ಬುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರತನಿಖೆಗೆ ಪ್ರತಾಪ್ ರೆಡ್ಡಿ ಆಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಮಗೆ ತಿಂಗಳಿಗೆ ಇಷ್ಟು ಕೊಟ್ಟು ಬಿಡಿ ನೀವೇನಾದ್ರೂ ಮಾಡಿಕೊಳ್ಳಿ ಎಂಬ ಅಧಕ್ಷರುಗಳೇ ಹೆಚ್ಚಾಗಿದ್ದರಿಂದ ಇಲ್ಲಿನ ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರ(ಬುಡಾ) ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಲು ಕಾರಣವಾಗಿದೆ. ಅದಕ್ಕಾಗಿ ಈ ಬಗ್ಗೆ ಪರಿಶೀಲನೆ ಮತ್ತು ತನಿಖೆಗೆ ನಗರಾಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ಒತ್ತಾಯಿಸುತ್ತಿರುವುದಾಗಿ
ಬುಡಾ ಮಾಜಿ ಅಧ್ಯಕ್ಷ ಎನ್.ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ. ಇಲ್ಲಿ  ಇತಿ‌ಮೀತಿ ಮೀರಿ  ನಡಾವಳಿ ಮಾಡಲಾಗಿದೆ.  ಕಚೇರಿಯನ್ನು ವ್ಯಾಪಾರೀಕರಣದ ಕೇಂದ್ರವಾಗಿ ಮಾಡಲಾಗಿದೆ. ಒಂದು ಸಭೆಗೆ ಒಂದು ಎರೆಡು ಕೋಟಿ ಸಂಗ್ರಹಿಸುವ ಮಟ್ಟಕ್ಕೆ ಹೋಗಿದೆ.  ಲಂಚದ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಸಿಲುಕಿದ ಈ ಹಿಂದಿನ ಆಯುಕ್ತ ರಮೇಶ್ ಅವರು  ಬಂದ ಮೇಲೆ ಕಳೆದ ಒಂದು ವರೆ ವರ್ಷದಿಂದ 
ಕಾನೂನು ರೀತಿ ನಡೆದುಕೊಳ್ಳದೆ.
ಡೆವಲಪರ್ ಗಳಿಗೆ  ಧಮಕಿ ಮತ್ತು ಬ್ಲಾಕ್ ಮೇಲ್ ಮಾಡುತ್ತಿದ್ದರು. ಟಿಎಸ್ ನಂ ಜಮೀನನ್ನು ಸಬ್ ಡಿವಿಷನ್ ಮಾಡಬಾರದು, ಆದರೂ ಮಾಡುತ್ತಾರೆ. ಇದರಿಂದ ರಸ್ತೆ, ಪಾರ್ಕ್ ಬರದೆ, ನೂರಕ್ಕೂ ಹೆಚ್ಚು ಏಕ ನಿವೇಶನ ಲೇಔಟ್ ಮಾಡಿದ್ದಾರೆ. ಈ ಹಿಂದೆ ಆಯುಕ್ತರಾಗಿದ್ದ ರಮೇಶ್ ಅವರು 12 ಜನ ಡೆವಲರ್ ಗಳನ್ನೇ ವಸೂಲಿಗಾಗಿ ಪಿಎಗಳನ್ನಾಗಿ ಮಾಡಿಕೊಂಡಿದ್ದರು. ಹಣ ಕೊಟ್ಟವರ ಕಡತಗಳಷ್ಟೇ ಸಭೆಗೆ ತರುತ್ತಿದ್ದರು ಎಂದು ಆರೋಪಿಸಿದರು.
