ಶಿಸ್ತು ಬೆಳೆಸಲು ಸಮವಸ್ತ್ರ ಸಹಕಾರಿ
ಭಾಲ್ಕಿ:ಜು.6:ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸಲು ಸಮವಸ್ತ್ರ ಅತ್ಯಂತ ಸಹಕಾರಿ ಎಂದು ದಂತ ವೈದ್ಯ ಡಾ.ಪಂಡಿತ ಬಿರಾದಾರ್ ಹೇಳಿದರು.
ಪಟ್ಟಣದ ಲೆಕ್ಚರ್ ಕಾಲೋನಿಯ ಖಡಕೇಶ್ವರ ಪ್ರೌಢ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಮವಸ್ತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮವಸ್ತ್ರಧಾರಿ ಎಂದರೆ ಶಿಸ್ತಿನ ಸಿಪಾಯಿ. ಮಕ್ಕಳು ಶಿಸ್ತನ್ನು ಮೊದಲು ತಮ್ಮ ತಮ್ಮ ತಾಯಿಯಿಂದಲೇ ಕಲಿಯುತ್ತಾರೆ. ನಂತರ ಶಿಕ್ಷಕರಿಂದ ಕಲಿಯುತ್ತಾರೆ. ಸಮವಸ್ತ್ರ ಧರಿಸುವುದರಿಂದ ಮಕ್ಕಳಲ್ಲಿ ಸಮಾನತೆ, ಶಿಸ್ತು, ದಕ್ಷತೆ, ಕರ್ತವ್ಯ ಪ್ರಜ್ಞೆ ಮುಂತಾದವುಗಳನ್ನು ಮೂಡಿಸಬಹುದು ಎಂದು ಸಮವಸ್ತ್ರದ ಬಗ್ಗೆ ಬಹಳ ಮಾರ್ಮಿಕವಾಗಿ ತಿಳಿಸಿದರು.
ತರಗತಿ ಆರಂಭದಿಂದಲೇ ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಿ ಉತ್ತಮ ಸಾಧನೆ ತೋರಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ನೇಹಾ ಖಂಡ್ರೆ, ಶಿಕ್ಷಕರಾದ ದಿಲೀಪ ಘಂಟೆ, ಪ್ರಕಾಶ ರುದನೂರೆ, ಅಂಜಲಿ ಜೋಶಿ, ಶುಭಂ ರಾಯವಾಡೆ, ಜಯಪ್ರಕಾಶ ಸಹಾನೆ, ಜೀವನ ಬಿರಾದಾರ್ ಸೇರಿದಂತೆ ಹಲವರು ಇದ್ದರು. ಮುಖ್ಯಗುರು ಆನಂದ ಕಲ್ಯಾಣೆ ಸ್ವಾಗತಿಸಿ, ನಿರೂಪಿಸಿದರು