ಮೋರಿಗೇರಿ ಶ್ರೀ ಮದಗಾಂಬಿಕಾ ದೇವಸ್ಥಾನದ ಅಭಿವೃದ್ಧಿಗೆ 1ಲಕ್ಷ.ರೂ. ದೇಣಿಗೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ : ಜು.06  ತಾಲ್ಲೂಕಿನ ಮೋರಿಗೇರಿ ಗ್ರಾಮದ ಹರಿಜನ ಕಾಲೋನಿಯ ಶ್ರೀ ಮದಗಾಂಬಿಕಾ ದೇವಸ್ಥಾನ ಜೀರ್ಣೋದ್ಧಾರಕ್ಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಮ ಪೂಜ್ಯರು ಮಂಜೂರು ಮಾಡಿರುವ 1 ಲಕ್ಷ ರೂಗಳ ಕಾಣಿಕೆಯ ಡಿ.ಡಿ.ಯನ್ನು ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ವಾಣಿ ಯವರು ಮದಗಾಂಭಿಕಾ ದೇವಸ್ಥಾನ ಸಮಿತಿಯವರಿಗೆ ನೀಡಿದರು,
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಿಲುಗೋಡು ಉದಯಕುಮಾರ್, ದೇವಸ್ಥಾನ ಸಮಿತಿ ಅಧ್ಯಕ್ಷ ಪಿ. ಪಕ್ಕೀರಪ್ಪ, ಮೈಲಪ್ಪ, ಪಿ ಮಂಜುನಾಥ್, ದುರುಗಪ್ಪ, ಪಕ್ಕೀರಪ್ಪ, ಕೊಟ್ರಬಸಪ್ಪ, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು, ಗ್ರಾಮಸ್ಥರು,
ಉಪಸ್ಥಿತರಿದ್ದರು.