ಉಚಿತ ಆರೋಗ್ಯ ತಪಾಸಣೆ ಶಿಬಿರ
ಬಾಗಲಕೋಟೆ,ಜು6: ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ತಜ್ಞವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಮುಂಜಾನೆ 9.30 ರಿಂದ ಮದ್ಯಾನ್ಹ 1.30 ರ ವರೆಗೆ “ಬೇವಿನಮಟ್ಟಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಹತ್ತಿರವಿರುವ ವಾಲ್ಮಿಕಿ ಸಮುದಾಯ ಭವನದಲ್ಲಿ” ಜರುಗಿದ ಈ ಶಿಬಿರದಲ್ಲಿ ಸಾಮಾನ್ಯ ಔಷಧೋಪಚಾರ ವಿಭಾಗ, ಚರ್ಮರೋಗ ವಿಭಾಗ, ನೇತ್ರ ವಿಭಾಗ, ಕಿವಿ,ಮೂಗು ಮತ್ತು ಗಂಟಲು ವಿಭಾಗ, ಎಲುಬು ಕೀಲು ವಿಭಾಗ, ಚಿಕ್ಕಮಕ್ಕಳ ವಿಭಾಗ, ಸ್ರೀರೋಗ ವಿಭಾಗ ಹಾಗೂ ಶಸ್ತ್ರಚಿಕಿತ್ಸೆ ವಿಭಾಗದ ನುರಿತ ವೈದ್ಯರುಗಳು ಉಚಿತ ತಪಾಸಣೆ ಮಾಡಿದರು. ಈ ಸಂದರ್ಭದಲ್ಲಿ ರೋಗಿಗಳಿಗೆ ಅವಶ್ಯಕ ಔಷಧಿ ಮತ್ತು ಮಾತ್ರೆಗಳನ್ನು ನೀಡಲಾಯಿತು.
ಶಿಬಿರದಲ್ಲಿ ಸುಮಾರು 100 ರೋಗಿಗಳಿಗೆ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಸವರಾಜ ವಾಲಿಕಾರ, ಈರಣ್ಣ ಸುಳಿಕೇರಿ, ವಿಠ್ಠಲ ಆರ್.ನೆಲಗಿ, ಬಸವರಾಜ ಕೆಂಪಣ್ಣವರ, ಮುತ್ತಪ್ಪ ತಳವಾರ, ಜಗದೀಶ ವಾಲಿಕಾರ, ಹನಮಂತ ಮುಕ್ಕಣ್ಣವರ, ಸಿಂಧೂರ ಗೌಡರ, ತುಳಚಪ್ಪ ಕೆಂಪಣ್ಣವರ, ಸಣಕಪ್ಪ ಮುಕ್ಕಣ್ಣವರ, ಕೆಂಚಪ್ಪ ಜಮ್ಮನಕಟ್ಟಿ, ಪರಶುರಾಮ ಸೂಳಿಕೇರಿ ಹಾಗೂ ಗ್ರಾಮದ ಇತರ ಗಣ್ಯರು ಉಪಸ್ಥಿತರಿದ್ದರು ಮತ್ತು ಬೇವಿನಮಟ್ಟಿ ಗ್ರಾಮ ಪಂಚಾಯತಿ ಸಿಬ್ಬಂದಿಯವರು ಸಹಕರಿಸಿದರು.