ಬಾಲಿವುಡ್ ನಲ್ಲಿ ರಶ್ಮಿಕಾ ಭಾರೀ ಬೇಡಿಕೆ
ಹೈದರಾಬಾದ್,ಜು.೬-ಕನ್ನಡದ ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಸ್ಟಾರ್ ಹೀರೋಯಿನ್. ಬಾಲಿವುಡ್ ನಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ರಶ್ಮಿಕಾ ಮಂದಣ್ಣಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕೂಡ ಕ್ರಿಯೇಟ್ ಆಗಿದೆ. ನಟಿ ರಶ್ಮಿಕಾ ಸರಣಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗುತ್ತಿದ್ದಂತೆ ನಟಿಗೆ ಬೇಡಿಕೆ ಹೆಚ್ಚಿದೆ. ಸ್ಟಾರ್ ನಟರ ಸಿನಿಮಾಗಳಿಗೆ ನಟಿ ರಶ್ಮಿಕಾ ಮೊದಲ ಆಯ್ಕೆ. ರಶ್ಮಿಕಾ ಮಂದಣ್ಣ ಅವರ ಮುಂಬರುವ ಸಿನಿಮಾಗಳ ಪಟ್ಟಿಯೂ ಬಹಳ ದೊಡ್ಡದಿದೆ. ರಶ್ಮಿಕಾ ಬಾಲಿವುಡ್‌ನಲ್ಲಿ ನಿತಿನ್ ಜೊತೆ ತೆಲುಗಿನಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ ೨, ಶಾಹಿದ್ ಕಪೂರ್ ಮತ್ತು ವಿಕ್ಕಿ ಕೌಶಲ್ ಜೊತೆಗಿನ ಹಿಂದಿ ಚಿತ್ರಗಳೊಂದಿಗೆ ಬ್ಯುಸಿಯಾಗಿದ್ದಾರೆ.
ರಶ್ಮಿಕಾ ಇತ್ತೀಚೆಗೆ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ವಿಶ್ವಂಭರ ಚಿತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಸಿನಿಮಾದಲ್ಲಿ ಈಗಾಗಲೇ ತ್ರಿಷಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಖ್ಯಾತಿಯ ರಶ್ಮಿಕಾ ಅವರನ್ನು ವಿಶೇಷ ಪಾತ್ರಕ್ಕಾಗಿ ನಿರ್ದೇಶಕ ಮತ್ತು ನಿರ್ಮಾಪಕರು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.
ಅದೂ ಅಲ್ಲದೆ ಸ್ವತಃ ಮೆಗಾಸ್ಟಾರ್ ಚಿರಂಜೀವಿ ಅವರೇ ರಶ್ಮಿಕಾ ಅವರ ಹೆಸರನ್ನು ಚಿತ್ರದ ಪಾತ್ರಕ್ಕೆ ಸೂಚಿಸಿರುವುದು ವಿಶೇಷ. ಚಿರಂಜೀವಿ ಅವರ ಸಲಹೆಯಂತೆ ಚಿತ್ರತಂಡ ನಟಿ ರಶ್ಮಿಕಾ ಮಂದಣ್ಣ ಅವರನ್ನು ಭೇಟಿಯಾಗಿ ಚರ್ಚಿಸಿದೆ
ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ರಶ್ಮಿಕಾ ಮತ್ತು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕೂಡ ನಟಿಸಲಿದ್ದಾರೆ ಎನ್ನಲಾಗಿದೆ. ಬುಚ್ಚಿಬಾಬು ಮತ್ತು ರಾಮ್ ಚರಣ್ ಅವರ ಮುಂದಿನ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಹೇಳಲಾಗಿದೆ.
ಪುಷ್ಪ-೨, ವಿಶ್ವಂಭರ, ರಾಮ್ ಚರಣ್ ಅವರ ಹೊಸ ಸಿನಿಮಾಗಳಲ್ಲಿ ನಟಿಸುವ ಮೂಲಕ ರಶ್ಮಿಕಾ ‘ಮೆಗಾ ಹೀರೋಯಿನ್’ ಆಗಿ ಬದಲಾಗಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ ನಟಿ ಕಾಜಲ್ ಅಗರ್ವಾಲ್ ಅಂತಹ ಮೆಗಾ ಹೀರೋಗಳ ಜೊತೆ ನಟಿಸಿದ್ದಾರೆ. ಅದೇ ಪಟ್ಟಿಗೆ ರಶ್ಮಿಕಾ ಕೂಡ ಸೇರಲು ಪ್ರಯತ್ನಿಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ೨ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಆಗಸ್ಟ್ ೧೫ ರ ಬದಲು, ಡಿಸೆಂಬರ್ ೬ ರಂದು ಪುಷ್ಪ ೨ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಇತ್ತೀಚೆಗೆ, ರಶ್ಮಿಕಾ ಹಿಂದಿಯಲ್ಲಿ ಪ್ಯಾನ್ ಇಂಡಿಯಾ ಚಿತ್ರ ಅನಿಮಲ್ ನಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಅವರು ಮತ್ತೊಂದು ದೊಡ್ಡ ಹಿಟ್ ಪಡೆದಿದ್ದಾರೆ.
ರಶ್ಮಿಕಾ ಅಭಿನಯದ ಪುಷ್ಪ ೨: ದಿ ರೂಲ್ – ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ರಶ್ಮಿಕಾ ವಿಡಿ ೧೨ – ವಿಜಯ್ ದೇವರಕೊಂಡ – ಗೌತಮ್ ತಿನ್ನನೂರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಡಿ ೫೧ – ರಶ್ಮಿಕಾ ಧನುಷ್ ಮತ್ತು ಶೇಖರ್ ಕಮ್ಮುಲ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ರವಿತೇಜ-ಗೋಪಿಚಂದ್ ಮಲಿನೇನಿ ಸಿನಿಮಾ ಮತ್ತು ರೇನ್‌ಬೋ-ಲೇಡಿ ಓರಿಯೆಂಟೆಡ್ ಸಿನಿಮಾಗಳ ಮೂಲಕ ರಶ್ಮಿಕಾ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.