪತ್ರ ತಡೆ ಸಮಿತಿ ರಾಜ್ಯಾಧ್ಯಕ್ಷ ಶ್ರವಣಕುಮಾರ್ ಡಿ ನಾಯಕ್ ಇಜೇರಿ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪೌಜಮ ತರನ್ನುಮ ಅವರಿಗೆ ಮನವಿ ಪತ್ರ ಸಲ್ಲಿಸಿದರು ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ತಾಲೂಕ ತಹಶೀಲ್ದಾರ ಯಡ್ರಾಮಿ ಮತ್ತು ಜೇವರ್ಗಿ ಅಧಿಕಾರಿಗಳಿಗೆ ಸೂಚಿಸಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ತಡೆಹಿಡಿಯಬೇಕೆಂದು ಹೇಳಿದರು ನಂತರ ಅಂಗವಿಕಲರ ವೇದಿಕೆಯ ತಾಲೂಕು ಅಧ್ಯಕ್ಷ ಪರಮೇಶ್ವರ ಬಿರಾಳ ಅವರು ಜಿಲ್ಲಾಧಿಕಾರಿಗಳಿಗೆ ಅಂಗವಿಕಲರ ಕಲ್ಯಾಣ ಅಭಿವೃದ್ಧಿಗಾಗಿ ಪುರಸಭೆ ತಾಲೂಕು ಪಂಚಾಯತಿ ಗ್ರಾಮ ಪಂಚಾಯತಿಯಲ್ಲಿ ಅನುದಾನ ಮೀಸಲಿಡಬೇಕೆಂದು ಮನವಿ ಪತ್ರ ಸಲ್ಲಿಸಿದರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಮಲ್ಲನಗೌಡ ಬಿರೇದಾರ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲಿಸಿದರು ಕಾರಣ ಕಳಪೆ ಮಟ್ಟದ ಬೀಜ ವಿತರಣೆ ಮಾಡುವ ಅಂಗಡಿಗಳ ಮೇಲೆ ಕೇಸ್ ಹಾಕಿ ಅಂಗಡಿಗಳು ಬಂದ್ ಮಾಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು ರೈತ ಸಂಘದ ಹೋರಾಟಗಾರರ ವಿರೇಶ ದೊಡ್ಮನಿ ಭೀಮಶಂಕರ್ ಜನಿವಾರ ಭಾಗಣ್ಣ ಗೌ ನಳ್ಳಿ ಪರಶುರಾಮ್ ಕೆಲ್ಲೂರ ಈರಮ್ಮ ಗೌಡ್ತಿ ನೇತೃತ್ವದಲ್ಲಿ ನೀಯೋಗದಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿ ಜನಸ್ಪಂದನದಲ್ಲಿ ಮನವಿ ಪತ್ರದಲ್ಲಿ ತಿಳಿಸಿದ ಬೇಡಿಕೆಗಳು ಈಡೇರಿಸಬೇಕೆಂದು ಪಟ್ಟಿ ಹಿಡಿದರು ಮನವಿ ಪತ್ರ ಆಲಿಸಿ ಜಿಲ್ಲಾಧಿಕಾರಿ ಮಾತನಾಡಿ ಈಗಾಗಲೇ ಎಂಟು ಅಂಗಡಿಗಳು ಬಂದ್ ಮಾಡಲಾಗಿದೆ ಇನ್ನುಳಿದ ಅಂಗಡಿಗಳ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡು ಬಂದು ಮಾಡಲಾಗುವುದು ಎಂದು ರೈತ ಹೋರಾಟಗಾರರಿಗೆ ತಿಳಿಸಿದ್ದಾರೆ ನಂತರ ಈಶ್ವರ್ ಹಿಪ್ಪರಗಿ ಮಾತನಾಡುತ್ತಾ ಸರ್ಕಾರಿ ಶಾಲೆ ಜಮೀನು ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಪತ್ರದಲ್ಲಿ ತಿಳಿಸಲಾಯಿತು ಈ ಸಂದರ್ಭದಲ್ಲಿ ಎಸಿ ಆಶಪ್ಪ ತಾಲೂಕ ತಹಶೀಲ್ದಾರ ಮಲ್ಲಣ್ಣ ಯಲಗೋಡ ಯಡ್ರಾಮಿ ತಹಶೀಲರ ಶಶಿಕಲಾ ಪಾದಗಟ್ಟಿ ಕೃಷಿ ಇಲಾಖೆ ಉಪ ನಿರ್ದೇಶಕ ಸೋಮಶೇಖರ್ ಬಿರಾದರ್ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರೇವಣಸಿದ್ದಪ್ಪ ಪುರಸಭೆ ಅಧಿಕಾರಿ ಶಂಭುಲಿಂಗ ದೇಸಾಯಿ ತಾಲೂಕ ಆರೋಗ್ಯ ಅಧಿಕಾರಿ ಸಿದ್ದು ಪಾಟೀಲ್ ಕಿರಿಯ ಅಭಿಯಂತರ ಮಲ್ಲಿಕಾರ್ಜುನ ಹಬಳ್ಳಿ ಬಸ್ ನಿಲ್ದಾಣ ವ್ಯವಸ್ಥಾಪಕ ತಾಲೂಕು ಮಟ್ಟ ಅಧಿಕಾರಿಗಳು ಭಾಗವಹಿಸಿದ್ದರು