ಕಿತ್ನೂರು : ಅಕ್ರಮ ಸಾಗುವಳಿಯ ಗ್ರಾಮನತ್ತು’ ಭೂಮಿ ತೆರವುಗೊಳಿಸಿದ ತಹಶಿಲ್ದಾರ್
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಜು.06 ತಾಲ್ಲೂಕಿನ  ಕಿತ್ನೂರು  ಗ್ರಾಮಕ್ಕೆ ಸೇರಿದ ಸುಮಾರು 27  ಎಕರೆ ‘ಗ್ರಾಮನತ್ತು’ ಜಮೀನನ್ನು ಶುಕ್ರವಾರ ತಾಲ್ಲೂಕು ಆಡಳಿತದ ವತಿಯಿಂದ ಜೆಸಿಬಿ ಕಾರ್ಯಾಚರಣೆಯ  ಮೂಲಕ  ವಶಪಡಿಸಿಕೊಳ್ಳಲಾಯಿತು.
ಗ್ರಾಮದ ಹೊರವಲಯದಲ್ಲಿರುವ ತುಂಗಭದ್ರಾ ಹಿನ್ನೀರಿನ ದಂಡೆಯ ಬಳಿ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ತಹಶೀಲ್ದಾರ್ ಚಂದ್ರಶೇಖರ ಶಂಬಣ್ಣ ಗಾಳಿ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಪಂಚಾಯತಿ ಅಧಿಕಾರಿಗಳು ಹಾಗೂ ತಂಬ್ರಹಳ್ಳಿ ಪೋಲಿಸ್ ಠಾಣೆಯ ಸಿಬ್ಬಂದಿಯ  ನೆರವಿನೊಂದಿಗೆ ಜೆಸಿಬಿ ಮೂಲಕ ಗ್ರಾಮ ಠಾಣಕ್ಕೆ ಸೇರಿದ ಗ್ರಾಮನತ್ತು  ಸರ್ವೆ ನಂಬರ್ 393a/3a15 .4 ಮತ್ತು 393 a/3c 12.29  ಎಕರೆಗಳಷ್ಟು ಒಟ್ಟು 27.33 ಎಕರೆ ಪ್ರದೇಶಗಳಲ್ಲಿ ಸುತ್ತಲೂ ಗಡಿ ಗುರುತಿಸಿ ಜೆಸಿಬಿ ಕಾರ್ಯಚರಣೆ ನಡೆಸಿ, 200 ಗಿಡಗಳನ್ನು ಹಾಕಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಗ್ರಾಮದ ವಶಕ್ಕೆ ಬಂದ 27 ಎಕರೆ ಜಮೀನು :  ಗ್ರಾಮಸ್ಥರ ಸಂತಸಗೊಂಡರು.ತಹಸೀಲ್ದಾರ್  ದಿಟ್ಟ ಕ್ರಮದಿಂದಾಗಿ  ಗ್ರಾಮಸ್ಥರು ಮುಕ್ತ ಕಂಠದಿಂದ ಶ್ಲಾಘಿಸಿದರಲ್ಲದೇ ಜಮೀನು ಗ್ರಾಮದ ವಶಕ್ಕೆ ಬಂದಿದ್ದಕ್ಕೆ  ತೀವ್ರ ಸಂತಸ ವ್ಯಕ್ತಪಡಿಸಿದರು.
1952 ರಲ್ಲಿಯೇ ತುಂಗಭದ್ರಾ ಜಲಾಶಯ ನಿರ್ಮಾಣದ ಮುಂಚೆಯೇ ಸರಕಾರದ ವಶದಲ್ಲಿದ್ದ ಗ್ರಾಮ ಠಾಣ ಎಂದು ಪಹಣಿಯಲ್ಲಿ ದಾಖಲಾಗಿದೆ. ಈಗಿದ್ದರೂ ಈ  ಭೂಮಿಯನ್ನು ಗ್ರಾಮದ ಕೆಲವರು ಈ ಜಮೀನಿನಲ್ಲಿ ಆಕ್ರಮ ಉಳಿಮೆ ಮಾಡುತ್ತಾ  ಬಂದಿದ್ದರು. ಈ  ಬಗ್ಗೆ ಗ್ರಾಮದ ಅನೇಕರು ಕಳೆದ 15- 20 ವರ್ಷಗಳ ಕಾಲ. ಗ್ರಾ  ಪಂ ಗೆ  ತಹಶಿಲ್ದಾರ್ ಕಚೇರಿ, ಎಸಿ ಹಾಗೂ ಡಿ.ಸಿ. ಮತ್ತು ಜನಪ್ರತಿನಿಧಿಗಳಿಗೆ ಮನವಿ ನೀಡುತ್ತಲೇ ಬಂದಿದ್ದರೂ  ಯಾವುದೇ ಪ್ರಯೋಜನವಾಗಿರಲಿಲ್ಲ, ಈಚೆಗೆ ನಡೆದ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಇದೇ ಸಮಸ್ಯೆಯನ್ನು ಗ್ರಾಮಸ್ಥರು ತಿಳಿಸಿದ್ದರು. ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ವಾರದೊಳಗೆ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ಕೊಟ್ಟಿದ್ದರು.
