ಸ್ವಾಮಿತ್ವ ಯೋಜನೆ ಹಾರೋಹಳ್ಳಿ ಜನರಿಗೆ ಸಿಗಲಿ
ಕನಕಪುರ. ಜು.೬-ಮಾಜಿ ಸಂಸದಡಿ.ಕೆ. ಸುರೇಶ್‌ರವರ ಕನಿಸಿನ ಕೂಸಾದ ಸ್ವಾಮಿತ್ವ ಯೋಜನೆಯ ಪ್ರಯೋಜನ ನೂತನ ಹಾರೋಹಳ್ಳಿ ತಾಲೂಕಿನಜನರಿಗೆ ಸಿಗುವಂತಾಬೇಕೆಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ಹಾರೋಹಳ್ಳಿಯ ಹೊರವಲಯ ದಲ್ಲಿಇರುವ ಬೆಂಗಳೂರು ನೀರು ಸರಬರಾಜು ಮಂಡಳಿಯ ಪ್ರವಾಸಿ ಮಂದಿರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಹಾರೋಹಳ್ಳಿ ತಾಲೂಕಿನಅಭಿವೃದ್ದಿಗೆ ಸಂಬಂಧಿಸಿದಂತೆ ಚರ್ಚಿಸಿ ಮಾತನಾಡಿದರು.
ಡಿ.ಕೆ. ಸುರೇಶ್‌ರವರು ಗೆದ್ದರೂ ನಮಗೆ ಸಂಸದರೆ ಸೋತರೂ ನಮಗೆ ಸಂಸದರಾಗೇ ಇರುತ್ತಾರೆ ಅವರ ಕನಸಿನಂತೆ ಈ ಭಾಗದ ಜನರ ಜಮೀನುಗಳಿಗೆ ಸಂಬಂಧಿಸಿದಂತೆ ಅಗತ್ಯದಾಖಲಾತಿಯನ್ನು ಸರಿಪಡಿಸುವಂತೆ ತಿಳಿಸಿದರು. ಇನ್ನು ೮ ದಿನಗಳ ಒಳಗೆ ಡಿ.ಕೆ. ಸುರೇಶ್‌ರವರಜೊತೆಗೂಡಿ ನಾನು ಪ್ರತಿ ಗ್ರಾಮಗಳಿಗೆ ಬಂದು ಜನರಿಗೆ ಡಿ.ಕೆ. ಸುರೇಶ್‌ರವರ ಕೈಯಲ್ಲಿ ಕೊಡಿಸುತ್ತೇನೆ ಎಂದು ಹೇಳಿದರು.
ಹಾರೋಹಳ್ಳಿಯು ನೂತನ ತಾಲೂಕಾಗಿ ಘೋಷಣೆಯಾದ ನಂತರ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಒಂದೆ ಕಡೆ ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಸ್ಥಳ ಪರಿಶೀಲನೆ ನಡೆದಿದ್ದು ಈ ಸ್ಥಳದಲ್ಲಿ ಒಂದೇ ಸೂರಿನಲ್ಲಿಎಲ್ಲಾ ಕಟ್ಟಡಗಳಿಗೆ ಜಾಗ ಹೊಂದಾಣಿಕೆ ಮಾಡಲು ಸಾಧ್ಯವೇಎಂದು ತಹಶೀಲ್ದಾರ್ ವಿಜಯಣ್ಣ ಹಾಗೂ ಇ.ಒ ರಾಮಯ್ಯ , ಡಿ.ಡಿ.ಎಲ್. ಆರ್. ನಂದೀಶ್, ತಾಲೂಕು ವೈಧ್ಯಾಧಿಕಾರಿಕೆ.ರಾಜು, ಸೇರಿದಂತೆ ಹಾರೋಹಳ್ಳಿ ಮರಳವಾಡಿ ಹೋಬಳಿ ವ್ಯಾಪ್ತಿಯಗ್ರಾಮ ಪಂಚಾಯತಿಗಳ ಅಭಿವೃದ್ದಿ ಅಧಿಕಾರಿಗಳೊಡನೆ ಚರ್ಚಿಸಲಾಯಿತು.
ಹಾರೋಹಳ್ಳಿಯಲ್ಲಿ ಈಗ ಇರುವ ಬಸ್ ನಿಲ್ದಾಣಕಿರಿದಾಗಿದ್ದು ಸೂಕ್ತ ಜಾಗ ನೀಡುವಂತೆಇಲ್ಲಿನಕೆ.ಎಸ್.ಆರ್.ಟಿ. ಡಿಪೋ ಮ್ಯಾನೇಜರ್‌ಸಚ್ಚಿನ್‌ಶಾಸಕರಲ್ಲಿ ಮನವಿ ಸಲ್ಲಿಸಿದರು.
ಈಗಾಗಲೇ ಗುರುತಿಸಿರುವ ೫೦ ಎಕರೆಜಾಗದಲ್ಲಿ ಬಸ್ ನಿಲ್ದಾಣಕ್ಕೆಜಾಗ ನೀಡಲು ಪರಿಶೀಲನೆ ನಡೆಸಲಾಗುವುದುಎಂದು ಶಾಸಕ ಇಕ್ಬಾಲ್ ಹುಸೇನ್ ತಹಶೀಲ್ದಾರ್ ಹಾಗೂ ಇಒ ರವರಿಗೆ ಮನವಿಯನ್ನು ವರ್ಗಾಯಿಸಿದರು.
