ಕನಕಭವನ ಕಟ್ಟಡಕ್ಕೆ ಮೋಲ್ಡಿಂಗ್ ಕಾಮಗಾರಿ
ಕೋಲಾರ,ಜು.೬-ನಗರದ ಕುವೆಂಪು ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಕನಕಭವನ ಮತ್ತು ನವೀಕೃತ ಕನಕದಾಸರ ವಿಧ್ಯಾರ್ಥಿ ನಿಲಯದ ಮೊದಲನೇ ಮಹಡಿಯ ಮೇಲ್ಛಾವಣಿ ಕಟ್ಟಡಕ್ಕೆ ಇಂದು ಮೋಲ್ಡಿಂಗ್ ಕಾಮಗಾರಿ ನಡೆಸಲಾಯಿತು.
ಸಮುದಾಯದ ಬಹುದಿನಗಳ ಬೇಡಿಕೆಯಾಗಿರುವ ಸುಸಜ್ಜಿತವಾದ ಕನಕಭವನ ಮತ್ತು ಕನಕದಾಸರ ವಿಧ್ಯಾರ್ಥಿ ನಿಲಯದ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದೆ ಎಂದು ಜಿಲ್ಲಾ ಕುರುಬರ ಸಂಘದ ಆಧ್ಯಕ್ಷ ತಂಬಿಹಳ್ಳಿ ಮುನಿಯಪ್ಪ ಹೇಳಿದರು. ಇದಕ್ಕೆ ಕಾರಣಕರ್ತರಾದ ಸಮುದಾಯದ ಮುಖಂಡರು, ಹಿರಿಯರು ಮತ್ತು ಭವನ ನಿರ್ಮಾಣಕ್ಕೆ ಅನುದಾನ ನೀಡಿರುವ ಜನಪ್ರತಿನಿಧಿಗಳಿಗೆ ಧನ್ಯವಾದ ತಿಳಿಸಿದರು.
ಇನ್ನೂ ಕನಕಭವನ ಮತ್ತು ಕನಕದಾಸರ ವಿಧ್ಯಾರ್ಥಿ ನಿಲಯದ ಅಧ್ಯಕ್ಷ ಕೆಎಸ್.ಆರ್.ಟಿ.ಸಿ ಮುನಿಯಪ್ಪ ಮಾತನಾಡಿ, ಇಂದು ಕಟ್ಟಡದ ಮೊದಲನೇ ಮಹಡಿ ಮೇಲ್ಛಾವಣಿಯ ಮೋಲ್ಡಿಂಗ್ ಕಾಮಗಾರಿ ಮುಗಿಸಲಾಗಿದೆ. ಗುಣಮಟ್ಟದಿಂದ ಭವನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಇನ್ನಷ್ಟು ಭವನ ಕಾಮಗಾರಿ ಬಾಕಿ ಇದೆ ಎಂದರು. ಇದೇ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೀಲುಕೋಟೆ ಪರಮೇಶ್ವರ್, ಗುತ್ತಿಗೆದಾರ ನರೇಶ್, ಲ್ಯಾಂಡ್ ಆರ್ಮಿ ಇಂಜಿನಿಯರಿಂಗ್ ಮುರಳಿ, ವಿಧ್ಯಾರ್ಥಿ ನಿಲಯದ ಸಂದೀಪ್, ಕೃಷ್ಣ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.