ಮಲ್ಲೇಶಬಾಬು ಕಚೇರಿಯಲ್ಲಿ ಕೈ ಮುಖಂಡ ನಾರಾಯಣಪ್ಪ
ಕೆಜಿಎಫ್; ಜು,೬- ಕೆಜಿಎಫ್ ತಾಲ್ಲೂಕಿನ ಎನ್.ಜಿ.ಹುಲ್ಕೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷಮ್ಮ ರವರ ಪತಿ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಕಾಂಗ್ರೆಸ್ ಮುಖಂಡ ನಾರಾಯಣಪ್ಪ ಸಂಸದ ಮಲ್ಲೇಶಬಾಬು ರವರ ಕಚೇರಿಯಲ್ಲಿ ಕಾಣಿಸಿಕೊಂಡಿದ್ದು ತಾಲ್ಲೂಕಿನಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ .
ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ನಾರಾಯಣಪ್ಪ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇಪರ್ಡೆಗೊಂಡು ಶಾಸಕಿ ರೂಪಕಲಾಶಶಿಧರ್ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು ಆದರೆ ದಿಡೀರ್ ಎಂದು ಕೋಲಾರ ಸಂಸದ ಮಲ್ಲೇಶಬಾಬು ರವರ ಕಚೇರಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು ನಾರಾಯಣಪ್ಪ ಮುಂದಿನ ನಡೆ ಏನು ಎಂಬ ಚರ್ಚೆ ತಾಲ್ಲೂಕಿನಲ್ಲಿ ನಡೆಯುತ್ತಿದೆ .