 ಆಕ್ರಮ ಸಾಗುವಳಿಯನ್ನು ಮಾಡುತ್ತಿದ್ದ ರೈತರನ್ನು ಕರೆಸಿ ಸರ್ಕಾರಕ್ಕೆ ಒಳಪಟ್ಟ ಜಮೀನುಗಳಲ್ಲಿ ಆಕ್ರಮ ಸಾಗುವಳಿ ಮಾಡದಂತೆ ಕಾನೂನಿನ ಮಾಹಿತಿಯನ್ನು ನೀಡಿ  ಜಮೀನು ತೆರವುಗೊಳಿಸುವಂತೆ ತಿಳುವಳಿಕೆ ನೀಡಿದರು. ಬಳಿಕ ಪೂರ್ವ ನಿಯೋಜನೆಯಂತೆ ಜೆಸಿಬಿ ಕಾರ್ಯಚರಣೆ ಮೂಲಕ ಗಡಿ ಗುರುತು ಮಾಡಿ ಬದುಗಳಲ್ಲಿ ಗುಂಡಿ ಅಗೆದು ಗಿಡಗಳನ್ನು ನೆಡಲು ಪ್ರಾರಂಭಿಸಿದರು. ಈ ಹಿಂದೆ ತಹಸೀಲ್ದಾರ್ ಒತ್ತುವರಿ ಮಾಡಿಕೊಂಡ  ಗೋಮಾಳ ಭೂಮಿಯನ್ನು ತೆರವುಗೊಳಿಸಿ ವಶಪಡಿಸಿಕೊಂಡಿದ್ದರು. ತಾಲೂಕಿನಲ್ಲಿ ಇನ್ನೂ ಹಲವಾರು ಗೋಮಾಳ ಮತ್ತು ಗ್ರಾಮ ಠಾಣ ಭೂಮಿ ಒತ್ತುವರಿಯಾಗಿದೆ ಅದನ್ನು ಕೂಡ  ತಹಶೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ  ಕಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಸಾರ್ವಜನಿಕರು ಮಾತನಾಡಿದ್ದಾರೆ. ಇವರ ಈ ದಿಟ್ಟ ನಿರ್ಧಾರದಿಂದ ಜನರ ಪ್ರಸಂಶಕ್ಕೆ ಒಳಗಾಗಿದ್ದಾರೆ
ಈ ವೇಳೆ  ತಂಬ್ರಹಳ್ಳಿ ಪೋಲಿಸ್ ಠಾಣೆ ಪಿಎಸ ಐ. ಸುವರ್ಥಾ ಕಂದಾಯ ಅಧಿಕಾರಿ ಸಾಲ್ಮನಿ ಕೊಟ್ರೇಶ್, ವಿಎ.ಮೇಘರಾಜ್, ಸರ್ವೆ ಅಧಿಕಾರಿ ಶ್ರೀಧರ ನಾಯ್ಕ್, ಮುತ್ಕೂರು – ಕಿತ್ನೂರು ಗ್ರಾಮ ಪಂಚಾಯತಿ ಪಿಡಿಒ, ರೇವಣಸಿದ್ದಪ್ಪ  ಹಾಗೂ ಸಿಬ್ಬಂದಿ ಯವರು, ಗ್ರಾಮಸ್ಥರಾದ ಗುದ್ಲಿ ಹನುಮಂತಪ್ಪ, ಎ.ಕೊಟ್ರಪ್ಪ, ಬೆಂಕಿ ಮಲ್ಲಪ್ಪ, ಎಚ್.ಡಿ.ಮೈಲಾರಪ್ಪ ಉತ್ತಂಗಿ ವೀರಭದ್ರಪ್ಪ, ಶಂಬನಗೌಡ, ಮದ್ದಾನ ಸ್ವಾಮಿ, ಟಿ.ಉಮ್ಮಣ್ಣ,ಟಿ ಸೋಮಪ್ಪ ಡಿ.ನಿಂಗಪ್ಪ, ಭರಮರೆಡ್ಡಿ ಇತರರು ಇದ್ದರು.