ವೃದ್ಧೆ ಅನಾಥಾಶ್ರಮಕ್ಕೆ ದಾಲಿಸಿದ ಪಿಎಸ್‌ಐ ನಂಜುಂಡಯ್ಯ
ಚಿಕ್ಕಬಳ್ಳಾಪುರ.ಜು೬:ನಗರದ ವಾರ್ಡ ನಂ ೭ರಲ್ಲಿ ನಗರ ಠಾಣೆ ಪಿಎಸ್‌ಐ ಹೆಚ್ ನಂಜುಂಡಯ್ಯ ಗಸ್ತಿನಲ್ಲಿ ಇದ್ದಾಗ ರಸ್ತೆ ಪಕ್ಕ ಕುಳಿತಿದ್ದ ೬೦-೬೫ ವರ್ಷ ವಯಸ್ಸಿನ ಲಕ್ಷ್ಮಮ್ಮ ಬಿನ್ ಲಕ್ಷ್ಮಯ್ಯ ಎಂಬಾಕೆಯನ್ನು ಅಕೆಯ ಮನವಿ ಮೇರಗೆ ವೃದ್ಧಾಶ್ರಮಕ್ಕೆ ದಾಖಲಿಸಿ ಮಾನವಿಯತೆ ಮೆರೆದಿದ್ದಾರೆ.
ನಾನೊಬ್ಬ ಅನಾಥೆ ನನ್ನಗೆ ಯಾರು ಆಸರೆ ಇಲ್ಲ ಆನಾಥಶ್ರಮಕ್ಕೆ ಸೇರಿಸಿ ಎಂದು ಗೋಗೆರದರು ಎನ್ನಲಾಗಿದೆ ಆಗ ಆಕೆಯ ವಿವರಗಳನ್ನ ಪಡೆದ ನಂಜುಂಡಯ್ಯ ಶ್ರೀರಂಗಪಟ್ಟಣ ಮೂಲದ ಆಕೆ ಮೂವತ್ತು ವರ್ಷಗಳಿಂದ ಇಲ್ಲಿಯೆ ವಾಸವಾಗಿದ್ದಾಳೆ ಗಂಡ ಮಕ್ಕಳು ತೀರಿಕೊಂಡಿದ್ದಾರೆ ಎಂದು ತಿಳಿದುಕೊಂಡಿದ್ದಾರೆ ಈಕೆ ನಿಮ್ಮಾಕಲ ಕುಂಟೆಯ ದೇವಸ್ಥಾನ,ಅವರಿವರ ಪರಿಚಯದವರ ಮನೆಯಲ್ಲಿ ಕಾಲ ಕಳೆಯುತಿದ್ದಳು ಇತ್ತಿಚೆಗೆ ಅನಾಥ ಆಶ್ರಮವೊಂದಕ್ಕೆ ಸೇರಿಸಿದ್ದರು.
ಅಲ್ಲಿಂದ ವಾಪಸ್ಸು ಬಂದಿದ್ದರು ಈಕೆ ಬಳಿ ಒಂದು ಲಕ್ಷ ನಗದು ಇಟ್ಟುಕೊಂಡಿದ್ದಳು ಅದನ್ನ ಕಬಳಿಸಲು ಕೆಲವರು ಪ್ರಯತ್ನಿಸುತಿದ್ದಾರೆಂದು ತಿಳಿದು ಬಂದಿದೆ ಈಕೆಯ ಹುಟ್ಟು ಪೂರ್ವೋತ್ತರ ಮಾಹಿತಿ ತಿಳಿದ ನಂಜುಂಡಯ್ಯ ನಂತರ ಆ ಹಣವನ್ನ ಕೂಡಲೆ ಆಕೆಯ ಎಸ್‌ಬಿಐ ಬ್ಯಾಂಕ್ ಖಾತೆಗೆ ಹಾಕಿಸಿ ಅದರ ಚಲನ್ ಸ್ಟೇಟ್ ಮೆಂಟ್ ತರಿಸಿ ಆಕೆಯ ಬಳಿ ಇದ್ದ ಎರಡು ಮೋಬೈಲ್ ಬಟ್ಟೆ ತರಿಸಿ ಶ್ರೀನಿವಾಸ ಪುರದ ಅನಾಥ ಅಶ್ರಮವೊಂದಕ್ಕೆ ಅಮ್ಮ ಆಂಬುಲೆನ್ಸ್ ನಲ್ಲಿ ಕಳುಹಿಸಿಕೊಟ್ಟರು. ಪಿ ಎಸ್ ಐ ಮನವಿತೆಯ ಕರ್ತವ್ಯವನ್ನ ವೃತ್ತ ನಿರೀಕ್ಷಕ ಮಂಜುನಾಥ್ ಶ್ಲಾಘಿಸಿದ್ದು ಆಕೆಯನ್ನ ಭದ್ರತೆಯಿಂದ ಅನಾಥಶ್ರಮಕ್ಕೆ ಸೇರಿಸುವಂತೆ ಸೂಚಿಸಿದರು.
ಇನ್ನೂ ಲಕ್ಷಮ್ಮಳ ಜತೆಗೆ ಹತ್ತಾರ ವರ್ಷಗಳಿಂದ ಒಡನಾಟದಲ್ಲಿದ್ದ ಅಕ್ಕ ಪಕ್ಕದ ವಾಸಿಗಳು ರತ್ನಮ್ಮ ಮತ್ತು ಲೀಲಾವತಿ ಹಾಗು ಕುಟುಂಬದವರು ತಮ್ಮ ಕುಟುಂಬದ ಸದಸ್ಯರೊಬ್ಬರನ್ನೆ ಕಳುಹಿಸಿಕೊಟ್ಟಂತೆ ಕಣ್ಣೀರಾಕಿ ಭಾವಾನತ್ಮಕ ಬೀಳ್ಕೊಡುಗೆ ನೀಡಿದರು. ಆಕೆ ಬಳಿ ಇದ್ದ ಒಂದೆರಡು ಬ್ಯಾಗು ಬಟ್ಟೆ ತರಿಸಿಕೊಟ್ಟು ಸಾರಿ ಸಾರಿ ಹೋಗಿ ಬಾಮ್ಮಾ ಪೋನ್ ಮಡ್ತೀವಿ ಅವಾಗ ಮಾತಾಡು ಚೆನ್ನಾಗಿರು ಭಯಬೀಳಬೇಡ ಪೊಲೀಸೋರು ಒಳ್ಳೆ ಕೆಲಸ ಮಾಡಿದ್ದಾರೆ ಎಲ್ಲಿದ್ದರು ಸುಖವಾಗಿರು ಎಂದು ಹಾರೈಸುತಿದ್ದರು.
ಅಬಲೆಯರನ್ನಾಗಲಿ ಅನಾಥರನ್ನ ಕಂಡೊಡನೆ ಮೊಮ್ಮಲ ಮರುಗುವ ಪಿ ಎಸ್ ಐ ನಂಜುಂಡಯ್ಯನವರ ಮಾನವೀಯ ಕೆಲಸಕ್ಕೆ ನಾಗರೀಕರು ಮೆಚ್ಚುಗೆ ವ್ಯಕ್ಯಪಡಿಸುತಿದ್ದಾರೆ.