ಬುಡಾ ಅಧ್ಯಕ್ಷರಾದವರು ಸರಿಯಾಗಿ ನಿಯಮಾವಳಿ ಅರಿತುಕೊಂಡು ಕಡತಗಳಿಗೆ ಸಹಿ ಹಾಕಬೇಕು. ಇಲ್ಲದಿದ್ದರೆ ಅಧಿಕಾರಿಗಳು ತಮ್ಮ ವಂಚನೆಗೆ ಬಳಸಿಕೊಳ್ಳುತ್ತಾರೆಂಬ ತಮ್ಮ ಅನುಭವ ಹಂಚಿಕೊಂಡ ಅವರು ಮುಂಬರುವ ದಿನಗಳಲ್ಲಿ ಆಯುಕ್ತರಂತೆ ಬುಡಾ ಅಧ್ಯಕ್ಷರೂ ಸಹ ಉತ್ತರದಾಯಕವಾಗುತ್ತಾರೆಂದರು.
ಲೋಕಾಯುಕ್ತಾಗೆ ಬುಡಾ ಮಾಜಿ ಅಧ್ಯಕ್ಷ ಮಾರುತಿ ಎಸ್. ಪ್ರಸಾದ್ ಸೇರಿದಂತೆ ಹಲವರ ಮೇಲೆ ದೂರು ನೀಡಿದ್ದರೂ ಯಾವುದೇ ಉತ್ತರ ಇಲ್ಲ. ನನ್ನ ಗಮನಕ್ಕೂ ಬಾರದಂತೆ ಒಂದು ಪ್ರಕರಣ ಕ್ಲೋಸ್ ಮಾಡಿದ್ದಾರೆಈ ಬಗ್ಗೆ  ಲೋಕಾಯುಕ್ತದ ಮೇಲಾಧಿಕಾರಿಗಳಿಗೆ ಪ್ರಶ್ನಿಸಿರುವೆ ಎಂದು ತಿಳಿಸಿದರು.
ಇಲ್ಲಿ ಬುಡಾ ಅಷ್ಟೇ ಅಲ್ಲ  ಆಫೀಸಗಳೆಲ್ಲ ವ್ಯಾಪಾರಿ ಕೇಂದ್ರಗಳಾಗಿವೆಂದ ಅವರು  ಭ್ರಷ್ಟಾಚಾರದ ವಿರುದ್ದತಾವು  ಹೋರಾಟಮಾಡುವುದನ್ನು ನಿಲ್ಲಿಸಲ್ಲ. ಕಳೆದ ಒಂದುವರೆ ವರ್ಷದಲ್ಲಿ  ಬುಡಾದಲ್ಲಿ ನಡೆದ ನಡಾವಳಿಗಳ ಬಗ್ಗೆ ತನಿಖೆ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಿಗೆ ಮನವಿ ಮಾಡಲಿದೆಂದರು.
ಎನ್ ಎಂಡಿಸಿ ಉಕ್ಕು ಕಾರ್ಖಾನೆ ಆರಂಭಿಸಲಿ:
ತಾಲೂಕಿನಲ್ಲಿ ಎಙ್ ಎಂಡಿಸಿಯಿಂದ ಉಕ್ಕು ಕಾರ್ಖಾನೆ ಸ್ಥಾಪಿಸಲು ಕೇಂದ್ರ ಉಕ್ಕು ಮತ್ತಯ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಮನವಿ ಮಾಡಿರುವೆ.  ಈಗಾಗಲೇ ಇದಕ್ಕೆ ಜಮೀನು ರೆಡಿ ಇದೆ. ಅದಿರಿಗೆ ಗಣಿ  ಇದೆ. ಆದ್ದರಿಂದ ಎನ್.ಎಂ.ಡಿ.ಸಿ ಪ್ಲಾಂಟ್ ನ್ನು ಆರಂಭಿಸಲು  ಸಮಸ್ಯೆ ಇಲ್ಲ.
 ಸಧ್ಯದಲ್ಲೇ ತಾವು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಒತ್ತಾಯಿಸಲಿದೆ. ಜಿಲ್ಲೆಯ ಸಂಸದರು, ಶಾಸಕರೂ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳು ಸಹ ಸಚಿವರನ್ನು ಭೇಟಿ ಮಾಡಿ ಈ ಬೇಡಿಕೆ ಸಲ್ಲಿಸುವ ಅವಶ್ಯಕತೆ ಇದೆ ಎಂದರು ಪ್ರತಾಪರೆಡ್ಡಿ.