ಮುಡಾದಲ್ಲಿ ಯಾವುದೇ ಹಗರಣ ನಡೆದಿಲ್ಲ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.06-ಮುಡಾದಲ್ಲಿಯಾವುದೇ ಹಗರಣ ನಡೆದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದಅವರು, ಇದಕ್ಕೂ ಡಿಕೆಶಿಗೂ ಸಂಬಂಧವಿಲ್ಲ. ಘಟನೆತನಿಖೆಯ ಹಂತದಲ್ಲಿದೆಎಂದರು.
ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ಒತ್ತಾಯಕ್ಕೆ, ಹಗರಣಎಂದೇ ಸಾಬೀತಾಗಿಲ್ಲ. ಸಿಬಿಐಗೆ ಏಕೆ ಕೊಡಬೇಕು. ನಮ್ಮರಾಜ್ಯದಲ್ಲಿ ಪೆÇಲೀಸರುಇಲ್ವಾ. ಬಿಜೆಪಿಯವರು ಸಿಬಿಐಗೆ ಕೊಟ್ಟು ಏನು ಮಹಾ ಕೆಲಸ ಮಾಡಿದ್ದಾರೆ. ಅವರೆಷ್ಟು ಸಿಬಿಐಗೆ ಕೊಟ್ಟಿದ್ದಾರೆಎಂದರು.
ರಾಮನಗರವನ್ನು ಬೆಂಗಳೂರಿಗೆ ಸೇರ್ಪಡೆ ಮಾಡುವ ವಿಚಾರಕ್ಕೆ ಮಾತನಾಡಿ, ಡಿಕೆಶಿ ಬೆಂಗಳೂರು ನಗರಾಭಿವೃದ್ಧಿ ಸಚಿವರು. ಅವರು ನಿರ್ಧಾರತೆಗೆದುಕೊಂಡ ಬಳಿಕ ಚರ್ಚೆ ನಡೆಸುತ್ತೇವೆಎಂದು ಹೇಳಿದರು.
ವಿಶ್ವನಾಥ್ ವಿರುದ್ಧ ವಾಗ್ದಾಳಿ: ಬೈರತಿ ಸುರೇಶ್‍ರಿಯಲ್‍ಎಸ್ಟೇಟ್‍ಉದ್ಯಮಿಎಂದುಕಿಡಿಕಾರಿದ್ದ ಶಾಸಕ ಎಚ್.ವಿಶ್ವನಾಥ್ ಹೇಳಿಕೆಗೆ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಅವರು, ಏ.ಯಾರ್ರಿಅವ್ನು ರಿಯಲ್‍ಎಸ್ಟೇಟ್‍ಒಂದು ಉದ್ಯಮ ಅಲ್ವಾ.ಅವ್ನು ಅವನ ಮಗ ನನ್ನ ಮನೆಗೆ ಸೈಟ್ ಕೇಳೋಕೆ ಬಂದಿದ್ದ ಫೆÇೀಟೊಇದೆ. ಅವ್ನು ಏಕವಚನ ಬಳಸಿದ್ರೆ ನನಗೆ ಅದಕ್ಕಿಂತ ಹೆಚ್ಚಿಗೆ ಮಾತನಾಡೋಕೆ ಬರುತ್ತೆ. ನಾನು ಹಳ್ಳಿಯಲ್ಲೇ ಹುಟ್ಟಿ ಬೆಳೆದಿರೋದು. ಮೊದ್ಲು ಮರ್ಯಾದೆಕೊಟ್ಟೆ ಮರ್ಯಾದೆ ತೆಗೆದುಕೊಳ್ಳಲಿ. ವಿಶ್ವನಾಥ್‍ಥರ ನಾನು ರೋಲ್‍ಕಾಲ್‍ಗಿರಾಕಿಅಲ್ಲ. ವಯಸ್ಸಾಗಿದೆಅಂತಅμÉ್ಟೀ ಬೆಲೆ ಕೊಡ್ತೀವಿ. ಅದನ್ನು ಉಳಿಸಿಕೊಳ್ಳಲಿ ಎಂದುಆಕ್ರೋಶ ಹೊರಹಾಕಿದರು.