ಹಾಗೆಯೇಡಾ.ರಾಜುರವರು ನೂತನ ತಾಲೂಕಿಗೆ ೧೦೦ ಹಾಸಿಗೆ ಅಸ್ಪತ್ರೆಗೆ ಮೇಲ್ದರ್ಜೆಗೆಏರಿಸಲು ಮನವಿ ಮಾಡಿದರುಈಸಂದರ್ಭದಲ್ಲಿ ಮಾತನಾಡಿದ ಶಾಸಕರು ಈ ಅಸ್ಪತ್ರೆ ಇರುವ ಜಾಗ ಸೂಕ್ತವಲ್ಲ ದಾಗಿದ್ದುಕಾಲೇಜು ಹಾಗೂ ಆಸ್ಪತ್ರೆಗೆ ಸೂಕ್ತಜಾಗವನ್ನು ನೋಡಿದ ನಂತರ ತೀರ್ಮಾನಿಸೊಣವೆಂದರು.
ಹಾರೋಹಳ್ಳಿಗೆ ಕುಡಿಯಲುಕಾವೇರಿ ನೀರು ನೀಡಲು ಬೇಕಾಗ ಎಲ್ಲಾಕ್ರಮವನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳ ಜೊತೆ ಚರ್ಚಿಸಿದರು.
ಬಿಡದಿ ರಸ್ತೆಯಿಂದಆನೇಕಲ್‌ರಸ್ತೆಅಗಲಿಕರಣಕ್ಕೆ ಸಂಬಂಧಿಸಿದಂತೆ ಕೂಡಇದೇ ಸಂದರ್ಭದಲ್ಲಿಚರ್ಚಿಸಲಾಯಿತು. ಕುಡಿಯು ನೀರಿಗೆ ಸಂಬಂಧಿಸಿದಂತೆ ಬೋರ್‍ವೆಲ್‌ಕೊರೆಸಲು ಬಂದ ಮನವಿಯ ಮೇರೆಗೆ ೨೦ ಬೋರ್‍ವೆಲ್‌ಗಳನ್ನು ಕೊರೆಸಲುತೀರ್ಮಾನಿಸಲಾಯಿತು.
ಹಾಗೆಯೇ ಈಗಾಗಲೇ ೩೦೦೦ ಮನೆಗಳನ್ನು ಹಾರೋಹಳ್ಳಿ ಮರಳವಾಡಿ ಹೋಬಳಿವ್ಯಾಪ್ತಿಯ ಜನರಿಗೆಹಂಚಿಕೆ ಮಾಡಲುತೀರ್ಮಾನಿಸಲಾಗಿದ್ದುಇನ್ನೂ ೨೦೦೦ ಮನೆಗಳು ಅಗತ್ಯ ಬಿದ್ದರೆ ನೀಡಲಾಗುವುದುಎಂದು ಶಾಸಕರು ತಿಳಿಸಿದರು. ಹಾಗೆಯೇ ಮಾಜಿ ಸಂಸದಡಿ.ಕೆ.. ಸುರೇಶ್ ರವರ ಅಭಿವೃದ್ದಿಯ ಕನಸಿನಂತೆ ಸ್ವಾಮಿತ್ವ ಯೋಜನೆಯಡಿಯಲ್ಲಿ ಈ ಸ್ವತ್ತು ಮಾಡಿ ಜನರಿಗೆ ನೀಡಬೇಕಾಗಿದೆ ಎಲ್ಲಾ ಅಧಿಕಾರಿಗಳು ಅತಿಶೀಘ್ರವಾಗಿ ಸ್ವಾಮಿತ್ವವನ್ನು ಮಾಡಿಜನರಿಗೆತಲುಪಿಸಲು ಕೆಲಸವನ್ನು ಮಾಡುವಂತೆಆದೇಶ ನೀಡಿದರು.
ಹಣ ಎಷ್ಟೇ ಬೇಕಿದ್ದರೂ ಅಧಿಕಾರಿಗಳು ಕೇಳಿ ನನಗೆ ಅಭಿವೃದ್ದಿ ಕೆಲಸಗಳಾಬೇಕಷ್ಟೇ ಇನ್ನು ಕೆಲವೆ ದಿನಗಳಲ್ಲಿ ಡಿ.ಕೆ. ಸುರೇಶ್ ನೇತೃತ್ವದಲ್ಲಿ ಪ್ರತಿ ಗ್ರಾಮಗಳಿಗೆ ಬೇಟಿಕೊಟ್ಟು ಪರಿಶೀಲನೆ ಮಾಡಲಾಗುವುದುಎಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹೆಚ್.ಕೆ. ನಾಗರಾಜು, ವಿ.ಎಸ್.ಎಸ್.ಎನ್‌ಅಧ್ಯಕ್ಷ ಸೋಮಣ್ಣ,ಮದನ್ ಮೋಹನ್ ಹೊಳ್ಳ, ತಾಲೂಕು ಪಂಚಾಯತಿ ಮಾಜಿಅಧ್ಯಕ್ಷ ಶ್ರೀಕಂಠಯ್ಯ, ಮಾಜಿ ಸದಸ್ಯ ಪುರುಷೋತ್ತಮ್, ಹಾರೋಹಳ್ಳಿ ಮರಳವಾಡಿ ಹೋಬಳಿ ಕಾಂಗ್ರೆಸ್‌ಅಧ್ಯಕ್ಷ ಜೆಸಿಬಿ ಅಶೋಕ್, ಬಮೂಲ್ ನಿರ್ದೇಕ ಹರೀಶ್‌ಕುಮಾರ್, ಯೋಜನಾ ಪ್ರಾಧೀಕಾರದ ನಿರ್ದೇಶಕಈಶ್ವರ್, ಒಳಗೊಂಡಂತೆ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.