ಯಕ್ಷಗಾನ ಬಯಲಾಟ ಪ್ರದರ್ಶನ
ಬಾದಾಮಿ,ಜು.6: ನಗರದಲ್ಲಿ ಹೊಟೇಲ್ ಮತ್ತು ಉಪಹಾರ ಮಂದಿರಗಳ ಸಂಘ ಮತ್ತು ಗಜಾನನ ಅಭಿವೃದ್ಧಿ ಸಮಿತಿ ಆನಂದ ನಗರ , ಇವರ ಸಹಯೋಗದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಇವರಿಂದ ಮಹಾಶಕ್ತಿ ವೀರಭದ್ರ ಎಂಬ ಯಕ್ಷಗಾನ ಬಯಲಾಟ ಪ್ರದರ್ಶಿಸಲಾಯಿತು.
ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕಲಾವಿದರ ಮಹಾಶಕ್ತಿ ವೀರಭದ್ರ ಯಕ್ಷಗಾನ ಪ್ರದರ್ಶನಕ್ಕೆ ಹೋಟೆಲ ಸಂಘದ ಅಧ್ಯಕ್ಷ ನಾಗರಾಜ ಕಾಚಟ್ಟಿ ಚಾಲನೆ ನೀಡಿದರು.
ಉತ್ತರ ಕರ್ನಾಟಕ ದೊಡ್ಡಾಟ ಮತ್ತು ಪಾರಿಜಾತದಂತೆ ಇರುವ ಯಕ್ಷಗಾನ ಕಲಾವಿದರ ಸಂಭಾಷಣೆ ಸಂಗೀತ ಮತ್ತು ವಿಶೇಷ ವಸ್ತ್ರಾಂಲಕಾರ ಪ್ರೇಕ್ಷಕರ ಮನಸೂರೆಗೊಳಿಸಿದರು. ಭಾಗವತರಾಗಿ ಕೊಕ್ಕರ್ಣಿ ಸದಾಶಿವ ಅಮೀನ್, ಗಣೇಶ ಆಚಾರ್ಯ ಬಿಲ್ಲಾಡಿ ಸ್ತ್ರೀ ಪಾತ್ರದಲ್ಲಿ ದಿನಕರ ಕುಂದರ ನಡೂರ, ನಾಗರಾಜ ದೇವಲ್ಕುಂ, ರಾಕೇಶ ಶೆಟ್ಟಿ ಮೇಗರಳ್ಳಿ ಹಾಸ್ಯ ಪಾತ್ರದಲ್ಲಿ ಸತೀಶಕುಮಾರ ಹಾಲಾಡಿ ಜನರ ಮೆಚ್ಚುಗೆಗೆ ಪಾತ್ರರಾದರು.
ಉಪ್ಪುಂದ ನಾಗೇಂದ್ರರಾವ್, ವಿಶ್ವನಾಥ ಪೂಜಾರಿ, ಹೆನ್ನಾಬೈಲ್, ಹರೀಶ ಚಂದನ್ ಜಪ್ತಿ, ನಂದೀಶಕುಮಾರ ಜನ್ನಾಡಿ, ವಂಡಾರು ರಮೇಶ, ರಾಘವೇಂದ್ರ ಉಳ್ಳೂರ ಉತ್ತಮ ಪ್ರದರ್ಶನ ನೀಡಿದರು.
ಸಮಾರಂಭದಲ್ಲಿ ಹೊಟೇಲ ಸಂಘದ ಅಧ್ಯಕ್ಷರು ನಾಗರಾಜ ಕಾಚೆಟ್ಟಿ , ಗಜಾನನ ಸೇವಾ ಸಮಿತಿ ಅಧ್ಯಕ್ಷರು ಚನವೀರಗೌಡರು , ಹೋಟೇಲ ರಾಜ್ಯ ಸಮಿತಿ ಸದಸ್ಯ ವಿವೇಕಾನಂದ ನಾಯಕ, ಯಕ್ಷಗಾನ ಮಂಡಳಿ ಸಂಚಾಲಕರು ಕೊಕ್ಕರ್ಣೆ ಸದಾಶಿವ ಅಮೀನ, ಆನಂದ ನಗರದ ಮಾತೆ ಬಸಮ್ಮ ಕಾರು ಡಗಿಮಠ ಮತ್ತು ಹೊಟೇಲ ಸಂಘದ ಪದಾಧಿಕಾರಿಗಳು , ಸರ್ವಸದಸ್ಯರು ಭಾಗವಹಿಸಿದ್ದರು.